ದಿನ ಭವಿಷ್ಯ 11-12-2024 ಬುಧವಾರ; ಇಂದಿನ ರಾಶಿಫಲ ಹೀಗಿದೆ

Horoscope Today
Spread the love

ಮೇಷ: ಸಂಪಾದನೆಯೆಲ್ಲವೂ ಎಲ್ಲೋ ಸಿಕ್ಕಿಕೊಂಡು ಕೈಲಿ ಹಣವಿಲ್ಲದಂತೆನಿಸಬಹುದು. ಕಚೇರಿಯಲ್ಲಿ ಸಹದ್ಯೋಗಿಗಳ ಸಹಕಾರ ಸಿಕ್ಕಿ ಕೆಲಸ ಮಾಡಿದ್ದೇ ತಿಳಿಯದೆ ಹೋಗಬಹುದು. ವಾಹನಗಳ ಚಾಲನೆಯಲ್ಲಿ ಎಚ್ಚರ ಅಗತ್ಯ. ಮಕ್ಕಳನ್ನು ಸೃಜನಾತ್ಮಕ ಕಲಿಕೆಯಲ್ಲಿ ತೊಡಗಿಸಿ. ವಿಷ್ಣು ಸ್ಮರಣೆ ಮಾಡಿ.

ವೃಷಭ : ಸಹೋದ್ಯೋಗಿಗಳೊಂದಿಗೆ ಸ್ನೇಹದಿಂದ ವರ್ತಿಸಿ. ಕೆಲಸ ಸುಗಮವಾಗುವುದು. ಜವಾಬ್ದಾರಿಗಳು ಕೊಂಚ ಬದಲಾಗಬಹುದು. ಸಂಗಾತಿಯನ್ನು ಸ್ನೇಹದಿಂದ ನೋಡಿ. ಅಧಿಕಾರಯುತ ವರ್ತನೆಯಿಂದ ಪ್ರೀತಿ ಸಾಧ್ಯವಿಲ್ಲ. ಗುರು ರಾಘವೇಂದ್ರ ಸ್ವಾಮಿ ಶತನಾಮಾವಳಿ ಹೇಳಿಕೊಳ್ಳಿ.

ಮಿಥುನ : ನೂತನ ಗೃಹ, ನಿವೇಶನ ಖರೀದಿ ಪೂರ್ವತಯಾರಿಗಳು ನಡೆಯುವುವು. ದೊಡ್ಡ ಲಾಭಕ್ಕಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಸರ್ಕಾರಿ ವಲಯದ ಕೆಲಸಗಳಲ್ಲಿ ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ.

ಕಟಕ : ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಉದ್ಯಮದ ನಷ್ಟದಿಂದಾಗಿ ಖಿನ್ನತೆ ಆವರಿಸಬಹುದು. ಸಕಾರಾತ್ಮಕ ಚಿಂತನೆ ನಡೆಸಲು ಪ್ರಯತ್ನಿಸಿ. ಸರಿಯಾಗಿ ಯೋಜಿಸದೆ ತೊಡಗಿಸಿದ ಹಣ ಕಳೆದುಕೊಳ್ಳುವ ಸಾಧ್ಯತೆ. ಮಕ್ಕಳ ವಿಷಯದಲ್ಲಿ ಅತಿ ನಾಜೂಕುತನ ಬೇಡ. ಗುರು ರಾಘವೇಂದ್ರ ಸ್ವಾಮಿ ಸ್ಮರಣೆ ಮಾಡಿ.

ಸಿಂಹ : ಬೆನ್ನನೋವು, ಕಾಲುನೋವು ಕಾಡಬಹುದು. ನಿಮ್ಮ ಮನೆಯ ಯೋಜನೆಗಳಿಗೆ ಗೆಳೆಯರ ಸಹಕಾರ ಸಿಕ್ಕುವುದು. ಅದೃಷ್ಟಕ್ಕಾಗಿ ಕಾಯುತ್ತಾ ಕುಳಿತರೆ ಪ್ರಯೋಜನವಿಲ್ಲ. ನಿಮ್ಮ ಬಳಿ ಇರುವುದೆಲ್ಲವೂ ಅದೃಷ್ಟದ ಕಾರಣಕ್ಕಾಗಿಯೇ ಎಂದು ನಂಬಿ ಮುನ್ನಡೆಯಿರಿ. ಕುಟುಂಬ ಸೌಖ್ಯ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ.

