ಚಿನ್ನಕ್ಕಿಂತಲೂ ದುಬಾರಿಯಂತೆ ಈ ಗುಂಪಿನ ರಕ್ತ; ಈ ಬ್ಲಡ್ ಇರೋರು ಜಗತ್ತಲ್ಲೇ 45 ಜನರಂತೆ!

Golden Blood
Spread the love

ನ್ಯೂಸ್ ಆ್ಯರೋ: ಪ್ರತಿಯೊಬ್ಬರ ದೇಹಕ್ಕೆ ರಕ್ತ ಎಷ್ಟು ಮುಖ್ಯ ಎಂದು ಎಲ್ಲರಿಗೂ ಗೊತ್ತು. ರಕ್ತದಾನವನ್ನು ಜೀವನದ ಉಡುಗೊರೆ ಎಂದು ಕರೆಯಲಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ವ್ಯಕ್ತಿಯು ರಕ್ತದ ಗುಂಪನ್ನು ಹೊಂದಿರುತ್ತಾನೆ. ನೀವು ಎ, ಬಿ, ಎಬಿ ಮತ್ತು ಒ ಪಾಸಿಟಿವ್ ನೆಗೆಟಿವ್ ರಕ್ತದ ಗುಂಪುಗಳ ಬಗ್ಗೆ ಕೇಳಿರಬಹುದು. ಆದರೆ ಇದನ್ನೆಲ್ಲ ಹೊರತು ಪಡಿಸಿ ಜಗತ್ತಿನಲ್ಲಿ ಮತ್ತೊಂದು ರಕ್ತದ ಗುಂಪು ಇದೆ.!

ಈ ರಕ್ತ ಜಗತ್ತಿನಲ್ಲಿ ಕೇವಲ 45 ಜನರಿಗೆ ಮಾತ್ರ ಇದೆ. ಇನ್ನು ಈ ರಕ್ತದ ಗುಂಪನ್ನು ಗೋಲ್ಡನ್ ಬ್ಲಡ್ ಗ್ರೂಪ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಾನವರಲ್ಲಿ ಎಂಟು ರೀತಿಯ ರಕ್ತದ ಗುಂಪುಗಳು ಕಂಡುಬರುತ್ತವೆ: ಎ, ಬಿ, ಎಬಿ, ಒ ಪಾಸಿಟಿವ್ ಮತ್ತು ನೆಗೆಟಿವ್‌. ಆದರೆ ಅನೇಕ ಜನರಿಗೆ ಹೆಚ್ಚು ತಿಳಿಯದ ಒಂದು ರಕ್ತದ ಗುಂಪು ಇದೆ. ಆ ರಕ್ತದ ಗುಂಪಿನ ಹೆಸರು ಆರ್ಎಚ್ ಬ್ಲಡ್ ಗ್ರೂಪ್.

ಈ ರಕ್ತದ ಗುಂಪನ್ನು ಗೋಲ್ಡನ್ ಬ್ಲಡ್ ಎಂದೂ ಕರೆಯಲಾಗುತ್ತದೆ. ಈ ರಕ್ತದ ಗುಂಪು ತುಂಬಾ ವಿರಳವಾಗಿರುವುದರಿಂದ ಇದನ್ನು ಗೋಲ್ಡನ್ ಬ್ಲಡ್ ಎಂದು ಹೇಳಲಾಗುತ್ತದೆ. ಈ ರಕ್ತವು ಬಹಳ ಮೌಲ್ಯಯುತವಾಗಿದೆ. ಏಕೆಂದರೆ ಇದು ಯಾವುದೇ ರಕ್ತದ ಗುಂಪಿನ ಯಾವುದೇ ವ್ಯಕ್ತಿಗೆ ನೀಡಬಹುದು. ಈ ರಕ್ತವು ತಮ್ಮ ದೇಹದಲ್ಲಿ ಶೂನ್ಯ ಆರ್ಎಚ್ ಅಂಶವನ್ನು ಹೊಂದಿರುವ ಜನರಲ್ಲಿ ಮಾತ್ರ ಕಂಡುಬರುತ್ತದೆ.

ಗೋಲ್ಡನ್ ಬ್ಲಡ್ ಗ್ರೂಪ್ ಅನ್ನು 1960 ರಲ್ಲಿ ಕಂಡುಹಿಡಿಯಲಾಗಿದೆ. ಆರ್ಎಚ್ ರಕ್ತದಲ್ಲಿ ಕಂಡುಬರುವ ವಿಶೇಷ ಪ್ರೋಟೀನ್ ಆಗಿದೆ. ಈ ಪ್ರೋಟೀನ್ ಗಳು ರಕ್ತದ ಗುಂಪಿನಲ್ಲಿ ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತವೆ. ಆರ್ಎಚ್ ರಕ್ತದ ಗುಂಪುಗಳು ಪ್ರತಿಜನಕಗಳನ್ನು ಹೊಂದಿರುವುದಿಲ್ಲ, ಮತ್ತು ಅಂತಹ ರಕ್ತದ ಗುಂಪುಗಳಲ್ಲಿನ ವ್ಯಕ್ತಿಗಳು ಹೆಚ್ಚಾಗಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ.

Leave a Comment

Leave a Reply

Your email address will not be published. Required fields are marked *

error: Content is protected !!