ರಾಜಾರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ. . ದೂರ; ಬಹುಕಾಲದ ಸಂಬಂಧಕ್ಕೆ ಬ್ರೇಕ್​ ಹಾಕಿದ ಕಪಲ್ಸ್

Rajaranii
Spread the love

ನ್ಯೂಸ್ ಆ್ಯರೋ: ಸೋಷಿಯಲ್​ ಮೀಡಿಯಾದಲ್ಲಿ ಆಕ್ವೀವ್​ ಆಗಿರೋ ಜೋಡಿಗಳು ಒಂದೊಂದಾಗಿಯೇ ದೂರ ಆಗುತ್ತಿವೆ. ವೈಯಕ್ತಿಕ ಜೀವನ ತುಂಬಾ ಸೋಷಿಯಲ್​ ಆಗ್ತಿರೋದಕ್ಕೋ ಅಥವಾ ಅಭದ್ರತೆ ಭಾವನೆ ಇಂದಲೂ ಸಂಬಂಧ , ಬಾಂಧವ್ಯಗಳ ಕೊಂಡಿ ಸಡಿಲವಾಗ್ತಿವೆ.

Jayashree 1200x900 1

ಚಂದನ್​ ನಿವೇದಿತಾ ಡೈವರ್ಸ್ ನಂತರ ರಾಜಾರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ ಆಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ರಾಜಾರಾಣಿ ರೀಲೋಡೆಡ್​ ಕಂಪ್ಲೀಟ್​ ಆಗಿರೋ ಸಂಭ್ರಮ ಇನ್ನು ಹಸಿಯಾಗಿಯೇ ಇರುವಾಗಲೇ ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್‌​ ಜೋಡಿ ಬಹುಕಾಲದ ಸಂಬಂಧಕ್ಕೆ ಬ್ರೇಕ್​ ಹಾಕಿದೆ ಎನ್ನಲಾಗ್ತಿದೆ. ಈ ಜೋಡಿ ರಾಜಾ ರಾಣಿ ಶೋಗೆ ಕಾಲಿಟ್ಟಾಗಿದ್ದಗಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಇದಕ್ಕೆ ಕಾರಣ ಅವರ ಮದುವೆ ವಿಚಾರ.

Jayashree1

ಶಾಸ್ತ್ರೋಕ್ತವಾಗಿ ನಾವು ಮದುವೆ ಆಗಿಲ್ಲ. ಆದರೆ ಪತಿ ಪತ್ನಿ ಹೇಗೆ ಇರುತ್ತಾರೋ ನಾವು ಹಾಗೇ ಇದ್ದೀವಿ. ನಮಗೆ ಮದುವೆ ಆಗಬಾರದು ಅಂತೇನಿಲ್ಲ. ಯಾಕೋ ಮದುವೆಗೆ ಟೈಮ್​ ಕೂಡಿ ಬಂದಿಲ್ಲ ಅಂತ ಹೇಳಿಕೊಂಡಿದ್ರು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ರಾಜಾರಾಣಿ ಶೋನಲ್ಲಿ ಫ್ಯಾಮಿಲಿ ರೌಂಡ್​ ಅಂತ ಬಂದಾಗ ನಿಶ್ಚಿತಾರ್ಥದ ಕಾರ್ಯಕ್ರಮಗಳು ಜರುಗಿದ್ವು. ಜಯಶ್ರೀ-ಸ್ಟಿವ್ ಶೀಘ್ರದಲ್ಲೇ ಮದುವೆ ಆಗುತ್ತೇವೆ ಅಂತ ಕೂಡ ಅನೌನ್ಸ್ ಮಾಡಿದ್ದರು.

ಈಗ ಈ ಜೋಡಿ ಬ್ರೇಕಪ್​ ಆಗಿರೋ ಸುದ್ದಿ ಎಲ್ಲೇಡೆ ಹರಿದಾಡ್ತಿದೆ. ಇನ್ನೂ ಇದಕ್ಕೆ ಸಾಕ್ಷಿ ಎಂಬಂತೆ ಜಯಶ್ರೀ ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪರಸ್ಪರ ಅನ್​ ಫಾಲೋ ಮಾಡಿಕೊಂಡಿದ್ದಾರೆ. ಅಷ್ಟೇಯಲ್ಲ, ಜೊತೆಗಿರುವ ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ. ಅಧಿಕೃತವಾಗಿ ಜಯಶ್ರೀ ಅಥವಾ ಸ್ಟಿವ್​ ಈ ಬಗ್ಗೆ ಹೇಳಿಕೊಂಡಿಲ್ಲ.

Leave a Comment

Leave a Reply

Your email address will not be published. Required fields are marked *

error: Content is protected !!