ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್‌ ಪೌಲಿಗೆ ಕ್ಲೀನ್‌ ಚಿಟ್

Nivin Pauly
Spread the love

ನ್ಯೂಸ್ ಆ್ಯರೋ: ಜಸ್ಟೀಸ್‌ ಕೆ. ಹೇಮಾ ಸಮಿತಿ ವರದಿ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಹಲವು ಕಲಾವಿದರ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಈ ಪಟ್ಟಿಯಲ್ಲಿ ಮಾಲಿವುಡ್‌ ನಟ “ಪ್ರೇಮಂ’ ಖ್ಯಾತಿಯ ನಿವಿನ್‌ ಪೌಲಿ ವಿರುದ್ಧವೂ ದೂರು ದಾಖಲಾಗಿತ್ತು.

ಕೇರಳದ ನೆರಿಯಮಂಗಲಂ ನಿವಾಸಿಯಾಗಿರುವ ದೂರುದಾರೆ ನವೆಂಬರ್ 2023ರಲ್ಲಿ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ನಿವಿನ್‌ ಪೌಲಿ ತಮ್ಮ ಮೇಲೆ ದುಬೈಯ ಹೊಟೇಲ್‌ ವೊಂದರಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.

ನಿವಿನ್‌ ಸೇರಿ 6 ಮಂದಿಯ ವಿರುದ್ಧ ಮಹಿಳೆ ಆರೋಪ ಮಾಡಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ನಿವಿನ್‌ 6ನೇ ಆರೋಪಿ ಆಗಿದ್ದರು. ದೂರು ದಾಖಲಾದ ಬಳಿಕ ʼಪ್ರೇಮಂʼ ನಟ ಆರೋಪಗಳೆಲ್ಲ ಸುಳ್ಳು ಇದೊಂದು ಆಧಾರರಹಿತ ಸುಳ್ಳು ಆರೋಪ. ಸತ್ಯ ಹೊರತರಲು ಯಾವ ಹಂತಕ್ಕೆ ಬೇಕಾದರೆ ಹೋಗುತ್ತೇನೆಂದು ಕಾನೂನು ಹೋರಾಟವನ್ನು ಮಾಡುತ್ತೇನೆ ಎಂದಿದ್ದರು.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರ ತನಿಖಾ ತಂಡ ಬುಧವಾರ (ನ.6ರಂದು) ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಮಲಯಾಳಂ ನಟ ನಿವಿನ್ ಪೌಲಿಗೆ ಕ್ಲೀನ್ ಚಿಟ್ ನೀಡಿದೆ.
ಘಟನೆ ನಡೆದಾಗ ಆ ಸಮಯ ಮತ್ತು ದಿನಾಂಕದಂದು ನಿವಿನ್ ಸ್ಥಳದಲ್ಲಿ ಇರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.

Leave a Comment

Leave a Reply

Your email address will not be published. Required fields are marked *

error: Content is protected !!