ಓಯೋ ರೂಮ್‌ ಅಲ್ಲ…ಸಭ್ಯ ರೀತಿಯಲ್ಲಿ ವರ್ತಿಸಿ; ವೈರಲ್‌ ಆಯ್ತು ಕ್ಯಾಬ್‌ನಲ್ಲಿ ಹಾಕಿದ ಸೂಚನಾ ಫಲಕ

'No Romance, This Is Cab
Spread the love

ನ್ಯೂಸ್ ಆ್ಯರೋ: ಪ್ರೀತಿಸಿದವರಿಗೆ ಲೋಕದ ಅರಿವೇ ಇರೋಲ್ಲ ಎನ್ನುತ್ತಾರೆ. ಇದಕ್ಕೆ ಉದಾಹರಣೆಯೆಂಬಂತೆ ಸಾಕಷ್ಟು ಪ್ರೇಮಿಗಳು ಪಾರ್ಕ್‌, ಬಸ್‌, ಟ್ರೈನ್‌ ಸೇರಿದಂತೆ ಎಲ್ಲೆಂದರಲ್ಲಿ ರೊಮ್ಯಾನ್ಸ್‌ ಮಾಡುತ್ತಾ ನಿಂತುಬಿಡುತ್ತಾರೆ. ಕ್ಯಾಬ್‌ಗಳಲ್ಲಿಯೂ ಕೂಡಾ ಕೆಲ ಪ್ರೇಮಿಗಳು ಇಂತಹ ಹುಚ್ಚಾಟಕ್ಕೆ ಕೈ ಹಾಕುತ್ತಾರೆ.

ಈ ಹುಚ್ಚು ಪ್ರೇಮಿಗಳ ಕಾಟವನ್ನು ತಾಳಲಾರದೆ ಇಲ್ಲೊಬ್ಬ ಕ್ಯಾಬ್‌ ಡ್ರೈವರ್‌ ಇದು ಕ್ಯಾಬ್‌ ಕಣ್ರೀ… ಓಯೋ ಅಲ್ಲ; ದಯವಿಟ್ಟು ಇಲ್ಲಿ ರೊಮ್ಯಾನ್ಸ್‌ ಮಾಡ್ಬೇಡಿ ಅಂತ ತನ್ನ ಕಾರಿನಲ್ಲಿ ಸೂಚನಾ ಫಲಕವನ್ನು ನೇತು ಹಾಕಿ ವಾರ್ನಿಂಗ್‌ ಕೊಟ್ಟಿದ್ದಾರೆ. ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಬಹುಶಃ ಕ್ಯಾಬ್‌ ಡ್ರೈವರ್‌ ನಮ್ಮಂತೆ ಸಿಂಗಲ್‌ ಇರ್ಬೇಕು ಅದಕ್ಕೆ ಈ ರೀತಿ ಸೂಚನಾ ಫಲಕ ಹಾಕಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಹೈದರಾಬಾದ್‌ನ ಕ್ಯಾಬ್‌ ಡ್ರೈವರ್‌ ಒಬ್ಬರು ಕ್ಯಾಬ್‌ನಲ್ಲಿ ಪ್ರೇಮಿಗಳು ಮಾಡುವ ಕಿತಾಪತಿಗಳನ್ನು ನೋಡಲಾರದೆ ಇದು ಕ್ಯಾಬ್‌ ಕಣ್ರೀ, ಓಯೋ ರೂಮ್‌ ಅಲ್ಲ ದಯವಿಟ್ಟು ಇಲ್ಲಿ ರೊಮ್ಯಾನ್ಸ್‌ ಮಾಡ್ಬೇಡಿ ಎಂದು ತಮ್ಮ ಕಾರಿನಲ್ಲಿ ದೊಡ್ಡದಾಗಿ ಸೂಚನಾ ಫಲಕವನ್ನು ಹಾಕಿಸಿಕೊಂಡಿದ್ದಾರೆ. ಈ ಕುರಿತ ಫೋಟೋವನ್ನು HiHyderabad ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್‌ ಆಗುತ್ತಿರುವ ಫೋಟೋದಲ್ಲಿ ʼನೋ ರೊಮ್ಯಾನ್ಸ್‌, ಇದು ಕ್ಯಾಬ್‌ ಹೊರತು ಓಯೋ ರೂಮ್‌ ಅಥವಾ ಯಾವುದೇ ಪ್ರೈವೆಟ್‌ ಸ್ಥಳವಲ್ಲ. ದಯವಿಟ್ಟು ಇಲ್ಲಿ ಶಾಂತ ರೀತಿಯಲ್ಲಿ ವರ್ತಿಸಿ ಎಂದು ಎಚ್ಚರಿಕೆಯ ಸಂದೇಶವನ್ನು ಬರೆದಿರುವ ದೃಶ್ಯವನ್ನು ಕಾಣಬಹುದು. ಬಳಕೆದಾರರು ʼಪಾಪ ಆತ ಪ್ರೇಮಿಗಳ ಕಾಟ ತಡೆಯಲಾರದೆ ಈ ವಾರ್ನಿಂಗ್‌ ಕೊಟ್ಟಿದ್ದಾನೆʼ ಎಂದು ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!