ʼಜಸ್ಟೀಸ್ ಈಸ್ ಡ್ಯೂʼ ಎಂದು ಬರೆದು ಸಾವಿಗೆ ಶರಣಾದ ಯುವಕ; ಈತನ 12 ಕೊನೆಯ ಆಸೆ, ಈಡೇರಿಸುತ್ತಾ ಈ ಸಮಾಜ?
ನ್ಯೂಸ್ ಆ್ಯರೋ: ಉತ್ತರ ಭಾರತದ 34 ವರ್ಷದ ವ್ಯಕ್ತಿ ಅತುಲ್ ಸುಭಾಷ್ ಆತ್ಮಹತ್ಯೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಅದಕ್ಕೆ ಕಾರಣ ನಮ್ಮ ಸಮಾಜದಲ್ಲಿ ಇರುವ ನ್ಯಾಯ ವ್ಯವಸ್ಥೆ, ಪತ್ನಿ ಹಾಗೂ ಆಕೆಯ ಮನೆಯವರ ಕಿರುಕುಳ. ಎಲ್ಲಕ್ಕಿಂತ ಮುಖ್ಯವಾಗಿ ಮಗನ ಮೇಲೆ ಆತ ಇಟ್ಟಿರುವ ಅದಮ್ಯ ಪ್ರೇಮದ ಬಗ್ಗೆ ಚರ್ಚೆಯಾಗಿದೆ.
ಹೆಂಡತಿ ಕೊಡುತ್ತಿದ್ದ ಮಾನಸಿಕ ಹಿಂಸೆಯಿಂದ ನೊಂದು 24 ಪುಟದ ಡೆತ್ ನೋಟ್ ಬರೆದಿರುವ ಆತ, ಜಸ್ಟೀಸ್ ಈಸ್ ಡ್ಯೂ ಎಂದು ಪೇಪರ್ ಅನ್ನು ಬರೆದು ಅದನ್ನು ತನ್ನ ಟಿ-ಶರ್ಟ್ ಮೇಲೆ ಅಂಟಿಸಿಕೊಂಡು ಸಾವು ಕಂಡಿದ್ದಾನೆ. ಸಾವಿಗೂ ಮುನ್ನ ತನ್ನ ಮನೆಯಲ್ಲಿಯೇ ಒಂದು ಗಂಟೆಗೂ ಹೆಚ್ಚಿನ ಕಾಲ ಆತ ವಿಡಿಯೋ ರೆಕಾರ್ಡ್ ಮಾಡಿದ್ದು, ಎಲ್ಲವನ್ನೂ ಸಂಪೂರ್ಣವಾಗಿ ವಿವರಿಸಿದ್ದಾರೆ. ಸಾವು ಕಂಡಿರುವ ಅತುಲ್ ಸುಭಾಷ್ ಉತ್ತರ ಪ್ರದೇಶ ಮೂಲದವರಾಗಿದ್ದಾರೆ.
ಅತುಲ್ ಸುಭಾಷ್ ಮಗನನ್ನು ಉದ್ದೇಶಿಸಿ ಬರೆದಿರುವ ಸಾಲುಗಳು..: ‘ನನ್ನ ಸಾವಿನೊಂದಿಗೆ ಇನ್ನೂ ಲೂಟಿ ಮಾಡಲು ಹಣ ಸಿಗೋದಿಲ್ಲ. ಈಗ ಅವರೆಲ್ಲರೂ ನನ್ನ ಕೇಸ್‌ನಲ್ಲಿನ ಸತ್ಯವನ್ನು ನೋಡಲು ಆರಂಭ ಮಾಡುತ್ತಾರೆ. ಮುಂದೊಂದು ದಿನ ನೀನು ಕೂಡ ನಿನ್ನ ತಾಯಿಯ ನಿಜವಾದ ಮುಖ ಹಾಗೂ ಅವರ ದುರಾಸೆಯ ಕುಟುಂಬದ ನಿಜವಾದ ಮುಖ ನೋಡಲು ಆರಂಭಿಸುತ್ತೀಯ. ನಿನ್ನ ಆತ್ಮವನ್ನು ಅವರು ಅಷ್ಟು ಬೇಗ ಸಾಯಿಸದೇ ಇರಲಿ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಒಮ್ಮೊಮ್ಮೆ ನಾನು ನಗುತ್ತೇನೆ. ಯಾಕೆಂದರೆ, ನಾನು ಹಣವನ್ನು ಉಳಿಸಲು ಬಯಸುತ್ತಿದ್ದೆ (ಹಣದುಬ್ಬರ ಅಡ್ಜಸ್ಟ್ ಮಾಡಿ) ನೀನು ಕಾಲೇಜಿಗೆ ಕಾರ್‌ನಲ್ಲಿ ಹೋಗಬೇಕು ಎನ್ನುವ ಕಾರಣಕ್ಕೆ. ನಾನೆಷ್ಟು ಸಿಲ್ಲಿ ಅಲ್ವಾ?. ಒಂದು ಮಾತನನ್ನು ನೀನು ನೆನಪಿಟ್ಟುಕೊಳ್ಳಲೇಬೇಕು. ನೀನು ಯಾರಿಗೂ, ಏನನ್ನೂ ಕೊಡಬೇಕಾಗಿಲ್ಲ. ಈ ಸಮಾಜವನ್ನು ನಂಬಬೇಡ. ಈ ವ್ಯವಸ್ಥೆಯನ್ನು ನಂಬಬೇಡ. ಈ ಎರಡೂ ಸಮಾಜ ಹಾಗೂ ವ್ಯವಸ್ಥೆ ನಿನ್ನ ಅನ್ನವನ್ನು ಕಿತ್ತುಕೊಳ್ಳುತ್ತದೆ. ನನ್ನ ರಕ್ತ ನಿನ್ನಲ್ಲಿದ್ದರೆ, ನೀನು ಬದುಕಬೇಕು, ಪ್ರೀತಿಸಬೇಕು ಮತ್ತು ಹೋರಾಡಬೇಕು. ನಿನ್ನ ಹೃದಯಪೂರ್ವಕವಾಗಿ ನಿನ್ನ ಸುಂದರತೆಯನ್ನು ಕಟ್ಟಿಕೊಳ್ಳಬೇಕು. ನಿನ್ನ ತಲೆಯಲ್ಲಿನ ಸಮಸ್ಯೆಯನ್ನು ಧ್ವಂಸ ಮಾಡಬೇಕು. ಹೆಮ್ಮೆ ಹಾಗೂ ಆತ್ಮವಿಶ್ವಾಸದಲ್ಲಿ ನಾನು ಬದುಕಿದಂತೆ ನೀನೂ ಬದುಕಬೇಕು. ಯಾವುದೇ ಕಾರಣಕ್ಕೂ ಸೋಶಿಯಲಿಸ್ಟ್ ಅಥವಾ ಕಮ್ಯೂನಿಸ್ಟ್ ಹುಳುವಾಗಬೇಡ. ಇದೇ ದೊಡ್ಡ ಪ್ರಮಾಣದ ಭ್ರಷ್ಟಾಚಾರ. ಭ್ರಷ್ಟಾಚಾರ ಅನ್ನೋದೇ ಆತ್ಮ. ಗುಡ್ ಬೈ ಸನ್..
ಅತುಲ್ ಸುಭಾಷ್ ಕೊನೆಯ ಆಸೆ:
- ನನ್ನ ಎಲ್ಲಾ ಕೇಸ್‌ನ ವಿಚಾರಣೆ ನೇರಪ್ರಸಾರವಾಗಬೇಕು. ಈ ದೇಶದ ಜನಕ್ಕೆ ನನ್ನ ಕೇಸ್ ಗೊತ್ತಾಗಬೇಕು. ನಮ್ಮ ನ್ಯಾಯ ವ್ಯವಸ್ಥೆಯ ಕೆಟ್ಟ ಸ್ಥಿತಿ, ಮಹಿಳೆಯರು ಈ ವ್ಯವಸ್ಥೆ ಕೆಟ್ಟ ಲಾಭ ಪಡೆದುಕೊಳ್ಳುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಾಗಬೇಕು.
- ನಾನು ಅಪ್‌ಲೋಡ್ ಮಾಡಿರುವ ವಿಡಿಯೋಗಳು ಹಾೂ ಸೂಸೈಡ್ ನೋಟ್‌ಅನ್ನು ನನ್ನ ಹೇಳಿಕೆ ಹಾಗೂ ದಾಖಲೆ ಎನ್ನುವಂತೆ ಪರಿಗಣಿಸಬೇಕು.
