ಸಾರ್ವಜನಿಕವಾಗಿ ಕೋಳಿ ಕೊಂದು ರಕ್ತ ಹೀರಿದ ಆರ್ಟಿಸ್ಟ್; ಅಸಹ್ಯವಾಗಿ ವರ್ತಿಸಿದ್ದ ಕಲಾವಿದನ ವಿರುದ್ಧ ಎಫ್​ಐಆರ್

Ckn
Spread the love

ನ್ಯೂಸ್ ಆ್ಯರೋ: ಇತ್ತೀಚೆಗೆ ನಡೆದ ಸಂಗೀತ ಪ್ರದರ್ಶನದ ವೇಳೆ ಸಾರ್ವಜನಿಕವಾಗಿ ಕೋಳಿಯೊಂದರ ಕತ್ತು ಸೀಳಿ ನಂತರ ಅದರ ರಕ್ತವನ್ನು ಕುಡಿದು ಅಸಹ್ಯವಾಗಿ ವರ್ತಿಸಿದ್ದ ಕಲಾವಿದ ಕೊನ್ ವಾಯಿ ಸನ್ ವಿರುದ್ಧ ಅರುಣಾಚಲ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

Artist Kon Waii Son

ಕೊನ್ ವಾಯಿ ಸನ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), 2023 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯ್ದೆ, 1960 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್ (ಪೆಟಾ), ಇಂಡಿಯಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸೋಮವಾರ ಕೊನ್ ವಾಯಿ ಸನ್ ವಿರುದ್ಧ ಇಟಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್ ಜಿಲ್ಲೆಯ ಸೆಪ್ಪಾ ಮೂಲದ ಕೊನ್ ವಾಯಿ ಸನ್ ಗೀತರಚನೆಕಾರ, ಸಂಯೋಜಕ ಮತ್ತು ಸಂಗೀತಗಾರನಾಗಿದ್ದಾರೆ. ಅಕ್ಟೋಬರ್ 28 ರಂದು ಸಂಗೀತ ಕಾರ್ಯಕ್ರಮದಲ್ಲಿ ಈತ ಕೋಳಿಯನ್ನು ಕೊಂದು ಅದರ ರಕ್ತವನ್ನು ಕುಡಿದ ನಂತರ ಇಟಾನಗರದಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.

ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೊನ್ ವಾಯಿ ಸನ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಪ್ರಾಣಿಗಳನ್ನು ನಿಂದಿಸುವುದು ಆಳವಾದ ಮಾನಸಿಕ ಸಮಸ್ಯೆಯನ್ನು ಸೂಚಿಸುವುದರಿಂದ, ಪ್ರಾಣಿಗಳ ಮೇಲೆ ದೌರ್ಜನ್ಯವೆಸಗುವವರನ್ನು ಮನೋವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಪೆಟಾ ಇಂಡಿಯಾ ಒತ್ತಾಯಿಸಿದೆ. ಪ್ರಾಣಿಗಳ ಮೇಲೆ ಕ್ರೌರ್ಯದ ಕೃತ್ಯ ಎಸಗುವವರು ಸಾಮಾನ್ಯವಾಗಿ ಪುನರಾವರ್ತಿತ ಅಪರಾಧಿಗಳಾಗಿದ್ದು, ಇತರ ಪ್ರಾಣಿಗಳನ್ನು, ಮನುಷ್ಯರನ್ನು ಸಹ ನೋಯಿಸುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ ಎಂದು ಪೆಟಾ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

Leave a Comment

Leave a Reply

Your email address will not be published. Required fields are marked *

error: Content is protected !!