ಬಿಗ್ ಬಾಸ್ನಲ್ಲಿ ಬಿಗ್ ಫೈಟ್; ರಂಜಿತ್-ಜಗದೀಶ್ ಇಬ್ಬರೂ ಔಟ್
ನ್ಯೂಸ್ ಆ್ಯರೋ: ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡದಾಗಿ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಇದು ಕೇವಲ ಮಾತಿನ ಫೈಟ್ ಅಲ್ಲ, ಕೈಕೈ ಮಿಲಾಯಿಸಿ ನಡೆದ ಕುಸ್ತಿ. ಈ ಕಾರಣದಿಂದಲೇ ರಂಜಿತ್ ಹಾಗೂ ಜಗದೀಶ್ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎಂದು ವರದಿ ಹರಿದಾಡಿದೆ. ಈ ಫೈಟ್ನಿಂದ ದೊಡ್ಮನೆ ಪ್ರಕ್ಷುಬ್ದವಾಗಿದೆ ಎಂದು ಹೇಳಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.
ಕೆಲವು ದಿನಗಳಿಂದ ಮನೆಯಲ್ಲಿರುವ ಸದಸ್ಯರು ಲಾಯರ್ ಜಗದೀಶ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದರು, ಈ ವಿಚಾರವಾಗಿ ಉಗ್ರಂ ಮಂಜು, ನಟ ರಂಜಿತ್ ಮತ್ತು ತ್ರಿವಿಕ್ರಮ್ ಆಗಾಗ ಜಗಳವಾಡುತ್ತಿದ್ದರು. ಕಳೆದೆರಡು ದಿನಗಳಿಂದ ಬಿಗ್ ಬಾಸ್ ನೀಡುತ್ತಿರುವ ಆದೇಶವನ್ನೂ ಯಾರೂ ಪಾಲಿಸುತ್ತಿರಲಿಲ್ಲ ಹೀಗಾಗಿ ಬೇಸರಗೊಂಡು ಬ್ರೇಕ್ ತೆಗೆದುಕೊಳ್ಳುವುದಾಗಿ ಬಿಗಾ ಬಾಸ್ ಘೋಷಣೆ ಮಾಡಿದ್ದರು.
ಇದೀಗ ಬಿಗ್ ಬಾಸ್ ಆದೇಶದ ನಡುವೆಯೂ ಲಾಯರ್ ಜಗದೀಶ್ ಮತ್ತು ರಂಜಿತ್ ಕಿತ್ತಾಡಿಕೊಂಡಿದ್ದು, ಇಬ್ಬರನ್ನೂ ಮನೆಯಿಂದ ಹೊರ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.
ಈ ಗಾಳಿ ಸುದ್ದಿಗೆ ಪುಷ್ಟಿ ನೀಡುವಂತೆ, _rajuraj_01 ಎಂಬುವವರು ಲಾಯರ್ ಜಗದೀಶ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ಸ್ಟೇಟಸ್ಗೆ ಹಾಕಿ ಕೊಂಡಿದ್ದಾರೆ. ಇವತ್ತಿನ ಫೋಟೋ 16/10/24 ಎಂದು ಮೆನ್ಷನ್ ಮಾಡಿದ್ದು, ಮತ್ತಷ್ಟು ಊಹಾಪೋಹಗಳಿಗೆ ಎಡೆ ಮಾಡಿ ಕೊಟ್ಟಿದೆ. ಯಾವುದೋ ಬೆಂಗಳೂರಿನ ಔಟ್ ಸ್ಕರ್ಟ್ ಬಳಿ ಲಾಯರ್ ಜಗದೀಶ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಇದಾಗಿದ್ದು, ಬಿಗ್ ಬಾಸ್ ಮನೆಯಲ್ಲಿದ್ದಾಗ ಜಗದೀಶ್ ಧರಿಸುತ್ತಿದ್ದ ಕಪ್ಪು ಜಾಕೆಟ್ ಅನ್ನೇ ಈ ಫೋಟೋದಲ್ಲೂ ಧರಿಸಿದ್ದಾರೆ.
ಇನ್ನು ಮನೆಯಲ್ಲಿ ಕೊಂಚ ಕಿರಿಕಿರಿ ವಾತಾವರಣ ಸೃಷ್ಟಿ ಆಗಲು ಉಗ್ರಂ ಮಂಜು ಕಾರಣ ಎಂದು ವೀಕ್ಷಕರು ಕಾಮೆಂಟ್ ಮೂಲಕ ಆರೋಪಿಸುತ್ತಿದ್ದಾರೆ. ಅಲ್ಲದೇ ರಂಜಿತ್ ಹೊರ ಬಂದಿರುವ ಫೋಟೋ ಅಥವಾ ವಿಡಿಯೋ ಸಾಕ್ಷಿಯೂ ಸಿಕ್ಕಿಲ್ಲ. ಇಲ್ಲವಾದರೂ ಹೊರಗಿನಿಂದ ಪಬ್ಲಿಸಿಟಿ ಸಿಗಬೇಕು ಎಂದು ಜಗದೀಶ್ ತಂಡದವರು ಈ ಗೇಮ್ ಪ್ಲ್ಯಾನ್ ಮಾಡಿರಬಹುದು ಎಂಬ ಗೊಂದಲವಿದೆ.
Leave a Comment