ತಿರುಮಲ ಲಡ್ಡು ವಿವಾದ; ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ಗೆ ಬಿಗ್ ಶಾಕ್
ನ್ಯೂಸ್ ಆ್ಯರೋ: ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್‌ಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ತಿರುಮಲ ಲಡ್ಡು ಕಲಬೆರಕೆ ವಿವಾದದ ಕುರಿತು ಪವನ್ ನೀಡಿದ್ದ ಹೇಳಿಕೆ ಅವರಿಗೆ ಭಾರೀ ಆಘಾತ ಎದುರಾಗುವಂತೆ ಮಾಡಿದೆ ಎಂದು ಹೇಳಬಹುದು. ಏಕೆಂದರೆ ಹೈದರಾಬಾದ್ ಸಿಟಿ ಸಿವಿಲ್ ಕೋರ್ಟ್ ಪವನ್ ಕಲ್ಯಾಣ್ ಗೆ ಸಮನ್ಸ್ ಜಾರಿ ಮಾಡಿದೆ.
ಸಮ್ಸನ್ ನಲ್ಲಿ ನವೆಂಬರ್ 22ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಡಿಸಿಎಂ ಪವನ್ ಗೆ ಸೂಚಿಸಲಾಗಿದೆ. ತಿರುಮಲ ಲಡ್ಡು ಬಗ್ಗೆ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತೆ ಪವನ್ ಕಾಮೆಂಟ್ ಮಾಡಿದ್ದಾರೆ ಎಂದು ವಕೀಲ ರಾಮರಾವ್ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಆಲಿಸಿದ ನ್ಯಾಯಾಲಯ ಅವರಿಗೆ ನೋಟಿಸ್ ನೀಡಿದೆ.
ಅಯೋಧ್ಯೆಗೆ ಕಳುಹಿಸಿದ್ದ ತಿರುಮಲ ಲಡ್ಡುವಿನಲ್ಲಿ ಕಲಬೆರಕೆ ಆಗಿದೆ ಎಂದು ಪವನ್ ಹೇಳಿದ್ದರು. ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಿ ಹಾಕಬೇಕು ಎಂದು ರಾಮರಾವ್ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು.
ಅಲ್ಲದೇ ಮತ್ತೊಮ್ಮೆ ಇಂತಹ ಹೇಳಿಕೆಗಳು ನೀಡದಂತೆ ಗ್ಯಾಗ್ ಆರ್ಡರ್ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈದರಾಬಾದ್ ಸಿಟಿ ಸಿವಿಲ್ ಕೋರ್ಟ್, ಪವನ್ ಕಲ್ಯಾಣ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
Leave a Comment