ಇಂದೇ ಜೈಲಿನಿಂದ ಬಿಡುಗಡೆ ಆಗುತ್ತಾರೆಯೇ ದರ್ಶನ್?; ಹೊರ ಬಂದ ಮೇಲೆ ಈ ಕಂಡಿಷನ್ ಅಪ್ಲೈ ಆಗುತ್ತೆ !
ನ್ಯೂಸ್ ಆ್ಯರೋ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ 6 ವಾರಗಳ ಮಧ್ಯಂತ ಜಾಮೀನನ್ನು ನೀಡಿದೆ. ಈ ಅವಧಿಯನ್ನು ಅವರು ಕೇವಲ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ.
ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ದರ್ಶನ್ ಅವರು ಖುಷಿ ಹೊರ ಹಾಕಿದ್ದಾರೆ. ದರ್ಶನ್ಗೆ ಈಗ ಜಾಮೀನು ನೀಡಿರುವುದು ಸಂಪೂರ್ಣವಾಗಿ ವೈದ್ಯಕೀಯ ವರದಿ ಆಧರಿಸಿಯೇ ಆಗಿದೆ. ಹೀಗಾಗಿ, ಅವರು ಮುಂದಿನ ಆರು ವಾರಗಳನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ.
ದರ್ಶನ್ ಅವರಿಗೆ ಜಾಮೀನು ನೀಡಿದ ಬಳಿಕ ಕೆಲವು ಷರತ್ತುಗಳನ್ನು ಹಾಕಿದೆ. ದರ್ಶನ್ ಇಷ್ಟಪಟ್ಟ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೆ, ಒಂದು ವಾರಗಳಲ್ಲಿ ಚಿಕಿತ್ಸೆಯ ವಿವರವನ್ನು ದರ್ಶನ್ ಕೋರ್ಟ್ಗೆ ಸಲ್ಲಿಕೆ ಮಾಡಬೇಕಿದೆ.
ಫ್ಲೈಟ್ ರಿಸ್ಕ್ ಇದೆಯಾ ಎಂದು ಜಡ್ಜ್ ಪ್ರಶ್ನೆ ಮಾಡಿದ್ದರು. ಪಾಸ್ಪೋರ್ಟ್ ವಶಕ್ಕೆ ಪಡೆಯುವ ಷರತ್ತು ವಿಧಿಸಲು ಸರ್ಕಾರಿ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿ ಹಿನ್ನೆಲೆಯಲ್ಲಿ ಪಾಸ್ಪೋರ್ಟ್ ಸರೆಂಡರ್ ಮಾಡಲು ಆದೇಶ ನೀಡಲಾಗಿದೆ.
ಈ ವಿಚಾರವಾಗಿ ಮಾತನಾಡಿರುವ ದರ್ಶನ್ ಪರ ವಕೀಲ ಎಂದು ಸುನೀಲ್ , ‘ಮಧ್ಯಂತರ ಜಾಮೀನು ಅಷ್ಟೇ. ರೆಗ್ಯುಲರ್ ಬೇಲ್ ಮೇಲೆ ಅವರನ್ನು ಹೊರಕ್ಕೆ ತರಬೇಕಿದೆ. ಆ ಜವಾಬ್ದಾರಿ ನಮ್ಮ ಮೇಲೆ ಇದೆ’ ಎಂದಿದ್ದಾರೆ.
ಇನ್ನು ಸಾಮಾನ್ಯ ವ್ಯಕ್ತಿಗಳ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆ ಆಗಲು ಕೆಲ ದಿನಗಳ ಸಮಯ ಬೇಕಾಗುತ್ತದೆ. ಆದರೆ ದರ್ಶನ್ ಪ್ರಕರಣದಲ್ಲಿ ಹೀಗಾಗುವುದಿಲ್ಲ. ದರ್ಶನ್ ಬಹುತೇಕ ಇಂದೇ ಅಂದರೆ ಅಕ್ಟೋಬರ್ 30ರಂದೇ ಜೈಲಿನಿಂದ ಹೊರಗೆ ಬರುವ ಸಾಧ್ಯತೆ ಇದೆ. ನ್ಯಾಯಾಲಯದ ಆದೇಶ ಪ್ರತಿಯನ್ನು ಬೈ ಹ್ಯಾಂಡ್ ಬಳ್ಳಾರಿ ಜೈಲಿಗೆ ತಲುಪಿಸಲಾಗುತ್ತದೆ. ಆದೇಶ ಹೊರಬಿದ್ದ ಬಳಿಕ ಆದೇಶ ಪ್ರತಿಯನ್ನು ಪ್ರಿಂಟ್ ಹಾಕಿಸಿಕೊಂಡು ದರ್ಶನ್ ಪರವಾದವರು ಆದೇಶ ಪ್ರತಿಯನ್ನು ಬಳ್ಳಾರಿ ಜೈಲಿಗೆ ಹೋಗಿ ತಲುಪಿಸುತ್ತಾರೆ. ಆದೇಶ ಪ್ರತಿ ತೆಗೆದುಕೊಳ್ಳುವ ಜೈಲು ಸಿಬ್ಬಂದಿ ಅದನ್ನು ಪರಿಶೀಲಿಸಿ ದರ್ಶನ್ ಅನ್ನು ಬಿಡುಗಡೆಗೊಳಿಸಲಿದ್ದಾರೆ.
ಬೆಂಗಳೂರಿನಿಂದ ಬಳ್ಳಾರಿ ತುಸು ದೂರವೇ ಇದೆಯಾದರೂ ಸಹ ಸಂಜೆ ವೇಳೆಗೆ ದರ್ಶನ್ರ ಜಾಮೀನು ಪ್ರತಿ ಬಳ್ಳಾರಿ ಜೈಲು ತಲುಪಲಿದೆ. ಜಾಮೀನು ಆದೇಶ ದೊರೆತಾಗ ಬಿಡುಗಡೆ ಮಾಡಬೇಕು ಎಂಬ ನಿಯಮ ಇರುವ ಕಾರಣ, ತಡವಾದರೂ ಸಹ ಬಿಡುಗಡೆ ಮಾಡಲಿದ್ದಾರೆ.
Leave a Comment