- ರಿತಾ ಕೌಶಿಕ್ ಉತ್ತರ ಪ್ರದಶದ ಜಡ್ಜ್. ಸಾಕ್ಷಿಗಳ ಮೇಲೆ ಅವರು ಪ್ರಭಾವ ಬೀರಬಹುದು. ದಾಖಲೆಗಳನ್ನು ಬದಲಾಯಿಸಬಹುದು. ಇದು ನನ್ನ ಕೇಸ್‌ನ ಮೇಲಎ ಪರಿಣಾಮ ಬೀರಬಹುದು.ನನ್ನ ಅನುಭವದ ಆಧಾರದ ಮೇಲೆ, ಉತ್ತರ ಪ್ರದೇಶದ ಕೋರ್ಟ್‌ಗಿಂ ಬೆಂಗಳೂರಿನ ಕೋರ್ಟ್‌ಗಳು ಹೆಚ್ಚು ನ್ಯಾಯದ ಪರವಾಗಿವೆ. ನನ್ನ ಎಲ್ಲಾ ಕೇಸ್‌ಗಳನ್ನು ಕರ್ನಾಟಕದಲ್ಲಿ ನಡೆಸಬೇಕು ಅನ್ನೋದು ಮನವಿ. ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕೆ ಈಕೆಯನ್ನು ವಿಚಾರಣೆ ಮುಗಿಯುವವರೆಗೂ ಬೆಂಗಳೂರಿನಲ್ಲಿಯೇ ಪೊಲೀಸ್ ಹಾಗೂ ನ್ಯಾಯಾಂಗ ಬಂಧನದಲ್ಲಿ ಇಡಬೇಕು. ಇಲ್ಲಿ ಒಂದು ಜಡ್ಜ್‌ಮೆಂಟ್‌ನ ಲಿಂಕ್ ಹಾಕಿದ್ದೇನೆ. ಇದನ್ನೇ ಆಧಾರವಾಗಿ ನ್ಯಾಯ ನೀಡಿ. ಈ ಜಡ್ಜ್‌ಮೆಂಟ್ ಪುರುಷರಿಗೂ ಅನ್ವಯಿಸುತ್ತದೆ ಅನ್ನೋದನ್ನ ನಂಬಿದ್ದೇನೆ.
- ನನ್ನ ಮಗನನನ್ನು ನನ್ನ ತಂದೆ-ತಾಯಿಗಳಿಗೆ ನೀಡಿ. ಉತ್ತಮ ಮೌಲ್ಯವಿರುವ ವ್ಯಕ್ತಿಯಾಗಿ ಅವರು ನನ್ನ ಮಗನನ್ನು ಬೆಳೆಸುತ್ತಾರೆ.
- ನನ್ನ ಮೃತದೇಹದ ಸಮೀಪ ನನ್ನ ಪತ್ನಿ ಹಾಗೂ ಆಕೆಯ ಕುಟುಂಬದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ.
- ನನಗೆ ಕಿರುಕುಳ ನೀಡಿದವರಿಗೆ ಶಿಕ್ಷೆ ಆಗುವವರೆಗೂ ಯಾವುದೇ ಕಾರಣಕ್ಕೂ ನನ್ನ ಅಸ್ತಿ ವಿಸರ್ಜನೆಯನ್ನು ಮಾಡಬೇಡಿ. ಹಾಗೇನಾದರೂ ಕೋರ್ಟ್, ಆ ಭ್ರಷ್ಟ ಜಡ್ಜ್, ನನ್ನ ಪತ್ನಿ ಹಾಗೂ ಆಕೆಯ ಕುಟುಂಬದವರೇನಾದರೂ ನಿರಪರಾಧಿ ಎಂದು ಆದೇಶ ನೀಡಿದಲ್ಲಿ, ಕೋರ್ಟ್‌ನ ಹೊರಗಡೆ ಇರೋ ಚರಂಡಿಯಲ್ಲಿ ನನ್ನ ಅಸ್ತಿಯನ್ನು ಎಸೆಯಿರಿ.
7.ನಮ್ಮ ಕಾನೂನು ವ್ಯವಸ್ಥೆಯನ್ನು ನಾನು ನಂಬೋದಿಲ್ಲವಾದರೂ, ನನಗೆ ಕಿರುಕುಳ ನೀಡಿದವರಿಗೆ ಗರಿಷ್ಠ ಎನ್ನುವ ಶಿಕ್ಷೆ ನೀಡಿ. ನನ್ನ ಪತ್ನಿಯಂಥ ಹೆಂಗಸನ್ನು ಜೈಲಿನ ಕಂಬಿಗಳ ಹಿಂದೆ ಹಾಕದೇ ಇದ್ದರೆ, ಮುಂದೊಂದು ದಿನ ಸಮಾಜದಲ್ಲಿರುವ, ಇನ್ನೂ ಕೆಲವರ ಮಕ್ಕಳ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿ ಬೆಳೆಯಲು ಉತ್ತೇಜನ ನೀಡಿದಂತಾಗುತ್ತದೆ.
