ಚರಂಡಿಯಲ್ಲಿ ಸಿಕ್ತು ಎರಡೂವರೆ ಲಕ್ಷ ರೂಪಾಯಿ; ಎಲ್ಲಿಂದ ಬಂತು ಈ ಹಣ, ಅಸಲಿಗೆ ಅಲ್ಲಿ ಆಗಿದ್ದೇನು?
ನ್ಯೂಸ್ ಆ್ಯರೋ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟ್ಟಾಡಿಯಲ್ಲಿ ಒಂದು ವಿಶಿಷ್ಟ ದೃಶ್ಯ ಕಂಡುಬಂದಿದೆ. ಹೌದು ಅಟ್ಪಾಡಿಯಲ್ಲಿರುವ ಚರಂಡಿಯೊಂದರಲ್ಲಿ 500 ರೂಪಾಯಿಯ ನೋಟುಗಳು ಚಲ್ಲಾಪಿಲ್ಲಿಯಾಗಿ ಹರಿದಾಡಿದೆ. ಇದನ್ನು ನೋಡಿದ ಜನರು ಚರಂಡಿಯಲ್ಲಿ ಬಿದ್ದಿರುವ ಆ ನೋಟುಗಳನ್ನು ಹಿಡಿಯಲು ಅಪಾರ ಸಂಖ್ಯೆಯಲ್ಲಿ ಮುಗಿಬಿದ್ದಿದ್ದಾರೆ. ಇದರೊಂದಿಗೆ ಚರಂಡಿಯಲ್ಲಿ ಹರಿಯುತ್ತಿದ್ದ ನೋಟುಗಳನ್ನು ಹಿಡಿಯಲು ಅಪಾರ ಸಂಖ್ಯೆಯಲ್ಲಿ ಜನರು ಮುಗಿಬಿದ್ದರು.
ಶನಿವಾರ (ಅ.19) ಅಟ್ಟಾಡಿಯಲ್ಲಿ ಜನರು, ವಾರದ ಮಾರುಕಟ್ಟೆಗೆ ಎಂದು ಬಂದಿದ್ದರು. ಇದರ ನಡುವೆ ಜನರು ಚರಂಡಿಯಲ್ಲಿ 500 ರೂಪಾಯಿಗಳನ್ನು ನೋಡಿದ್ದಾರೆ. ಇದಾದ ಬಳಿಕ ನೋಟುಗಳನ್ನು ಹಿಡಿಯಲು ಜನರು ಚರಂಡಿಗೆ ಹಾರಿದ್ದಾರೆ. ಇದರೊಂದಿಗೆ ಸುಮಾರು ಎರಡ ರಿಂದ ಎರಡೂವರೆ ಲಕ್ಷ ರೂಪಾಯಿಗಳನ್ನು ಜನರು ಸಂಗ್ರಹಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಮಾಹಿತಿ ಪ್ರಕಾರ ಅಟಪಾಡಿ ಪೇಟೆಯಲ್ಲಿರುವ ಅಂಬಾಬಾಯಿ ದೇವಸ್ಥಾನದ ಪಕ್ಕದಲ್ಲಿರುವ ಚರಂಡಿಯ ಸಮೀಪದಲ್ಲಿರುವ ಚರಂಡಿಯಲ್ಲಿ 500 ರೂಪಾಯಿಯ ನೋಟುಗಳು ಹರಿದು ಬರುತ್ತಿದ್ದಂತೆ ಮೊದಲಿಗೆ ಇದು ನಕಲಿ ನೋಟು ಎಂದು ಭಾವಿಸಿದ್ದರು.
ಇದಾದ ನಂತರ ಕೆಲವರು ನೀರಿಗೆ ನುಗ್ಗಿ ಈ ನೋಟುಗಳು ಅಸಲಿಯೇ? 500 ರೂಪಾಯಿ ನೋಟು ಅಸಲಿ ಎಂಬ ಮಾಹಿತಿ ಸಿಕ್ಕ ಬಳಿಕ ಈ ಸುದ್ದಿ ಗಾಳಿಯಂತೆ ಎಲ್ಲೆಡೆ ಹಬ್ಬಿತ್ತು. ಇದಾದ ಬಳಿಕ ನೋಟುಗಳನ್ನು ಸಂಗ್ರಹಿಸಲು ಪೈಪೋಟಿಗೆ ಇಳಿದಿದ್ದಾರೆ. ಇದರೊಂದಿಗೆ ಲಕ್ಷಗಟ್ಟಲೆ ಹಣ ವಸೂಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಂತರ ಈ ಸುದ್ದಿ ಇಡೀ ಪ್ರದೇಶದಲ್ಲಿ ಕಾಳಿಚ್ಚಿನಂತೆ ಹರದಾಡಿದೆ.
ಅಷ್ಟರಲ್ಲಿ ಮಾಹಿತಿ ಪಡೆದ ಅಟ್ಪಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಜನರನ್ನು ಚರಂಡಿಯಿಂದ ಹೊರಗೆಳೆದು ನೋಟುಗಳನ್ನು ಸಂಗ್ರಹಿಸುವ ಕಾರ್ಯ ಆರಂಭಿಸಿದ್ದಾರೆ. ಆದರೆ ಈ ನೋಟುಗಳು ಎಲ್ಲಿಂದ ಬಂದವು? ಯಾರಿಗೆ ಸೇರಿದ್ದು, ಹಾಗೂ ಯಾಕೆ ಚರಂಡಿಯಲ್ಲಿ ತೆಲಿ ಬಿಡಲಾಗಿತ್ತು? ಎನ್ನುವ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Leave a Comment