ಇದ್ದಕ್ಕಿದ್ದಂತೆ ಬಾಯಿ ಏಕೆ ಕಹಿಯಾಗುತ್ತೆ ಗೊತ್ತಾ?; ಈ ಸಮಸ್ಯೆಗೆ ಪರಿಹಾರಗಳು ಏನು ತಿಳಿಯಿರಿ

Bitter Taste in Mouth
Spread the love

ನ್ಯೂಸ್ ಆ್ಯರೋ: ನೀವು ಕೆಲವೊಮ್ಮೆ ಗಮನಿಸಿರಬಹುದು. ನಿಮ್ಮ ಬಾಯಿ ಇದ್ದಕ್ಕಿದ್ದಂತೆ ಕಹಿಯಾದಂತೆ ಕಂಡುಬರುತ್ತದೆ. ಈ ಸಂದರ್ಭದಲ್ಲಿ ನೀವು ಏನೇ ತಿಂದರೂ ಅದು ರುಚಿಸುವುದಿಲ್ಲ. ಬಾಯಿಯ ಇಂತಹ ಅಸಹಜತೆಗೆ ನಮ್ಮದೇ ಆದ ಕೆಲವು ಕಾರಣಗಳು ಇರುತ್ತವೆ. ಬೇರೆ ಬೇರೆ ಹಲವು ಕಾರಣಗಳಿಂದ ಬಾಯಿ ಕಹಿಯಾಗಿ ರೂಪುಗೊಳ್ಳುತ್ತೆ. ಸರಳವಾದ ಜೀವನ ಶೈಲಿಯ ಅಭ್ಯಾಸ ಗಳಿಂದ ಹಿಡಿದು ಕೆಲವೊಂದು ಆರೋಗ್ಯ ಸಮಸ್ಯೆಗಳು ಇದಕ್ಕೆ ಪ್ರಮುಖ ಕಾರಣವಾಗುತ್ತದೆ.

ಒಂದು ವೇಳೆ ನಿಮ್ಮ ಬಾಯಿ ಕಹಿಯಾಗಿದ್ದರೆ ಅದನ್ನು ಕಡೆಗಣಿಸಬೇಡಿ. ಏಕೆಂದರೆ ಇದು ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣ ಆಗಿದ್ದರೂ ಆಗಿರಬಹುದು.

ಆರೋಗ್ಯ ತಜ್ಞರು ಹೇಳುವಂತೆ ಒಬ್ಬ ವ್ಯಕ್ತಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬ್ರಷ್ ಮಾಡಬೇಕು. ಇಲ್ಲದಿದ್ದರೆ ಹಲ್ಲು ಮತ್ತು ನಾಲಿಗೆಯ ಆರೋಗ್ಯ ಹದಗೆಡುತ್ತದೆ. ಬಾಯಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಉಂಟಾಗಿ ಅದು ಬಾಯಿ ದುರ್ವಾಸನೆ ಬರುವಂತೆ ಮಾಡುತ್ತದೆ ಮತ್ತು ಕ್ರಮೇಣವಾಗಿ ಬಾಯಿ ಕಹಿಯಾಗುವಂತೆ ಕೂಡ ಮಾಡುತ್ತದೆ. ಬಾಯಿಯ ಸ್ವಚ್ಛತೆ ಇಲ್ಲದಿದ್ದರೆ ವಸಡುಗಳ ಕಾಯಿಲೆ ಕಾಣಿಸುತ್ತದೆ.

ನೀವು ತೆಗೆದುಕೊಳ್ಳುವ ಆಂಟಿ ಬಯೋಟಿಕ್ ಔಷಧಿಗಳು, ಬಿಪಿ ಮಾತ್ರೆಗಳು, ಇನ್ನು ಕೆಲವು ವಿಟಮಿನ್ ಹಾಗೂ ಪೂರಕಗಳು ಬಾಯಿಯ ರುಚಿ ಹದಗೆಡುವಂತೆ ಮಾಡುತ್ತವೆ. ಅದಕ್ಕೆ ನೀವು ಮಾತ್ರೆ ತಿಂದಾಗ ಬಾಯಿ ಕಹಿಯಾಗುವುದು.

