ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಪುಷ್ಪಾ-2 ಸಿನಿಮಾ; ಆದರೆ ಪೈರಸಿ ಬಲೆಗೆ ಬಿದ್ದ ಪುಷ್ಪರಾಜ್
ನ್ಯೂಸ್ ಆ್ಯರೋ: ಅಲ್ಲು ಅರ್ಜುನ್ ಬಹು ನಿರೀಕ್ಷಿತ ಸಿನಿಮಾ ಪುಷ್ಪಾ 2 ರಿಲೀಸ್ ಆಗಿ ದೊಡ್ಡ ಹವಾ ಕ್ರಿಯೇಟ್ ಮಾಡ್ತಿದೆ. ಡಿಸೆಂಬರ್ 5 ರಂದು ಅಂದ್ರೆ ಇಂದು ತೆರೆ ಕಂಡ ಸಿನಿಮಾ ವಿಶ್ವದಾದ್ಯಂತ ಭಾರೀ ಓಪನಿಂಗ್ ಪಡೆದುಕೊಂಡಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮತ್ತು ಫಹಾದ್ ಫಾಸೀಲ್ ಕೂಡ ನಟನೆ ಮಾಡಿದ್ದಾರೆ. ಸದ್ಯ ಭರ್ಜರಿ ಓಪನಿಂಗ್ನಿಂದಾಗಿ ಚಿತ್ರತಂಡ ಖುಷಿಯಲ್ಲಿ ಇದ್ರೆ ಮತ್ತೊಂದು ಕಡೆ ಸಿನಿಮಾದ ವಿಡಿಯೋ ಸೋರಿಕೆಯಾದ ಆಘಾತ ಕಾಡುತ್ತಿದೆ.
ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಪುಷ್ಪಾ 2 ಸಿನಿಮಾದ ವಿಡಿಯೋ ಆನ್ಲೈನ್ನಲ್ಲಿ ಲೀಕ್ ಆಗಿ ಪೈರಸಿ ಆಗಿದೆ ಎಂದು ಹೇಳಲಾಗುತ್ತಿದೆ. ಕಾನೂನು ಬಾಹಿರಾಗಿ ಚಟುವಟಿಕೆಯಲ್ಲಿರುವ ವೆಬ್ಸೈಟ್ಗಳಾದ ಇಬೊಮ್ಮಾ, ಮೋವಿರೂಲ್ಜ್, ತಮಿಳುರಾಕರ್ಸ್, ಫಿಲ್ಮಿಜಿಲ್ಲಾ, ತಮಿಳುಯೋಗಿ, ತಮಿಳುಬ್ಲಾಸ್ಟರ್ಸ್, ಬಾಲಿ4ಯು, ಜೈಶ್ ಮೋವಿಸ್, 9ಎಕ್ಸ್ಮುವಿಸ್ ಮತ್ತು ಮೂವಿಎಸ್ಡಿಎನಲ್ಲಿ ಪೈರೆಟೆಡ್ ವರ್ಷನ್ ಮೂವಿ ಎಲ್ಲ ಕೈಗೂ ಸಿಗುತ್ತಿದೆ ಎಂಬ ಮಾಹಿತಿಗಳು ಆಚೆ ಬರುತ್ತಿವೆ. ಅದರಲ್ಲೂ 1080ಪಿಕ್ಸಲ್, 720ಪಿಕ್ಸಲ್, 480ಪಿಕ್ಸಲ್, 360 ಹಾಗೂ ಹೆಚ್ಡಿ ಕ್ವಾಲಿಟಿಯ ವಿಡಿಯೋನೇ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಪುಷ್ಪಾ 2 ಸಿನಿಮಾಗಾಗಿ ವೆಬ್ಸೈಟ್ನಲ್ಲಿ ಹುಡುಕಾಟವು ಕೂಡ ಜೋರಾಗಿದೆ. ಪುಷ್ಪಾ2 ಡೌನ್ಲೊಡ್, ಪುಷ್ಪಾ2 ದಿ ರೂಲ್ ಮೂವಿ ಹೆಚ್ಡಿ ಡೌನ್ಲೊಡ್, ಪುಷ್ಪಾ2ದಿರೂಲ್ ತಮಿಳುರಾಕರ್ಸ್, ಪುಷ್ಪಾ2 ಫಿಲ್ಮಿಜಿಲ್ಲಾ ಹೀಗೆ ಹಲವು ರೀತಿಯಲ್ಲಿ ಪುಷ್ಪಾ 2 ಸಿನಿಮಾದ ಪೈರೆಟೆಡ್ ಮೂವಿಯನ್ನು ಆನ್ಲೈನ್ನಲ್ಲಿ ಜನರು ಹುಡುಕಾಟ ನಡೆಸುತ್ತಿದ್ದಾರೆ.
ಪುಷ್ಪಾ 2 ಸಿನಿಮಾದ ವಿಡಿಯೋ ಲೀಕ್ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ಆಘಾತ ತಂದಿದೆ. ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಕೂಡ ಅಂದಾಜಿಸಲಾಗುತ್ತಿದೆ. 2021ರಲ್ಲಿ ಸಕ್ಸಸ್ ಕಂಡಿದ್ದ ಪುಷ್ಪಾ ಸಿನಿಮಾದ ಸಿಕ್ವೇಲ್ ಆಗಿದ್ದ ಈ ಸಿನಿಮಾ ಮುಂಬರುವ ದಿನಗಳಲ್ಲಿ ಕಮರ್ಷಿಯಲ್ ಹಿಟ್ ಎನ್ನಿಸಿಕೊಳ್ಳುವಲ್ಲಿ ಎಡುವುತ್ತಾ ಅನ್ನೋ ಆತಂಕಗಳು ಸಿನಿಮಾ ತಂಡವನ್ನು ಸದ್ಯ ಕಾಡುತ್ತಿದೆ.
Leave a Comment