ʼಐರನ್ ಮ್ಯಾನ್ʼ ಆಗಿ ಸಂಸದ ತೇಜಸ್ವಿ ಸೂರ್ಯ ವಿಶೇಷ ಸಾಧನೆ; ಖುಷಿಪಟ್ಟು ಪ್ರಧಾನಿ ಮೋದಿ ಹೇಳಿದ್ದೇನು ?
ನ್ಯೂಸ್ ಆ್ಯರೋ: ಗೋವಾದಲ್ಲಿ ನಡೆದ ಐರನ್ ಮ್ಯಾನ್ 70.3 ಟ್ರಯಥ್ಲಾನ್ ರೇಸ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ವಿಶೇಷ ಸಾಧನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಸದರು ಟ್ರಯಥ್ಲಾನ್ ರೇಸ್ ಅನ್ನು 8 ಗಂಟೆ 27 ನಿಮಿಷ 32 ಸೆಕೆಂಡ್‌ಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ವಿಶ್ವ ಟ್ರಯಥ್ಲಾನ್ ಕಾರ್ಪೊರೇಷನ್ ಆಯೋಜಿಸಿದ್ದ ರೇಸಿಂಗ್ನಲ್ಲಿ ಸುಮಾರು 50 ದೇಶಗಳ ಅಥ್ಲೀಟ್ಸ್ ಭಾಗವಹಿಸಿದ್ದರು. ಈ ಸ್ಪರ್ಧೆಯು ಮೂರು ವಿಭಾಗಗಳನ್ನು ಒಳಗೊಂಡಿತ್ತು. 1.9 ಕಿಲೋ ಮೀಟರ್ ಈಜು, 90 ಕಿಲೋ ಮೀಟರ್ ಸೈಕ್ಲಿಂಗ್ ಮತ್ತು 21.1 ಕಿಲೋ ಮೀಟರ್ ಓಟ ಸೇರಿದಂತೆ ಒಟ್ಟು 113 ಕಿಲೋ ಮೀಟರ್ ದೂರ ಕ್ರಮಿಸಬೇಕಾಗಿತ್ತು. ಇದನ್ನು ತೇಜಸ್ವಿ ಸೂರ್ಯ ಯಶಸ್ವಿಯಾಗಿ ಪೂರ್ಣಗೊಳಸಿದ್ದಾರೆ. ಜೊತೆಗೆ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಐರನ್ ಮ್ಯಾನ್ 70.3 ಸ್ಪರ್ಧೆಯು ಕ್ರೀಡೆಗೆ ಹೆಚ್ಚು ಪ್ರಸಿದ್ಧವಾಗಿದೆ. ದೇಶ ಮತ್ತು ವಿಶ್ವದ ಕ್ರೀಡಾಪಟುಗಳ, ಫಿಟ್ನೆಸ್ ಪ್ರಿಯರ ಪ್ರಮುಖ ಸ್ಪರ್ಧೆ ಇದಾಗಿದೆ. ಗೆದ್ದಿರುವ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ, ಕಳೆದ 4 ತಿಂಗಳಿಂದ ನಾನು ಫಿಟ್ನೆಸ್ಗಾಗಿ ಕಷ್ಟಕರವಾದ ತರಬೇತಿ ಪಡೆದಿದ್ದೆ. ಇದರಲ್ಲಿ ನಾನು ಯಶಸ್ವಿಯಾಗಿದ್ದೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಫಿಟ್ ಇಂಡಿಯಾ ಅಭಿಯಾನವೇ ಸ್ಫೂರ್ತಿ ಎಂದಿದ್ದಾರೆ.
ತೇಜಸ್ವಿ ಸೂರ್ಯರ ಈ ಸಾಧನೆಯನ್ನು ನರೇಂದ್ರ ಮೋದಿ ಶ್ವಾಘಿಸಿದ್ದಾರೆ. ಇದು ಯುವಕರಿಗೆ ಫಿಟ್‌ನೆಸ್ ಸಂಬಂಧಿತ ಚಟುವಟಿಕೆಗಳನ್ನು ಮುಂದುವರಿಸಲು ಸ್ಫೂರ್ತಿ ನೀಡುತ್ತದೆ. ಈ ಬಗ್ಗೆ ನನಗೆ ಭರವಸೆ ಇದೆ ಎಂದಿದ್ದಾರೆ.
Leave a Comment