ವಾಲ್‌ಮಾರ್ಟ್ ನಲ್ಲಿ ಗಣೇಶನ ಚಿತ್ರವಿರುವ ಬಿಕಿನಿ ಮತ್ತು ಚಪ್ಪಲಿ; ಆಕ್ರೋಶಕ್ಕೆ ಕಾರಣವಾದ ವೈರಲ್‌ ಪೋಸ್ಟ್‌

Walmark
Spread the love

ನ್ಯೂಸ್ ಆ್ಯರೋ: ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ವಾಲ್‌ಮಾರ್ಟ್‌ ಸಂಸ್ಥೆಯ ಒಂದು ದೊಡ್ಡ ಎಡವಟ್ಟು ಇದೀಗ ಸೋಶಿಯಲ್​​ ಮೀಡಿಯಾಗಳಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ಧರ್ಮದಲ್ಲಿ ಪೂಜಿಸಲಾಗುವ ಗಣೇಶನ ಫೋಟೋ ಬಳಸಿ ವಾಲ್‌ಮಾರ್ಟ್ ಸಂಸ್ಥೆ ವಿವಿಧ ವಿನ್ಯಾಸ ಒಳಉಡುಪು ಹಾಗೂ ಚಪ್ಪಲಿಗಳನ್ನು ತಯಾರಿಸಿ ತನ್ನ ಆನ್ಲೈನ್​​ ಮಾರುಕಟ್ಟೆಯಲ್ಲಿ ಮಾರಾಟ ಶುರು ಮಾಡಿತ್ತು.

ಗಣಪತಿ ದೇವರ ಫೋಟೋಗಳನ್ನು ಇಷ್ಟು ಕೀಳು ಮಟ್ಟದಲ್ಲಿ ಉಪಯೋಗಿಸಿರುವ ವಾಲ್‌ಮಾರ್ಟ್ ಸಂಸ್ಥೆಯ ವಿರುದ್ದ ಭಾರತ ಹಾಗೂ ಅಮೆರಿಕದಲ್ಲಿರುವ ಹಿಂದುಗಳು ಪ್ರತಿಭಟನೆ ನಡೆಸಿದ್ದು, ಬಾಯ್ಕಾಟ್‌ ವಾಲ್‌ಮಾರ್ಟ್‌ ಎನ್ನುವ ಅಭಿಯಾನವನ್ನೂ ಶುರು ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ವಾಲ್‌ಮಾರ್ಟ್‌ ಆ ಎಲ್ಲಾ ಉಡುಪುಗಳ ಮಾರಾಟವನ್ನು ತನ್ನ ಆನ್ಲೈನ್​​ ಮಾರುಕಟ್ಟೆಯಿಂದ ತೆಗೆದುಹಾಕಿ ಕ್ಷಮಾಪಣೆಯ ಕೇಳಿದೆ ಎಂದು ಹಿಂದೂ ಧರ್ಮದ ಯುನಿವರ್ಸಲ್ ಸೊಸೈಟಿಯ ಅಧ್ಯಕ್ಷರಾದ ರಾಜನ್ ಜೆಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಡಿಸೆಂಬರ್​ ಪ್ರಾರಂಭದಲ್ಲಿ ಗಣೇಶನ ಚಿತ್ರವನ್ನು ಹೊಂದಿರುವ ಬರೋಬ್ಬರಿ 74 ರೀತಿಯ ಒಳ ಉಡುಪುಗಳನ್ನು ವಾಲ್‌ಮಾರ್ಟ್‌ ತನ್ನ ಆನ್ಲೈನ್​​ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿತ್ತು. ಈ ಕುರಿತು @ssaratht ಎಂಬ ಟ್ವಿಟರ್​ ಖಾತೆಯಲ್ಲಿ ಡಿಸೆಂಬರ್​ 6ರಂದು ಪೋಸ್ಟ್​​ ವೈರಲ್​ ಆಗಿತ್ತು.

ಡಿಸೆಂಬರ್​ 6ರಂದು ಹಂಚಿಕೊಂಡಿರುವ ಈ ಫೋಸ್ಟ್​ ಇದೀಗಾಗಲೇ ಮಿಲಿಯನ್ ಅಂದರೆ 10ಲಕ್ಷಕ್ಕೂ ಅಧಿಕ​ ನೆಟ್ಟಿಗರನ್ನು ತಲುಪಿದೆ. ಹಿಂದೂ ಧರ್ಮಕ್ಕೆ ದಕ್ಕೆ ತಂದಿರುವ ವಾಲ್‌ಮಾರ್ಟ್ ಸಂಸ್ಥೆಯ ವಿರುದ್ದ ಸಾಕಷ್ಟು ನೆಟ್ಟಿಗರಯ ಬಾಯ್ಕಾಟ್‌ ವಾಲ್‌ಮಾರ್ಟ್‌ ಎನ್ನುವ ಅಭಿಯಾನ ಶುರು ಮಾಡಿದ್ದಾರೆ. ಸದ್ಯ ವಾಲ್‌ಮಾರ್ಟ್ ತನ್ನ ಎಡವಟ್ಟಿಗೆ ಕ್ಷಮೆಯಾಚಿಸಿದೆ.

Leave a Comment

Leave a Reply

Your email address will not be published. Required fields are marked *

error: Content is protected !!