ಚಳಿಗಾಲದಲ್ಲಿ ಹೃದಯವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಿ; ಇಂತಹ ಆಹಾರಗಳನ್ನು ಮುಟ್ಟಲೇ ಬೇಡಿ

Health food in winter
Spread the love

ನ್ಯೂಸ್ ಆ್ಯರೋ: ಚಳಿಗಾಲದ ಈ ಸಂದರ್ಭದಲ್ಲಿ ನಮ್ಮ ಹೃದಯದ ಆರೋಗ್ಯ ನಮಗೆ ಬಹಳ ಮುಖ್ಯ. ಏಕೆಂದರೆ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಇಂತಹ ಸಂದರ್ಭದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನುವುದರಿಂದ ದೂರವಿದ್ದರೆ ಒಳ್ಳೆಯದು.

ಹೌದು. . ಮೈದಾ ಹಿಟ್ಟಿನಿಂದ ಹಲವಾರು ರುಚಿಕರ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಆದರೆ ಇವು ಗಳು ಹೃದಯ ಸಹಕಾರಿಯಲ್ಲ. ಹಾಗಾಗಿ ಈ ಚಳಿಗಾಲದಲ್ಲಿ ಮೈದಾ ಹಿಟ್ಟಿನ ಪರೋಟ, ಒಬ್ಬಟ್ಟು, ಗೋಬಿ ಮಂಚೂರಿ ಇತ್ಯಾದಿಗಳಿಂದ ಸ್ವಲ್ಪ ದೂರ ಇದ್ದರೆ ಒಳ್ಳೆಯದು. ಇದರಿಂದ ನಿಮ್ಮ ಹೃದಯವನ್ನು ಆರೋಗ್ಯ ವಾಗಿ ಕಾಪಾಡಿಕೊಳ್ಳಬಹುದು.

ಇನ್ನು ಸಕ್ಕರೆ ಬಳಸಿ ತಯಾರಾದ ಆಹಾರಗಳು ಮೊದಲೇ ಶುಗರ್ ಇರುವವರಿಗೆ ಡೇಂಜರ್. ಮಧುಮೇಹಿಗಳಿಗೆ ಇದರಿಂದ ಶುಗರ್ ಕೂಡ ಬರಬಹುದು. ಚಳಿಗಾಲದಲ್ಲಿ ಇಂತಹ ಕೃತಕ ಸಿಹಿ ಬಳಸಿದ ಆಹಾರ ಪದಾರ್ಥಗಳಿಂದ ದೂರವಿದ್ದರೆ ಒಳ್ಳೆಯದು. ಇದು ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳನ್ನು ತಂದುಕೊಡುತ್ತದೆ.

ಸಂಸ್ಕರಿಸಿದ ಮಾಂಸಹಾರಗಳು ಇವು ಜೀವಿತಾವಧಿ ಹೆಚ್ಚಿಸಲು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಬಳಸಿರುತ್ತಾರೆ ಅಥವಾ ಬ್ರೈನ್ ಸಲ್ಯೂಷನ್ ಉಪಯೋಗಿಸಿರುತ್ತಾರೆ. ನಿಮಗೆಲ್ಲ ಗೊತ್ತಿರುವ ಹಾಗೆ ಇವೆರಡು ಸಹ ಆರೋಗ್ಯಕ್ಕೆ ತುಂಬಾ ಡೇಂಜರ್. ಹಾಗಾಗಿ ಸಂಸ್ಕರಿಸಿದ ಮಾಂಸಹಾರಗಳ ಬಳಕೆಯನ್ನು ಚಳಿಗಾಲದಲ್ಲಿ ಕಡಿಮೆ ಮಾಡಿ.

ಇನ್ನು ಅಡುಗೆ ಎಣ್ಣೆಯನ್ನು ಒಮ್ಮೆ ನಾವು ಏನನ್ನಾದರೂ ಕರಿಯಲು ಬಳಸಿದರೆ ಮತ್ತೊಮ್ಮೆ ಅದನ್ನು ಒಗ್ಗರಣೆಗೆ ಮತ್ತು ಇನ್ನಿತರ ಅಡುಗೆ ವಿಷಯಗಳಿಗೆ ಬಳಸಬಾರದು. ಇದು ಕೂಡ ಹೃದಯಕ್ಕೆ ಬಹಳ ತೊಂದರೆ. ಹಾಗಾಗಿ ಒಮ್ಮೆ ನಿಮಗೆ ಎಷ್ಟು ಅಡುಗೆ ಎಣ್ಣೆ ಬೇಕಾಗಿರುತ್ತದೆ ಅಷ್ಟನ್ನು ಮಾತ್ರ ಜಾಗರೂಕವಾಗಿ ಬಳಸಿಕೊಳ್ಳಿ.

ಕ್ಯಾಲೋರಿಗಳು ಹೆಚ್ಚಾಗಿರುವ ಡಯಟ್ ಸೋಡಾ ತನ್ನಲ್ಲಿ ಕೃತಕ ಸಿಹಿ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿರುತ್ತದೆ. ಇದರಲ್ಲಿ ಬೇರೆ ಬೇರೆ ತರಹದ ರಾಸಾಯನಿಕ ಅಂಶಗಳು ಮತ್ತು ಕೆಫೆನ್ ಅಂಶ ಇರುತ್ತದೆ. ಇದರಿಂದಲೂ ಕೂಡ ಹೃದಯಕ್ಕೆ ತೊಂದರೆ ಉಂಟು. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ.

Leave a Comment

Leave a Reply

Your email address will not be published. Required fields are marked *

error: Content is protected !!