ಬಾಯಲ್ಲಿ ಉಂಟಾಗುವ ಫಂಗಸ್ ಸೋಂಕು, ಅತಿಯಾಗಿ ಬೆಳೆದ ಫಂಗಸ್, ನಾಲಿಗೆಯ ಮೇಲೆ ಅಲ್ಲಲ್ಲಿ ಮಚ್ಚೆಗಳನ್ನು ಉಂಟು ಮಾಡುವುದರ ಜೊತೆಗೆ ಬಾಯಿ ದುರ್ವಾಸನೆ ಕೂಡ ಬೀರುವಂತೆ ಮಾಡುತ್ತದೆ ಮತ್ತು ಇದು ಬಾಯಿಯ ರುಚಿಯನ್ನು ಹೊರಟು ಹೋಗುವಂತೆ ಮಾಡುತ್ತದೆ.

ಕೆಲವರಿಗೆ ಉಂಟಾಗಿರುವ ಮೆದುಳಿನ ಟ್ಯೂಮರ್ ಮತ್ತು ಇನ್ನಿತರ ಸಮಸ್ಯೆಗಳಿಂದ ಬಾಯಿಯಲ್ಲಿ ಕಹಿ ಅನುಭವ ಉಂಟಾಗುತ್ತದೆ. ಇದು ದಿನ ಕಳೆದಂತೆ ಬಾಯಿಯ ರುಚಿಯನ್ನೇ ಬದಲಾಯಿಸಿ ಬಿಡುತ್ತದೆ ಮತ್ತು ತಿಂದಂತಹ ಯಾವುದೇ ಆಹಾರ ಕೂಡ ಬಾಯಿಗೆ ಅಷ್ಟು ರುಚಿ ಕೊಡುವುದಿಲ್ಲ.

ಬಾಯಿಯ ಕಹಿ ಅನುಭವವನ್ನು ಹೋಗಲಾಡಿಸಿಕೊಳ್ಳುವುದು ಹೇಗೆ?

ನಿರ್ಜಲೀಕರಣ ಮಾಡಿಕೊಳ್ಳದಂತೆ ಆರೋಗ್ಯಕರ ಪಾನಿಯಗಳನ್ನು, ನೀರು, ಎಳನೀರು, ನಿಂಬೆಹಣ್ಣಿನ ರಸ ಇತ್ಯಾದಿಗಳನ್ನು ಸೇವಿಸುತ್ತಿರಬೇಕು. ಇದು ಕ್ರಮೇಣವಾಗಿ ಬಾಯಿಯ ಕಹಿ ಅನುಭವವನ್ನು ಹೋಗಲಾಡಿ ಸುತ್ತದೆ.
ತೆಗೆದುಕೊಳ್ಳುತ್ತಿರುವ ಯಾವುದೇ ಔಷಧಿಗಳಿಂದ ಒಂದು ವೇಳೆ ಬಾಯಿ ಕಹಿ ಬಂದಿದ್ದರೆ, ವೈದ್ಯರಿಂದ ಅಂತಹ ಔಷಧಿಗಳನ್ನು ಬದಲಿಸಿಕೊಳ್ಳುವುದು ಒಳ್ಳೆಯದು.
ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಂಡು ಕಹಿ ಅನುಭವ ವನ್ನು ಹೋಗಲಾಡಿಸಿಕೊಳ್ಳಬೇಕು ಎಂದರೆ ಶುಗರ್ ಫ್ರೀ ಚೀವಿಂಗ್ ಗಮ್ ಜಗಿಯಿರಿ.
ಡೈರಿ ಉತ್ಪನ್ನಗಳಾದ ಚೀಸ್ ಮತ್ತು ಹಾಲನ್ನು ಆಗಾಗ ಸೇವಿಸುವುದು ಒಳ್ಳೆಯದು.
ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡಿ ಬಾಯಿಯಲ್ಲಿ ಅಸಹಜ ರುಚಿ ಕಂಡು ಬರದಂತೆ ನೋಡಿಕೊಳ್ಳಿ

Leave a Comment

Leave a Reply

Your email address will not be published. Required fields are marked *

error: Content is protected !!