New Law : ಜುಲೈ 1ರಿಂದ ದೇಶಾದ್ಯಂತ ಜಾರಿಯಾದ ಕಾನೂನಿಗೆ ರಾಜ್ಯದಲ್ಲಿ ತಿದ್ದುಪಡಿ – ಕೇಂದ್ರ ಸರ್ಕಾರದ ಹೊಸ ಕಾನೂನು ವಿರುದ್ಧ ಸಮರ ಸಾರಿದ ರಾಜ್ಯ ಸರ್ಕಾರ

IMG 20240702 WA0032
Spread the love

ನ್ಯೂಸ್ ಆ್ಯರೋ : ಜುಲೈ 1ರಿಂದ ದೇಶಾದ್ಯಂತ ಹೊಸ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕಾನೂನುಗಳು ಜಾರಿಯಾದ ಮೊದಲ ದಿನವೇ ರಾಜ್ಯದ ಕಾಂಗ್ರೆಸ್ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಜುಲೈ 15 ರಿಂದ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕೇಂದ್ರದ ಹೊಸ ಕಾನೂನುಗಳಿಗೆ ತಿದ್ದುಪಡಿ ತರುವುದಾಗಿ ಘೋಷಿಸಲಾಗಿದೆ.

ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆಗಳಲ್ಲಿ ಅನೇಕ ಲೋಪಗಳು ಇವೆ.

ಈ ಮೂರು ಹೊಸ ಕಾನೂನುಗಳಿಂದ ದೇಶದಲ್ಲಿ ಪೊಲೀಸ್ ಆಳ್ವಿಕೆ ಆರಂಭವಾಗುತ್ತದೆ. ಇದು ಸ್ವಾತಂತ್ರ್ಯ ಚಳವಳಿಯ ಆಶಯ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯೂ ಅಧಿಕವಾಗುತ್ತದೆ. ಹೀಗಾಗಿ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದಾರೆ.

ನಮ್ಮ ಮನವಿಯನ್ನು ಒಪ್ಪದೇ ಜನಾಭಿಪ್ರಾಯ ನಿರ್ಲಕ್ಷ್ಯ ಮಾಡಿ ಮುಂದುವರೆದರೆ ತಿದ್ದುಪಡಿ ಮಾಡಲಾಗುವುದು. ಈ ಕಾನೂನುಗಳಿಗೆ ಸಂಬಂಧಿಸಿದ ರಾಜ್ಯದ ವ್ಯಾಪ್ತಿಯಲ್ಲಿ ಭಾರತೀಯ ಸಂವಿಧಾನದ ಅನುಚ್ಛೇದ 7ರ 3ನೇ ಪಟ್ಟಿಯಲ್ಲಿ ಪ್ರದತ್ತವಾಗಿರುವ ಅಧಿಕಾರ ಚಲಾಯಿಸಿ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

ಕಾನೂನುಗಳನ್ನು ಜವಾಬ್ದಾರಿ ಮರೆತು ಹಿಂದಿನ‌ ಸರ್ಕಾರ ಕ್ಯಾಬಿನೆಟ್ ಆಗಿರುವ ನಿರ್ಣಯವನ್ನ‌ ಈ ಸರ್ಕಾರದಲ್ಲಿ ಜಾರಿಗೆ ತಂದಿದ್ದು ಸೂಕ್ತವಲ್ಲ. ಈ ಬಿಲ್ ಬಗ್ಗೆ ಸಲಹೆ, ಸೂಚನೆ ಮತ್ತು ಜಾರಿಗೆ ತರಬೇಕು ಅಂತ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕಳೆದ ಸರ್ಕಾರದ ಅವಧಿಯಲ್ಲಿ ‌ಪತ್ರ ಬರೆದಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ನನಗೆ ಮಾಹಿತಿ ನೀಡಿದ್ದರು. ತಮ್ಮ ಅಧ್ಯಕ್ಷತೆಯಲ್ಲಿ ಒಂದು ವರದಿ ನೀಡಬೇಕೆಂದು ಸೂಚನೆ‌ ನೀಡಿದ್ದರು ಎಂದು ತಿಳಿಸಿದರು.

ಅದರನ್ವಯ ನಾನು ಸಿಎಂ ಅವರಿಗೆ ವರದಿ ನೀಡಿದ್ದೇನೆ. ಅವರು ಅಮಿತ್ ಶಾ ಅವರಿಗೆ ಈ ವರದಿ ಕುರಿತು ಪತ್ರ ಬರೆದಿದ್ದರು. ನಾನು ಕೊಟ್ಟಿರುವ ಸಲಹೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ನಮ್ಮ ಸಲಹೆಗಳನ್ನು ನಿರ್ಲಕ್ಷ್ಯ ಮಾಡಿದ್ದರು. ಈ ಕಾನೂನುಗಳು ಅನಾನುಕೂಲ ಆಗುವುದೇ ಹೆಚ್ಚು. ಗೊಂದಲ, ಗೋಜಲು ಮೂಡಿಸುವ ಕ್ರಮಗಳೇ ಈ ಕಾನೂನುಗಳಿಂದ ಆಗುತ್ತವೆ

ನಮ್ಮ ಸಲಹೆ, ಸೂಚನೆ‌ ಮತ್ತು ಅಭಿಪ್ರಾಯ ಗಮನಿಸಲಿಲ್ಲ. ಈ ಕಾನೂನುಗಳನ್ನ ನಮ್ಮ ಸರ್ಕಾರ ವಿರೋಧಿಸುವುದಲ್ಲದೇ ಹಾಗೂ ಅದರಲ್ಲಿ ತಿದ್ದುಪಡಿ ಮಾಡುವ ಉದ್ದೇಶ ಹೊಂದಿದೆ ಎಂದರು.

Leave a Comment

Leave a Reply

Your email address will not be published. Required fields are marked *