ಇಂತಾ ಹೆಂಡತಿಯರೇ ಗಂಡನಿಗೆ ನಿಜವಾದ ಶತ್ರುಗಳಂತೆ; ಚಾಣಕ್ಯ ಹೀಗೆ ಹೇಳಿದ್ದು ಯಾರ ಬಗ್ಗೆ ಗೊತ್ತಾ ?

Kautilya's Mandala Theory
Spread the love

ನ್ಯೂಸ್ ಆ್ಯರೋ: ಚಾಣಕ್ಯ ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ತತ್ವಜ್ಞಾನಿ, ಸಲಹೆಗಾರ ಮತ್ತು ಶಿಕ್ಷಕ ಎಂದು ಹೆಸರು ಪಡೆದಿದ್ದಾರೆ. ಅವರು ಚಂದ್ರಗುಪ್ತ ಮೌರ್ಯರು ಅಧಿಕಾರಕ್ಕೆ ಏರಲು ಮತ್ತು ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ರಾಜನಾಗಲು ಸಹಾಯ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ.

ಪ್ರಸ್ತುತ ಚಾಣಕ್ಯ ನೀತಿ-ಶಾಸ್ತ್ರ ಪುಸ್ತಕವು ಭಾರತೀಯ ಇತಿಹಾಸದಲ್ಲಿ ಅನೇಕ ರೀತಿಯಾಗಿ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಚಾಣಕ್ಯ ನೀತಿ ಶಾಸ್ತ್ರವು 17 ಅಧ್ಯಾಯಗಳನ್ನು ಹೊಂದಿದೆ ಮತ್ತು ಪ್ರತಿ ಅಧ್ಯಾಯವು ಜೀವನ, ಸ್ನೇಹ, ಕರ್ತವ್ಯ, ಸ್ವಭಾವ, ಹೆಂಡತಿ, ಮಕ್ಕಳು, ಹಣ, ವ್ಯವಹಾರ ಮತ್ತು ಮಾನವ ಜೀವನದ ಪ್ರಮುಖ ಭಾಗವಾಗಿರುವ ಎಲ್ಲಾ ವಿಷಯಗಳ ಬಗ್ಗೆ ಹೇಳುತ್ತದೆ.

ಆಚಾರ್ಯ ಚಾಣಕ್ಯ ಪುರುಷ ಮತ್ತು ಮಹಿಳೆ ಇಬ್ಬರ ಗುಣ ಮತ್ತು ದೋಷಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಾರೆ. ಚಾಣಕ್ಯ ಹೇಳಿರುವ ಪ್ರಕಾರ ಮಹಿಳೆಯರ ಕೆಲವೊಂದು ದುರ್ಗುಣಗಳು ಅವರ ಗಂಡನಿಗೆ ಮಾರಕವಾಗಬಹುದು. ಒಳ್ಳೆಯ ಗುಣವಿಲ್ಲದ ಹೆಂಗಸರು ಗಂಡನಿಗಿರೋ ಶತ್ರುಗಳಿಗಿಂತ ಕಡಿಮೆಯಿಲ್ಲವಂತೆ. ಅಂತಹ ಮಹಿಳೆಯರು ತಮ್ಮ ಗಂಡನ ಜೀವನವನ್ನು ನರಕಕ್ಕಿಂತ ಕೆಟ್ಟದಾಗಿ ಮಾಡುತ್ತಾರ ಎಂದು ಹೇಳಲಾಗಿದೆ.

ಕೆಟ್ಟ ಸಹವಾಸ ಅಥವಾ ಕೆಟ್ಟ ಕೆಲಸ ಮಾಡುವ ಮಹಿಳೆಯರು ಪುರುಷರ ಜೀವನವನ್ನೇ ಹಾಳುಮಾಡುತ್ತಾರಂತೆ. ಇದು ಒಬ್ಬ ಪುರುಷನ ಇಡೀ ಜೀವನಕ್ಕೆ ಕಾರಣವಾಗ್ಬಹುದು. ಕೆಲವು ಮಹಿಳೆಯರು ತುಂಬಾನೇ ಆಸೆಗಳನ್ನು ಹೊಂದಿರುತ್ತಾರೆ. ಇದು ಕೆಲವೊಮ್ಮೆ ದುರಾಸೆಗೆ ಕಾರಣವಾಗಬಹುದು. ಅಂತಹ ಹೆಂಡತಿಯರು ಇಂತಹವರು ಗಂಡನ ಬಳಿ ಆಗಾಗ ಹಣ ಕೇಳುತ್ತಲೇ ಇರುತ್ತಾರೆ. ಹೆಂಡತಿಯ ಇಂತಹ ಚಟುವಟಿಕೆಗಳು ಪತಿಗೆ ಬಹಳಷ್ಟು ಹಾನಿಯನ್ನುಂಟುಮಾಡುತ್ತವೆ.

ಕೆಲವು ಮಹಿಳೆಯರು ಯಾವುದೇ ಕೆಲಸ ಮಾಡಬೇಕೆಂದರು ಗಂಡನ ಜೊತೆ ಕೇಳದೆ ತಮಗೆ ಬೇಕಾದಂತೆ ಮುಂದುವರಿಯುತ್ತಾರೆ. ಪತಿ ಬುದ್ಧಿವಂತನಾದರೂ ಅವನಿಂದ ಮಾರ್ಗದರ್ಶನ ಪಡೆಯುವುದಿಲ್ಲ, ಅಂತಹ ಮಹಿಳೆಯರು ಪುರುಷರ ಜೀವನವನ್ನು ಹಾಳುಮಾಡಬಹುದು. ಇನ್ನು ಮೇಲೆ ತಿಳಿಸಿದ ವರ್ತನೆಯನ್ನು ಹೊಂದಿರುವ ಮಹಿಳೆಯರು ಒಬ್ಬ ಪುರುಷನ ಜೀವನವನ್ನೇ ಹಾಳುಮಾಡಬಹುದು. ಇದು ಒಬ್ಬ ಗಂಡನಾದವನ ಆರ್ಥಿಕ ಪರಿಸ್ಥಿತಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕುಗ್ಗಿಸಬಹುದು. ಆ ಮನುಷ್ಯ ಜೀವನದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ.

Leave a Comment

Leave a Reply

Your email address will not be published. Required fields are marked *

error: Content is protected !!