ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ಮತ್ತೆ ಉಗ್ರರ ದಾಳಿ; ಸೈನಿಕರ ವಾಹನಗಳ ಮೇಲೆ ಹಲವು ಸುತ್ತು ಗುಂಡಿನ ದಾಳಿ
ನ್ಯೂಸ್ ಆ್ಯರೋ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ನಲ್ಲಿ ಭದ್ರತಾ ಪಡೆಗಳ ವಾಹನಗಳ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ಯೋಧರಿಗೆ ಸಾವು ನೋವು ಸಂಭವಿಸಿದೆಯಾ ಎನ್ನುವ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ.
ಮಾಧ್ಯಮಗಳಿಗೆ ಸಿಕ್ಕಿರುವ ಪ್ರಾಥಮಿಕ ವರದಿ ಪ್ರಕಾರ ಅಖ್ನೂರ್ ನಗರದ ಜೋಗವಾನ್ ಎಂಬಲ್ಲಿ ಉಗ್ರಗಾಮಿಗಳು ಸೈನಿಕರ ವಾಹನಗಳ ಮೇಲೆ ಹಲವು ಸುತ್ತು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಭದ್ರತಾ ಪಡೆಗಳು ಉಗ್ರರನ್ನು ಹಿಡಿಯಲು ಶೋಧ ಕಾರ್ಯಾಚರಣೆ ಕೈಗೊಂಡಿವೆ ಎನ್ನುವ ಮಾಹಿತಿ ಸಿಕ್ಕಿದೆ.
ಮತ್ತೊಂದು ವರದಿ ಪ್ರಕಾರ ಅಖ್ನೂರ್ ಸೆಕ್ಟರ್ನ ಬಟ್ಟಲ್ ಎಂಬ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ಮಧ್ಯೆ ಗುಂಡಿನ ಗಾಳಗ ನಡೆದಿದೆ. ಭದ್ರತಾ ಪಡೆಗಳ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು ಇದೇ ಉಗ್ರರ ಗುಂಪಿರಬಹುದು ಎಂದು ಶಂಕಿಸಲಾಗಿದೆ.
ಮೂರರಿಂದ ನಾಲ್ಕು ಉಗ್ರಗಾಮಿಗಳು 15ರಿಂದ 20 ಸುತ್ತು ಗುಂಡಿನ ದಾಳಿ ನಡೆಸಿದ್ದರು. ಅಖ್ನೂರ್ ಸೆಕ್ಟರ್ ಪ್ರದೇಶವು ಉಗ್ರರ ದಾಳಿಗೆ ಕುಖ್ಯಾವಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಪ್ರದೇಶಗಳಲ್ಲಿ ಹರಿದು ಹೋಗುವ ಮನಾವರ್ ತಾವಿ ನದಿ ಮೂಲಕ ಉಗ್ರರು ಭಾರತದ ಗಡಿಯೊಳಗೆ ನುಸುಳಿ ಭದ್ರತಾ ಪಡೆಗಳ ಮೇಲೆ ದಾಳಿ ಎಸಗಿದ ಹಲವು ಘಟನೆಗಳು ಹಿಂದೆ ನಡೆದಿದ್ದಿದೆ. ಇದೇ ಜೋಗವಾನ್ನಲ್ಲಿರುವ ಹಾಸನ್ ದೇವಸ್ಥಾನಕ್ಕೆ ನುಗ್ಗಿರುವ ಉಗ್ರರು, ಮಂದಿರದಲ್ಲಿನ ವಿಗ್ರಹಗಳಿಗೆ ಹಾನಿ ಮಾಡಿದ್ದಾರೆನ್ನಲಾಗಿದೆ.
Leave a Comment