ವಿದ್ಯಾರ್ಥಿಗಳಿಂದ ಮಾನವೀಯ ಕಾರ್ಯ; ದೇಣಿಗೆ ಸಂಗ್ರಹಿಸಿ ಪ್ರಾಣಿಗಳ ದತ್ತು ಸ್ವೀಕಾರ
ನ್ಯೂಸ್ ಆ್ಯರೋ: ಬೆಂಗಳೂರಿನ ಡ್ಯಾಫೋಡಿಲ್ ಆಂಗ್ಲ ಶಾಲೆ ವಿದ್ಯಾರ್ಥಿಗಳು ಹಲವು ಜನರಿಗೆ ಮಾದರಿಯಾಗುವಂತ ಕೆಲಸ ಮಾಡಿದ್ದಾರೆ. ದೇಳಿಗೆ ಸಂಗ್ರಹಿಸಿ ಆ ಹಣವನ್ನು ಪ್ರಾಣಿಗಳ ಉಳಿವಿಗಾಗಿ ಮೀಸಲಿಡುವ ಮೂಲಕ ಮಾನವೀಯ ಕಾರ್ಯಕ್ಕೆ ವಿದ್ಯಾರ್ಥಿಗಳು ಮುನ್ನುಡಿ ಬರೆದಿದ್ದಾರೆ.
ಡ್ಯಾಫೋಡಿಲ್ ಆಂಗ್ಲ ಶಾಲೆ ವಿದ್ಯಾರ್ಥಿಗಳಿಂದ ಸುಮಾರು 3.15 ಲಕ್ಷ ರೂಪಾಯಿ ಹಣವನ್ನು ದೇಣಿಗೆ ಮೂಲಕ ಸಂಗ್ರಹಿಸಿದ್ದಾರೆ. ಈ ಹಣವನ್ನು ಪ್ರಾಣಿಗಳಿಗೆ ಮೀಸಲಿಟ್ಟಿದ್ದು, ಅಳಿವಿನಂಚಿನಲ್ಲಿರವ ಪ್ರಾಣಿಗಳನ್ನು ವಿದ್ಯಾರ್ಥಿಗಳು ದತ್ತು ಪಡೆದಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರವ ವಿವಿಧ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ ವಿದ್ಯಾರ್ಥಿಗಳು, ಅವುಗಳ ಪೋಷಣೆಗೆ ಹಣವನ್ನು ಮೀಸಲಿಟ್ಟಿದ್ದಾರೆ.
ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಮತ್ತು ಪೋಷಕರು ಒಗ್ಗೂಡಿ 3.15 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ. ಬದುಕಿ ಮತ್ತು ಬದುಕಲು ಬಿಡಿ’ ಧೈಯ ವಾಕ್ಯದಡಿ ಪ್ರಾಣಿಗಳನ್ನು ದತ್ತು ಪಡೆದು ಅವುಗಳ ಆರೈಕೆಗೆ ಜೊತೆಯಾಗಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನದ ಕಪ್ಪು ಕರಡಿ, ಗರಿಯಲ್ (ಉದ್ದನೆ ಬಾಯಿಯ ಮೊಸಳೆ) ಅನ್ನು ಡ್ಯಾಫೋಡಿಲ್ ಆಂಗ್ಲ ಶಾಲೆ ವಿದ್ಯಾರ್ಥಿಗಳು ಎರಡು ವರ್ಷಗಳ ವರೆಗೆ ದತ್ತು ಪಡೆದಿದ್ದಾರೆ.
ಅಲ್ಲದೆ ಮುಳ್ಳುಹಂದಿಯನ್ನು ಒಂದು ವರ್ಷದ ಅವಧಿಗೆ ವಿದ್ಯಾರ್ಥಿಗಳು ದತ್ತು ಸ್ವೀಕಾರ ಮಾಡಿದ್ದಾರೆ. ವಿವಿಧ ಕಡೆ ದೇಣಿಗೆ ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಅವರ ಪೋಷಕರು ಕೂಡ ಸಾಥ್ ನೀಡಿದ್ದಾರೆ.
Leave a Comment