‘ಕಂಗುವಾ’ ಸಿನಿಮಾ ಎಡಿಟರ್ ಶವವಾಗಿ ಪತ್ತೆ; ಇದು ಕೊಲೆಯೋ ? ಆತ್ಮಹತ್ಯೆಯೋ ?

Nishadh Yusuf Found Dead
Spread the love

ನ್ಯೂಸ್ ಆ್ಯರೋ: ತಮಿಳು ನಟ ಸೂರ್ಯ ಅಭಿನಯದ ಭಾರೀ ನಿರೀಕ್ಷೆಯಲ್ಲಿರುವ ಕಂಗುವಾ ಸಿನೆಮಾದ ಎಡಿಟರ್ ನಿಶಾದ್ ಯೂಸುಫ್ ಕೊಚ್ಚಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅವರಿಗೆ 43 ವರ್ಷ ವಯಸ್ಸಾಗಿತ್ತು. ನಿಶಾದ್ ಯೂಸುಫ್ ಅವರು ಕೊಚ್ಚಿಯ ಪನಂಪಲ್ಲಿ ನಗರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಬೆಳಗಿನ ಜಾವ 2 ಗಂಟೆಗೆ ಶವವಾಗಿ ಪತ್ತೆಯಾಗಿದ್ದಾರೆ. ನಿಶಾದ್ ಅವರ ದೇಹವನ್ನು ಈಗ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಆತ್ಮಹತ್ಯೆ ಎಂದು ಶಂಕಿಸಲಾಗಿದೆ.

Nishadh Yusuf Found Dead

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಹೆಚ್ಚಾಗಿ ಕೆಲಸ ಮಾಡಿದ ನಿಶಾದ್, ಮಮ್ಮುಟ್ಟಿ ಅಭಿನಯದ ‘ಉಂಡಾ’, ಟೋವಿನೋ ಅವರ ‘ ತಲ್ಲುಮಾಲಾ ‘ ‘ಒನ್’ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ತರುಣ್ ಮೂರ್ತಿ ಅವರ ನಿರ್ದೇಶನದ ‘ಸೌದಿ ವೆಲ್ಲಕ್ಕ’ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಸಂಕಲನಕಾರರಾಗಿ ಕೆಲಸ ನಿರ್ವಹಿಸಿದ್ದಾರೆ.

‘ತಳ್ಳುಮಾಲಾ’ ಸಿನೆಮಾದಲ್ಲಿ ಎಡಿಟಿಂಗ್ ಗೆ ನಿಶಾದ್ ಅವರಿಗೆ ಕೇರಳ ರಾಜ್ಯ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಏತನ್ಮಧ್ಯೆ, ನಿಶಾದ್ ಯೂಸುಫ್ ಬಹುನಿರೀಕ್ಷಿತ ಮುಂಬರುವ ಪೀರಿಯಡ್ ಆಕ್ಷನ್ ತಮಿಳು ಚಲನಚಿತ್ರ ‘ಕಂಗುವ’ ನ ಸಂಕಲನಕಾರರಾಗಿದ್ದಾರೆ.

ಇದು ನವೆಂಬರ್ 14 ರಂದು ದೊಡ್ಡ ಪರದೆಯ ಮೇಲೆ ಬರಲಿದೆ. ಅವರ ಹಠಾತ್ ನಿಧನದ ಸುದ್ದಿ ಇಡೀ ತಂಡಕ್ಕೆ ಶಾಕ್‌ ಕೊಟ್ಟಿದೆ.

Leave a Comment

Leave a Reply

Your email address will not be published. Required fields are marked *

error: Content is protected !!