ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ; ಖ್ಯಾತ ಗಾಯಕ-ಸಂಯೋಜಕ ಅರೆಸ್ಟ್
ನ್ಯೂಸ್ ಆ್ಯರೋ: ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಖ್ಯಾತ ಗಾಯಕ ಸಂಜಯ್ ಚಕ್ರವರ್ತಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಖ್ಯಾತ ಗಾಯಕ ಮತ್ತು ಸಂಯೋಜಕ, ಪಂಡಿತ್ ಅಜೋಯ್ ಚಕ್ರವರ್ತಿ ಅವರ ಸಹೋದರ ಸಂಜಯ್ ಚಕ್ರವರ್ತಿಯನ್ನು ಚಾರು ಮಾರ್ಕೆಟ್ ಪೊಲೀಸ್ ತಂಡ ಮುಂಬೈನಲ್ಲಿ ಬಂಧಿಸಿದ್ದಾರೆ.
ಈ ಘಟನೆಯು ಜೂನ್ ತಿಂಗಳಲ್ಲಿ ನಡೆದಿದ್ದು, ಗಾಯಕ ತಾನು ನಡೆಸುತ್ತಿದ್ದ ಗಾಯನ ಸಂಸ್ಥೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ್ದಾರೆ. ಆಕೆಯ ಪೋಷಕರು ದೂರು ನೀಡಿದ್ದಾರೆ. ಗಾಯಕ ಎಸಗಿರುವ ಆರೋಪದ ಮೇಲೆ ತನಿಖೆ ಆತನ್ನು ಬಂಧಿಸಲಾಗಿದೆ.
ದೂರಿನ ಪ್ರಕಾರ, ತರಗತಿ ಮುಗಿದ ನಂತರ ಚಕ್ರವರ್ತಿ ಅಲ್ಲೇ ಉಳಿದುಕೊಂಡು ಎಲ್ಲಾ ವಿದ್ಯಾರ್ಥಿಗಳು ಹೋದ ನಂತರ, ಬಾಲಕಿಗೆ ಕಿರುಕುಳ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂತ್ರಸ್ತೆಯನ್ನು ಆಕೆಯ ಪೋಷಕರು ಮಾನಸಿಕ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಚಿಕಿತ್ಸೆಯ ಸಮಯದಲ್ಲಿ ವಿದ್ಯಾರ್ಥಿನಿ ವೈದ್ಯರಿಗೆ ನಡೆದಂತಹ ಎಲ್ಲಾ ಘಟನೆಗಳನ್ನು ಬಹಿರಂಗಪಡಿಸಿದಳು. ನಂತರ ಆಕೆಯ ಪೋಷಕರಿಗೆ ಈ ವಿಷಯ ತಿಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Leave a Comment