ನಿಮ್ಮ ಕನಸಿನಲ್ಲಿ ದೆವ್ವ-ಭೂತಗಳು ಕಾಣಿಸಿತಾ?; ಹಾಗಾದರೆ ಇದರ ಅರ್ಥವೇನು ಗೊತ್ತಾ?

Ghost Dream
Spread the love

ಕನಸುಗಳು ಎಲ್ಲರಿಗೂ ಬೀಳುತ್ತದೆ. ಅವುಗಳು ನಮ್ಮ ಜೀವನದ ಭಾಗವಾಗಿದೆ, ಕನಸು ಬಿದ್ದರೆ ಅದನ್ನ ನೆನಪು ಮಾಡಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಆದರೆ ಇನ್ನೂ ಕೆಲ ಕನಸುಗಳು ನಮ್ಮನ್ನ ಬೆಚ್ಚಿ ಬೀಳಿಸುತ್ತದೆ.

ಕೆಲವು ಕನಸುಗಳು ನಮ್ಮ ನಿಜ ಜೀವನದಲ್ಲಿ ಅದೇ ಅರ್ಥವನ್ನು ಹೊಂದಿರುವುದಿಲ್ಲ. ಕನಸಿನಲ್ಲಿ ಕಾಣುವ ಘಟನೆಗಳು ವಿವಿಧ ರೀತಿಯಲ್ಲಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಕನಸಿನಲ್ಲಿ ದೆವ್ವ ಮತ್ತು ಆತ್ಮಗಳನ್ನು ನೋಡುವುದರ ಹಿಂದೆ ಸಹ ಅರ್ಥವಿದೆ.
ಕನಸಿನ ವಿಜ್ಞಾನದ ಪ್ರಕಾರ, ನಿಮ್ಮ ಕನಸಿನಲ್ಲಿ ದುಷ್ಟಶಕ್ತಿಗಳನ್ನು ಅಂದರೆ ದೆವ್ವ ಹಾಗೂ ಭೂತವನ್ನ ಕಂಡರೆ, ಅದು ಕೆಟ್ಟ ಸಂಕೇತ ಎನ್ನಲಾಗುತ್ತದೆ. ಇದರಿಂದ ನೀವು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳನ್ನ ಅದರಲ್ಲೂ ಹಣಕಾಸಿನ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಪರಿಚಿತ, ಬಂಧು, ಮಿತ್ರ ಮುಂತಾದವರ ದೆವ್ವ ಅಥವಾ ಪ್ರೇತವನ್ನು ನೋಡುವುದು ಬಹಳ ಕಷ್ಟಗಳನ್ನ ಹೆಚ್ಚು ಮಾಡುತ್ತದೆ. ಹಾಗೆಯೇ, ನೀವು ನಿಮ್ಮ ಕನಸಿನಲ್ಲಿ ಆತ್ಮ ಅಥವಾ ಪ್ರೇತದೊಂದಿಗೆ ಮಾತನಾಡುವುದನ್ನು ಅಶುಭ ಎನ್ನಲಾಗುತ್ತದೆ.
ನಿಮ್ಮ ಕನಸಿನಲ್ಲಿ ಸತ್ತ ದಂಪತಿಗಳು ಅಥವಾ ಪುರುಷ ಅಥವಾ ಮಹಿಳೆಯ ಆತ್ಮವನ್ನು ನೀವು ನೋಡಿದರೆ, ಈ ಕನಸು ತುಂಬಾ ಮಂಗಳಕರ ಎನ್ನುತ್ತಾದೆ ಕನಸಿನ ವಿಜ್ಞಾನ. ಇದರಿಂದ ನಿಮಗೆ ಆರ್ಥಿಕವಾಗಿ ಸಹ ಲಾಭವಾಗುತ್ತದೆ ಹಾಗೂ ನಿಮ್ಮ ಕನಸುಗಳು ನನಸಾಗುತ್ತದೆ.

ಕನಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನ ನೋಡುವುದು ಅಶುಭ ಸಂಕೇತ ಎನ್ನಲಾಗುತ್ತದೆ. ಇದರರ್ಥ ನಿಮ್ಮ ಕೆಲಸದಲ್ಲಿ ಸಮಸ್ಯೆಗಳಾಗಬಹುದು. ಅಲ್ಲದೇ ಇದರಿಂದ ನಿಮಗೆ ಆರ್ಥಿಕವಾಗಿ ಸಹ ಸಮಸ್ಯೆಗಳಾಗಬಹುದು.

ನಿಮ್ಮ ಕನಸಿನಲ್ಲಿ ನಿಮ್ಮ ಪಕ್ಕದಲ್ಲಿ ಒಂದು ಆತ್ಮವನ್ನು ನೋಡಿದರೆ, ಅದು ಒಳ್ಳೆಯ ಕನಸು ಎನ್ನಲಾಗುತ್ತದೆ. ನಿಮ್ಮ ಕೆಲವು ಆಸೆಗಳು ಈಡೇರುವ ಸಾಧತೆ ಇದೆ ಎಂದರ್ಥ. ನೀವು ಆರ್ಥಿಕ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.

Leave a Comment

Leave a Reply

Your email address will not be published. Required fields are marked *

error: Content is protected !!