8.ನ್ಯಾಯಾಂಗ ವ್ಯವಸ್ಥೆಗೆ ಹೇಳುವುದೇನೆಂದರೆ, ನನ್ನ ಪಾಲಕರು ಹಾಗೂ ನನ್ನ ಸಹೋದರ ಮೇಲೆ ಈ ಸುಳ್ಳು ಕೇಸ್‌ನ ಕಿರುಕುಳವನ್ನು ಬಿಟ್ಟುಬಿಡಿ.
9.ಈ ರಾಕ್ಷಸೀ ವ್ಯಕ್ತಿಗಳ ಜೊತೆ ಯಾವುದೇ ಸಂಧಾನ, ಸೆಟಲ್‌ಮೆಂಟ್ ಅಥವಾ ಮಾತುಕತೆಗಳು ಇರೋದಿಲ್ಲ. ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕಿ.
- ಶಿಕ್ಷೆಯಿಂದ ಪಾರಾಗಲು ಮೈ ವೈಫ್ (ನೈಫ್)ಗೆ ಯಾವುದೇ ಕಾರಣಕ್ಕೂ ಕೇಸ್‌ಅನ್ನು ವಾಪಾಸ್ ಪಡೆದುಕೊಳ್ಳುವ ಅವಕಾಶ ನೀಡಬಾರದು. ಎಲ್ಲಿಯವರೆಗೂ ಎಂದರೆ ಕನಿಷ್ಠ ಆಕೆ ಸಾರ್ವಜನಿಕವಾಗಿ ನಾನು ಹಾಕಿದ್ದು ಸುಳ್ಳು ಕೇಸ್ ಎಂದು ಒಪ್ಪಿಕೊಳ್ಳುವವರೆಗೂ.
- ನನ್ನ ಅಂದಾಜು ಏನೆಂದರೆ, ನನ್ನ ಪತ್ನಿ ಈಗ ನನ್ನ ಮಗನನ್ನು ಕೋರ್ಟ್‌ಗೆ ಕರೆತಂದು ಸಿಂಪತಿ ಗಿಟ್ಟಿಸಿಕೊಳ್ಳಲು ಆರಂಭಿಸುತ್ತಾಳೆ. ಇದನ್ನು ಹಿಂದೆ ಆಕೆ ಮಾಡಿರಲಿಲ್ಲ. ಯಾಕೆಂದರೆ, ನಾನು ಮಗನನ್ನು ನೋಡಲೇಬಾರದು ಅನ್ನೋದು ಆಕೆಯ ಇಂಗಿತವಾಗಿತ್ತು. ಕೋರ್ಟ್ ಈ ಡ್ರಾಮಾಗೆ ಅವಕಾಶ ನೀಡಬಾರದು ಎಂದು ನಾನು ಮನವಿ ಮಾಡುತ್ತೇನೆ.
12.ಹಾಗೇನಾದರೂ ನನ್ನ ಪತ್ನಿಯ ಕುಟುಂಬದಿಂದ ಕಿರುಕುಳ ಹಾಗೂ ಸುಲಿಗೆ ಮುಂದುವರಿದಲ್ಲಿ ನನ್ನ ವೃದ್ಧ ಪೋಷಕರು ದಯಾಮರಣ ಪಡೆಯಲು ಕೋರ್ಟ್‌ಗೆ ಮನವಿ ಮಾಡಬೇಕು. ಈ ದೇಶದ ಎಲ್ಲಾ ಪೋಷಕರು ಹಾಗೂ ಗಂಡಂದಿರರನ್ನು ಸಾಯಿಸುವ ಮೂಲಕ ದೇಶದ ನ್ಯಾಯ ವ್ಯವಸ್ಥೆಯಲ್ಲಿ ಕಪ್ಪು ಯುಗವನ್ನು ಸೃಷ್ಟಿಸಬೇಕು.
ಎಂದು ಅತುಲ್ ಸುಭಾಷ್ ಕೊನೆಯದಾಗಿ ಬರೆದುಕೊಂಡಿದ್ದಾರೆ.
Leave a Comment