ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ಆತ್ಮಹತ್ಯೆ ಕೇಸ್; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎಗೆ ಸಂಕಷ್ಟ

Rudesh
Spread the love

ನ್ಯೂಸ್ ಆ್ಯರೋ: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ SDA ಅಂದ್ರೆ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡಣ್ಣನವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ 35 ವರ್ಷದ ರುದ್ರಣ್ಣ ಯಡಣ್ಣನವರ್ SDA ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆಯಷ್ಟೇ (ನ. 05) ಬೆಳಗಾವಿ ಕಚೇರಿಯಿಂದ ಸವದತ್ತಿಯ ತಹಶೀಲ್ದಾರ್ ಕಚೇರಿಗೆ ರುದ್ರಣ್ಣ ಅವರನ್ನ ಟ್ರಾನ್ಸಫರ್ ಮಾಡಿ ಜಿಲ್ಲಾಧಿಕಾರಿ ಮೊಹಮದ್ ರೋಷನ್ ಅವರು ಆದೇಶ ಮಾಡಿದ್ದರು.

ಆದ್ರೆ, ಇಂದು ಬೆಳಗಿನಿ ಜಾವ ತಹಶೀಲ್ದಾರ್ ಕಚೇರಿಗೆ ಬಂದಿದ್ದ ರುದ್ರಣ್ಣ, ತಹಶೀಲ್ದಾರ್ ಬಸರಾಜ್ ಕೊಠಡಿಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. SDA ರುದ್ರಣ್ಣ ಆತ್ಮಹತ್ಯೆ ರಾಜ್ಯಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ವರ್ಗಾವಣೆ ದಂಧೆಗೆ ರುದ್ರಣ್ಣ ಬಲಿಯಾದ್ನಾ ಎನ್ನುವ ಅನುಮಾನ ಹುಟ್ಟುವಂತೆ ಮಾಡಿದೆ. ಅದಕ್ಕೆ ಕಾರಣ ಖುದ್ದು ರುದ್ರಣ್ಣ ಕಳೆದ ದಿನ ವಾಟ್ಸಾಪ್​ನಲ್ಲಿ ಮಾಡಿದ ಮೆಸೇಜ್.

ಕಳೆದ ದಿನ ಸಂಜೆ 7 ಗಂಟೆ 31 ನಿಮಿಷಕ್ಕೆ ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ ಹಾಗೂ ಸೋಮು ಇವರೇ ನೇರ ಕಾರಣ, ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಮಸೇಜ್ ಹಾಕಿದ್ದ. ಅಲ್ಲದೇ ತನ್ನ ವರ್ಗಾವಣೆ ಆದೇಶ ಪ್ರತಿಯನ್ನೂ ವಾಟ್ಸಾಪ್ ಮಾಡಿದ್ದ. ಹಾಗೇನೆ 7 ಗಂಟೆ 35 ನಿಮಿಷಕ್ಕೆ ಅಶೋಕ್ ಕಬ್ಬಲಿಗೇರ್ ಕೂಡಾ ಕಾರಣ ಎಂದು ಮೆಸೇಜ್ ಮಾಡಿದ್ದ. ಇದಾದ್ಮೇಲೆ, ರಾತ್ರಿ ಮನೆಯಲ್ಲಿ ಪತ್ನಿ ತಾಯಿ ಜೊತೆಗೆ ಊಟಕ್ಕೆ ಕೂತಿದ್ದ. ಯಾರದ್ದೋ ಫೋನ್​ ಬಂತು ಅಂತಾ ಊಟವನ್ನ ಅರ್ಧಕ್ಕೆ ಬಿಟ್ಟು ಎದ್ದು ಹೋಗಿದ್ದನಂತೆ. ಹೀಗಂತಾ ಖುದ್ದು ರುದ್ರಣ್ಣ ಅವರ ತಾಯಿಯೇ ಹೇಳಿದ್ದಾರೆ.

ಇಷ್ಟಾಗಿದೆ, ರಾತ್ರಿ ಮಲಗಿದ್ದ ರುದ್ರಣ್ಣ ಬೆಳಗಿನ ಜಾವವೇ ತಹಶೀಲ್ದಾರ್ ಕಚೇರಿಗೆ ಬಂದು ಸೂಸೈಡ್ ಮಾಡಿಕೊಂಡಿದ್ದಾರೆ. ಸದ್ಯ ರುದ್ರಣ್ಣ ವಾಟ್ಸಾಪ್ ಮಸೇಜ್​ನಲ್ಲಿ ಉಲ್ಲೇಖಿಸಿರು ಸೋಮು ಎನ್ನುವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕ. ಹೀಗಾಗಿ ರುದ್ರಣ್ಣ ಸಾವಿನ ವಿಚಾರದಲ್ಲಿ ಸಾಕಷ್ಟು ಅನುಮಾನ ಮೂಡುವಂತೆ ಮಾಡಿವೆ.

Leave a Comment

Leave a Reply

Your email address will not be published. Required fields are marked *

error: Content is protected !!