ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ವಿವಾದ; ತನ್ನ ಸಂಬಂಧದ ಬಗ್ಗೆ ಸ್ಪಷ್ಟನೆ ಕೊಟ್ಟ ನಿಮ್ರತ್
ನ್ಯೂಸ್ ಆ್ಯರೋ: ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಆ ನಟಿಯೇ ಕಾರಣ ಎಂದು ಹೇಳಿದಾಗಿನಿಂದ ನಿಮ್ರತ್ ಕೌರ್ ಎನ್ನುವ ನಟಿಯ ಬಗ್ಗೆತೇ ಬಹಳಷ್ಟು ಜನರು ತಿಳಿದಿದ್ದಾರೆ. ಅಂಥಹಾ ದೊಡ್ಡ ನಟಿಯೇನಲ್ಲ. ಹಾಗಂತ ಹೊಸಬರೇನೂ ಅಲ್ಲ. ಸಿನಿಮಾಗಳನ್ನು ಮಾಡುತ್ತಾ ಇಂಡಷ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಟಿಯೇ ಐಶ್-ಅಭಿಷೇಕ್ ಬಿರುಕಿಗೆ ಕಾರಣ ಎನ್ನಲಾಗ್ತಿದೆ.
ಈ ನಡುವೆ ನಿಮೃತ್ ಕೌರ್ ಅವರು ವಿಡಿಯೋ ಒಂದನ್ನು ಶೇರ್ ಮಾಡಿದರು. ಈ ವಿಡಿಯೋ ಮೂಲಕ ನಟಿ ಹೇಳಿದ ಮಾತುಗಳು ಎಲ್ಲರಿಗೂ ಕೊಟ್ಟ ಸ್ಪಷ್ಟನೆಯಾ? ಅಥವಾ ಸುಮ್ಮನೆ ತಮಾಷೆಗೆ ರೀಲ್ಸ್ ಮಾಡಿದ್ದಾರಾ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು?
ಫ್ರೆಂಡ್ಶಿಪ್ ಹೇಗಿರಬೇಕು ಎಂದರೆ ನೋಡಿದವರು ಇವರ ನಡುವೆ ಏನೋ ಇದೆ ಎಂದುಕೊಳ್ಳಬೇಕು. ಹಾ, ಹೂ ಎಂದು ಮಾತನಾಡಿಕೊಳ್ಳಬೇಕು,. ಜನ ಗುಸು ಗುಸು ಎನ್ನಬೇಕು ಎನ್ನುವ ರೀರಿಯಲ್ಲಿ ನಿಮ್ರತ್ ಅವರು ರೀಲ್ಸ್ ಮಾಡಿದ್ದಾರೆ. ಇದನ್ನು ನೋಡಿದರೆ ನಟಿ ತನ್ನ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಫ್ರೆಂಡ್ಶಿಪ್ ಮಾತ್ರ ಇದೆ ಎಂದು ಹೇಳಿದಂತೆ ಭಾಸವಾಗುತ್ತದೆ.
ನಿಮ್ರತ್ ಕೌರ್ ಜೊತೆ ಅಭಿಷೇಕ್ ಬಚ್ಚನ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಲವಾರು ದಿನಗಳಿಂದ ಕೇಳಿ ಬರುತ್ತಿದೆ. ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವ ಮಾತೂ ಹೇಳಲಾಗ್ತಿದೆ. ಆದರೆ ಇದು ಎಷ್ಟು ನಿಜ ಎನ್ನುವುದು ಇನ್ನೂ ಅಧಿಕೃತವಾಗಿಲ್ಲ. ಬಹಳಷ್ಟು ಸಮಯದಿಂದ ಡಿವೋರ್ಸ್ ಸುದ್ದಿ ಕೇಳಿ ಬರುತ್ತಿದ್ದರೂ ಕೂಡಾ ಐಶ್ವರ್ಯಾ ರೈ ಅವರು ಅಥವಾ ಅಭಿಷೇಕ್ ಬಚ್ಚನ್ ಅವರು ಡಿವೋರ್ಸ್ ಬಗ್ಗೆ ಇನ್ನೂ ಮಾತನಾಡಿಲ್ಲ.
https://www.instagram.com/p/DCLaPRXyutU/?utm_source=ig_embed&utm_campaign=embed_video_watch_again
Leave a Comment