ಬದುಕಿನ ಹೊಸ ಪಯಣಕ್ಕೆ ಸಿದ್ಧರಾದ ಪಿವಿ ಸಿಂಧು; ಮದುವೆಗೆ ದಿನಾಂಕ ನಿಗದಿ, ಹುಡುಗ ಯಾರು?

PV Sindhu
Spread the love

ನ್ಯೂಸ್ ಆ್ಯರೋ: ಒಲಿಂಪಿಕ್ಸ್ ಪದಕಗಳ ಗೆದ್ದಿರುವ ಪಿವಿ ಸಿಂಧು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಡಿಸೆಂಬರ್ 22 ರಂದು ಸಂಪ್ರದಾಯದಂತೆ ರಾಜಸ್ಥಾನದ ‘ಲೇಕ್ ಸಿಟಿ’ಯಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 20 ರಿಂದ ವಿವಾಹ ಕಾರ್ಯಕ್ರಮಗಳು ನಡೆಯಲಿವೆ.

ಸಿಂಧು ಅವರ ತಂದೆ ಪಿವಿ ರಾಮಣ್ಣ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸಿಂಧು ಮದುವೆ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಸಿಂಧು ಮದುವೆ ಆಗ್ತಿರುವ ಹುಡುಗನ ಹೆಸರು ವೆಂಕಟ ದತ್ತ ಸಾಯಿ. ಇವರು ಕೂಡ ಮೂಲತಃ ಹೈದರಾಬಾದ್​ನವರು. ಉದ್ಯಮಿಯಾಗಿರುವ ವೆಂಕಟ ದತ್ತ ಸಾಯಿ, ಸದ್ಯ Posidex Technologies ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಲಿಬರಲ್ ಸ್ಟಡೀಸ್​ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. Flame Universityಯಲ್ಲಿ ಬಿಬಿಎ ಅಕೌಂಟಿಂಗ್ ಮತ್ತು ಫಿನಾನ್ಸ್​​ ಪದವಿ ಮುಗಿಸಿದ್ದಾರೆ. ಬೆಂಗಳೂರಿನ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಷನ್ ಟೆಕ್ನೊಲಜಿ ಸಂಸ್ಥೆಯಲ್ಲಿ ಸೈನ್ಸ್ ಅಂಡ್ ಮಷಿನ್ ಲರ್ನಿಂಗ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.

ಪಿವಿ ಸಿಂಧು ಭಾರತದ ಜನಪ್ರಿಯ ಕ್ರೀಡಾಪಟು. ಬ್ಯಾಡ್ಮಿಂಟನ್‌ನಲ್ಲಿ ಅವರು ಮಾಡಿರುವ ಸಾಧನೆ ದೇಶಕ್ಕೆ ಹೆಮ್ಮೆ ಇದೆ. ಒಲಿಂಪಿಕ್ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಗೌರವ ಹೆಚ್ಚಿಸಿದ ಸಾಧಕಿ ಪಿವಿ ಸಿಂಧು.

Leave a Comment

Leave a Reply

Your email address will not be published. Required fields are marked *

error: Content is protected !!