ಐಪಿಎಲ್ ಹೊತ್ತಿನಲ್ಲೇ ಧೋನಿಗೆ ಬಿಗ್​ ಶಾಕ್; ಮಹಿಗೆ ಹೈಕೋರ್ಟ್ ನೋಟಿಸ್ ನೀಡಿದ್ದು ಯಾಕೆ?

High Court Issues Notice To MS Dhoni
Spread the love

ನ್ಯೂಸ್ ಆ್ಯರೋ: ವ್ಯಾಪಾರ ವಂಚನೆ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಎಂಎಸ್ ಧೋನಿಗೆ ನೋಟಿಸ್ ಕಳುಹಿಸಿದೆ. ಧೋನಿ ಅವರ ಹಳೆ ಬಿಸಿನೆಸ್ ಪಾರ್ಟನರ್ ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಒಟ್ಟಾಗಿ ಧೋನಿ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದಾರೆ.

Custom Ad

ಪ್ರಕರಣವು ‘ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್’ ಹೆಸರಿನ ಕಂಪನಿಗೆ ಸಂಬಂಧಿಸಿದೆ. ಸಂಸ್ಥೆಯಲ್ಲಿ ದಿವಾಕರ್ ಮತ್ತು ಸೌಮ್ಯ ನಿರ್ದೇಶಕರಾಗಿದ್ದರು. ಕಳೆದ ಜನವರಿಯಲ್ಲಿ ಧೋನಿ ತಮ್ಮ ಮಾಜಿ ಪಾಲುದಾರರ ವಿರುದ್ಧ ಆರೋಪಿಸಿದ್ದರು.

‘ಎಂಎಸ್ ಧೋನಿ’ ಹೆಸರಿನಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸುವುದಾಗಿ ಧೋನಿ ಜತೆ ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್ ಮೆಂಟ್ ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ನಮ್ಮ ಒಪ್ಪಂದವು 2021ರಲ್ಲಿ ಕೊನೆಗೊಂಡಿದೆ. ಹೀಗಿದ್ದೂ ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಕ್ರಿಕೆಟ್ ಅಕಾಡೆಮಿಗಳನ್ನು ತೆರೆಯುವುದನ್ನು ಮುಂದುವರೆಸಿದ್ದಾರೆ. ಇದರಿಂದ ನನಗೆ 15 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಧೋನಿ ಆರೋಪಿಸಿದ್ದರು. ಜನವರಿ 5 ರಂದು ಧೋನಿ ತಮ್ಮ ಮಾಜಿ ಪಾಲುದಾರರ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದರು.

ಪ್ರಕರಣ ಸಂಬಂಧ ಜಾರ್ಖಂಡ್​ ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ವಿಚಾರಣೆಯನ್ನು ಪ್ರಶ್ನಿಸಿ ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಜಾರ್ಖಂಡ್ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ವಿಚಾರಣೆ ನಡೆಸಲು ಧೋನಿಗೆ ಹಾಜರಾಗುವಂತೆ ಜಾರ್ಖಂಡ್ ಹೈಕೋರ್ಟ್ ನೋಟಿಸ್ ನೀಡಿದೆ. ಪ್ರಕರಣದಲ್ಲಿ ನಿಮ್ಮ ನಿಲುವು ತಿಳಿಸುವಂತೆ ಹೈಕೋರ್ಟ್​ ಧೋನಿಗೆ ಸೂಚಿಸಿದೆ.

Leave a Comment

Leave a Reply

Your email address will not be published. Required fields are marked *

error: Content is protected !!