ʼಕ್ರಿಸ್ಮಸ್ʼ ಜಾಹೀರಾತು ಹೊರತಂದ ಕೋಕಾಕೋಲಾ; ಆದ್ರೆ ಈ ಬಾರಿ ಟೀಕೆಗಳದ್ದೇ ʼಕೋಲಾಹಲʼ

Coco
Spread the love

ನ್ಯೂಸ್ ಆ್ಯರೋ: ಇನ್ನೇನು ಕ್ರಿಸ್ಮಸ್​ ಹಬ್ಬ ಸಮೀಪಿಸುತ್ತಿದೆ. ಪ್ರಪಂಚದಾದ್ಯಂತ ಈ ಕ್ರಿಸ್ಮಸ್​ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಹೀಗಾಗಿ ಎಂದಿನಂತೆ ಈ ಬಾರಿಯೂ ಕೋಕಾಕೋಲಾ ತನ್ನ ಕ್ರಿಸ್ಮಸ್​ ಜಾಹೀರಾತವನ್ನು ಪ್ರಸ್ತುತ ಪಡಿಸಿದೆ. ಆನ್​ಲೈನ್​ನಲ್ಲಿ ಬಿಡುಗಡೆ ಮಾಡಿರುವ ಈ ಜಾಹೀರಾತಿಗೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ.

New Project 10 1

ಮಾಹಿತಿ ಪ್ರಕಾರ.. 15 ಸೆಕೆಂಡ್​ಗಳ ಈ ಆ್ಯಡ್​ 1995 ಐಕಾನಿಕ್​ ‘ಹಾಲಿಡೇಸ್​ ಆರ್​ ಕಮಿಂಗ್​’ ಪ್ರಚಾರವನ್ನು ರೀಕ್ರಿಯೆಟ್​ ಮಾಡಿದೆ. ಈ ಆ್ಯಡ್​ನಲ್ಲಿ ಫೆಸ್ಟಿವ್​ ಹಾಲಿಡೇಸ್​ ಸಮಯದಲ್ಲಿ ಹಿಮಭರಿತದಿಂದ ಕೂಡಿದ ನಗರಕ್ಕೆ ಸೋಡಾವನ್ನು ತಲುಪಿಸುವ ಕೋಕಾ-ಕೋಲಾ ಟ್ರಕ್‌ಗಳ ಸಾಗಣೆಯನ್ನು ಇದರಲ್ಲಿ ನೋಡಬಹುದಾಗಿದೆ. ಆದರೆ ಈ ಜಾಹೀರಾತು ನೋಡುಗರನ್ನು ಅಷ್ಟಾಗಿ ಆಕರ್ಷಿಸಲಿಲ್ಲ. ಇದಕ್ಕೆ ಮುಖ್ಯ ಕಾರಣ ಕಂಪನಿಯು ಇದನ್ನು AI ನೊಂದಿಗೆ ರಚಿಸಿದೆ.

ಕಂಪನಿಯ ‘ರಿಯಲ್ ಮ್ಯಾಜಿಕ್ ಎಐ’ ಸಾಫ್ಟ್‌ವೇರ್ ಬಳಸಿ ಜಾಹೀರಾತನ್ನು ರಚಿಸಲಾಗಿದೆ ಎಂದು ಕೋಕಾ-ಕೋಲಾ ಹೇಳಿದೆ. ಈ ಜಾಹೀರಾತಿನಲ್ಲಿನ ಪಾತ್ರಗಳು ಮತ್ತು ಹಬ್ಬದ ದೃಶ್ಯಗಳು ಎಐ ರಚಿತವಾದ ದೃಶ್ಯಗಳಾಗಿವೆ. ಜಾಗತಿಕ ಪಾನೀಯ ದೈತ್ಯ ಜಾಹೀರಾತು ತನ್ನ ಸಾಂಪ್ರದಾಯಿಕ ಬ್ರ್ಯಾಂಡ್ ಪರಂಪರೆಯನ್ನು ಭವಿಷ್ಯದ ತಂತ್ರಜ್ಞಾನದೊಂದಿಗೆ ಹೊಂದಿಸಲಾಗಿದೆ ಎಂದು ಹೇಳುತ್ತಿದೆ.

ಈ ವಾರ ಪ್ರಸಾರ ಆರಂಭಿಸಿದ ಈ ಜಾಹೀರಾತು ತೀವ್ರ ವಿಮರ್ಶೆಗೆ ಒಳಗಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು “creepy”, “depressing”, “soulless” ಎಂದು ವಿವರಿಸಿದ್ದಾರೆ. ಎಲ್ಲಾ ಪ್ರಮುಖ ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ರಚಿಸಲಾದ ಈ ಜಾಹೀರಾತು ಮಾನವ ಕಲಾತ್ಮಕತೆಯ ಕೊರತೆಯನ್ನು ಪ್ರಶ್ನಿಸುತ್ತದೆ. ಎಐ ತಂತ್ರಜ್ಞಾನವನ್ನು ಬಳಸಿ ರಚಿಸಲಾದ ಈ ಜಾಹೀರಾತು ಮಾನವನ ಭಾವನೆಗಳು ಮೂಡಿಬರಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಲಾಗುತ್ತಿದೆ.

‘X’ ನಲ್ಲಿ ಈ ಜಾಹೀರಾತನ್ನು ನೋಡಿದ ವೀಕ್ಷಕರೊಬ್ಬರು, ಕ್ರಿಸ್‌ಮಸ್ ಕೋಕಾ-ಕೋಲಾ ಜಾಹೀರಾತನ್ನು ಎಐ ತಂತ್ರಜ್ಞಾನ ಜೊತೆಗೆ ತಯಾರಿಸಿದರೆ ಜಗತ್ತು ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಯೂಟ್ಯೂಬ್ ಬಳಕೆದಾರರು ‘ಎಐ ತಂತ್ರಜ್ಞಾನ ಜೊತೆಗೆ ಜಾಹೀರಾತನ್ನು ರಚಿಸುವುದು ತುಂಬಾ ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!