ದೈತ್ಯ ಕಂಪನಿಗಳಿಗೆ ಮಹಾ ಟಕ್ಕರ್; ಅಮೆಜಾನ್, ಫ್ಲಿಪ್‌ಕಾರ್ಟ್ ಬಿಗ್ ಶಾಕ್!
ನ್ಯೂಸ್ ಆ್ಯರೋ: ಮಾರುಕಟ್ಟೆ ಅಂದ್ಮೇಲೆ ಅಲ್ಲಿ ಸ್ಪರ್ಧೆ ಇದ್ದೇ ಇರುತ್ತದೆ. ಇದೀಗ ಇ-ಕಾಮರ್ಸ್ ಮಾರುಕಟ್ಟೆಯ ದೈತ್ಯ ಕಂಪನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಶಾಕ್ ಕೊಡಲು ಬ್ಲಿಂಕಿಟ್ ಮುಂದಾಗಿದೆ. ಬಟ್ಟೆ, ಇಲೆಕ್ಟ್ರಾನಿಕ್, ಸೌಂದರ್ಯ ಉತ್ಪನ್ನ, ಸ್ಮಾರ್ಟ್‌ಫೋನ್ ಸೇರಿದಂತೆ ಎಲ್ಲಾ ರೀತಿಯ ವಸ್ತುಗಳು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಸಿಗುತ್ತವೆ. ಬೆರಳ ತುದಿಯಲ್ಲಿಯೇ ನಿಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿ ಮನೆಗೆ ತರಿಸಿಕೊಳ್ಳಬಹುದು. ಕೆಲ ವರ್ಷಗಳ ಹಿಂದೆಯಷ್ಟೇ ಮಾರುಕಟ್ಟೆಗೆ ಪರಿಚಯವಾಗಿರುವ ಬ್ಲಿಂಕಿಟ್ ಹಂತ ಹಂತವಾಗಿ ತನ್ನ ವ್ಯಾಪಾರವನ್ನು ವಿಸ್ತರಣೆ ಮಾಡಿಕೊಳ್ಳುತ್ತಾ, ಬೆಳೆಯುತ್ತಿದೆ. ಬ್ಲಿಂಕಿಟ್ ಅತಿ ಕಡಿಮೆ ಅವಧಿಯಯಲ್ಲಿ ವಸ್ತುಗಳನ್ನು ತಲುಪಿಸುವ ಭರವಸೆಯನ್ನು ಗ್ರಾಹಕರಿಗೆ ನೀಡುತ್ತಿದೆ.
ಈಗಾಗಲೇ ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ, ನವದೆಹಲಿ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ಬ್ಲಿಂಕಿಟ್ ಸೇವೆಯನ್ನು ನೀಡುತ್ತಿದೆ. ಇದೀಗ ದೆಹಲಿ ಎನ್‌ಸಿಆರ್ ಭಾಗಕ್ಕೂ ಬ್ಲಿಂಕಿಟ್ ವಿಸ್ತರಣೆಯಾಗಿದ್ದು, ಈ ಸಂಬಂಧ ಪ್ರಾಯೋಗಿಕ ಉಪಕ್ರಮವನ್ನು ತೆಗೆದುಕೊಂಡಿದೆ. ಈ ಸೇವೆ ಗೇಮಿಂಗ್ ಕನ್ಸೂಲ್, ಗೃಹಪಯೋಗಿ, ಗಿಫ್ಟ್ ಸೇರಿದಂತೆ ಹಲವು ವಸ್ತುಗಳನ್ನು ತಲುಪಿಸುವ ಕೆಲಸ ಮಾಡಲಿದೆ. ಇದು ನೇರವಾಗಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಸ್ಪರ್ಧೆ ನೀಡುತ್ತಿದೆ.
ಆನ್‌ಲೈನ್ ಮಾರುಕಟ್ಟೆಯ ವೇದಿಕೆಯಾಗಿರುವ ಬ್ಲಿಂಕಿಟ್‌ನ್ನು, ಪ್ಲೇಸ್ಟೇಷನ್ ಕನ್ಸೋಲ್‌ಗಳು, ಏರ್ ಫ್ರೈಯರ್‌ಗಳು ಮತ್ತು ಏರ್ ಪ್ಯೂರಿಫೈಯರ್‌ಗಳಂತಹ ಬೃಹತ್ ಉತ್ಪನ್ನಗಳನ್ನು ತಲುಪಿಸಲು ಬಳಕೆ ಮಾಡಲು ಬಳಸಿಕೊಳ್ಳಲಾಗಿದೆ. ಆರಂಭದಲ್ಲಿ ಬ್ಲಿಂಕಿಟ್ ಕೇವಲ ಚಿಕ್ಕ ವಸ್ತುಗಳಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಬೃಹತ್ ಉತ್ಪನ್ನಗಳತ್ತ ಹೆಜ್ಜೆ ಇರಿಸಿದೆ.
ಈ ಕಾರ್ಯತಂತ್ರದ ಬದಲಾವಣೆಯು ವಿಶೇಷವಾದ “ಡಾರ್ಕ್ ಸ್ಟೋರ್ಸ್” ಅನ್ನು ಅಭಿವೃದ್ಧಿಪಡಿಸುವದರ ಜೊತೆ 30 ನಿಮಿಷಗಳಲ್ಲಿ ಹೆಚ್ಚಿನ ಮೌಲ್ಯದ ಉತ್ಪನ್ನಗಳು 30 ನಿಮಿಷದಲ್ಲಿ ತ್ವರಿತವಾಗಿ ಗ್ರಾಹಕರಿಗೆ ತಲುಪಿಸಲು ಬ್ಲಿಂಕಿಟ್ ಪ್ಲಾನ್ ಮಾಡಿಕೊಂಡಿದೆ. ಹಾಗಾಗಿ ಈ ಒಂದು ನಿರ್ಧಾರ ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಇತರೆ ಇ-ಕಾಮರ್ಸ್‌ಗಳಿಗೆ ನಷ್ಟವನ್ನುಂಟು ಮಾಡುವ ಸಾಧ್ಯತೆಗಳಿವೆ ಎಂದು ಅನುಮಾನಿಸಲಾಗುತ್ತಿದೆ.
ಸದ್ಯ ಬ್ಲಿಂಕಿಟ್ AOV (Average order value) 660 ರೂಪಾಯಿ ಆಗಿದ್ದು, ಶೇ.8ರಷ್ಟು ಬೆಳವಣಿಗೆಯಲ್ಲಿದೆ. ಈ ವರ್ಷ ಬ್ಲಿಂಕಿಟ್ ಸರಾಸರಿ ಆರ್ಡರ್ ವ್ಯಾಲ್ಯೂ 706 ರೂ.ಗೆ ತಲುಪಿದೆ. ಇದೀಗ ಹೊಸ ಪ್ರಯೋಗಗಳನ್ನು ನಡೆಸುವ ಮೂಲಕ ಇತರೆ ಸ್ಪರ್ಧಿಗಳಿಗೆ ಟಕ್ಕರ್ ಕೊಡಲು ಮುಂದಾಗಿದೆ.
Leave a Comment