ಕನ್ಯಾ : ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಿ. ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ನಿರುದ್ಯೋಗಿಗಳಿಗೆ ಅವಕಾಶಗಳು ಎದುರಾಗುತ್ತವೆ. ಬೃಹಸ್ಪತಿಯ ಸ್ಮರಣೆ ಮಾಡಿ.

ತುಲಾ : ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಸಂತೋಷದ ಅನ್ವೇಷಣೆಯಲ್ಲಿ, ಇಂದು ನಿಮ್ಮ ಕೈಯಲ್ಲಿ ಕೆಲವು ಅನಗತ್ಯ ಖರ್ಚುಗಳು ಇರಬಹುದು. ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ಕುಲ ದೇವರಿಗೆ ತುಪ್ಪದ ದೀಪ ಹಚ್ಚಿ.

ವೃಶ್ಚಿಕ: ಮನಸ್ಸು ಚಂಚಲವಾಗಿರುವುದು. ಆತಂಕಗಳು ಕಾಡುವುವು. ದೃಢ ಮನಸ್ಸಿನಿಂದ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಭವಿಷ್ಯದಲ್ಲಿ ಕಷ್ಟವೆನಿಸುವುದು. ದೂರ ಪ್ರಯಾಣ ಹಿತ ತರುವುದು. ಸ್ನೇಹಿತರಿಂದ ಮನಸ್ಸಿಗೆ ಕೊಂಚ ಸಮಾಧಾನ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ.

ಧನುಸ್ಸು : ಪರೀಕ್ಷೆಗಳಲ್ಲಿ ಭಾಗವಹಿಸಿದವರಿಗೆ ಹಾಗೂ ಸಂದರ್ಶನ ಎದುರಿಸಿದವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳು ಎದುರಾಗಲಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. ಆರೋಗ್ಯ ಸುಧಾರಿಸುವುದು. ಮನೆ ದೇವರ ಸ್ಮರಣೆ ಮಾಡಿ.

ಮಕರ : ಹೊಸ ವ್ಯಕ್ತಿಗಳ ಪರಿಚಯದಿಂದ ಸಂತಸ. ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ಸಾಹ, ಗೌರವ, ಮನ್ನಣೆ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಸ್ವಲ್ಪ ಸೋತು ಗೆಲ್ಲಲು ಪ್ರಯತ್ನಿಸಿ. ಬೆಳ್ಳಿ ಬಂಗಾರ, ಗೃಹಾಲಂಕಾರ ವಸ್ತುಗಳಿಗಾಗಿ ಖರ್ಚು ಹೆಚ್ಚು. ರಾಮ ನಾಮ ಸ್ಮರಣೆ ಮಾಡಿ.

ಕುಂಭ : ವ್ಯಾಪಾರದ ವಿಷಯಗಳಲ್ಲಿ ತುಂಬಾ ಆತುರ ಪಡಬೇಡಿ. ನಿಧಾನವೇ ಪ್ರಧಾನ. ಸಂಕುಚಿತ ಮನೋಭಾವ ತೊರೆಯಲು ಪ್ರಯತ್ನಿಸಿ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯುವ ಪೂರ್ವ ತಯಾರಿಯಲ್ಲಿ ತೊಡಗುವಿರಿ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ.

ಮೀನ : ವ್ಯಾಪಾರ- ವ್ಯವಹಾರದಲ್ಲಿ ಅಭಿವೃದ್ಧಿದಾಯಕ ಆದಾಯ, ಬಹುಕಾಲದಿಂದ ಮನಸ್ಸನ್ನು ಹದಗೆಡಿಸಿದ್ದ ಸಮಸ್ಯೆಗೆ ಪರಿಹಾರ. ಬೆಟ್ಟದಂತೆ ಬಂದ ಕಷ್ಟ ಬೆಣ್ಣೆಯಂತೆ ಕರಗಿ ಹೋಗುವುದು. ಕಚೇರಿಯಲ್ಲಿ ಬಡ್ತಿ ಅವಕಾಶವಿದೆ. ಕೃಷ್ಣನಿಗೆ ತುಳಸಿ ಅರ್ಪಿಸಿ.

Leave a Comment

Leave a Reply

Your email address will not be published. Required fields are marked *

error: Content is protected !!