ಬಿಜೆಪಿ ಶಾಸಕ ಮುನಿರತ್ನ ಜಾಮೀನು ವಿಚಾರ; ರೇಪ್ ಕೇಸ್ ಕುರಿತು ಕೋರ್ಟ್ ನಿಂದ ಮಹತ್ವದ ಆದೇಶ
ನ್ಯೂಸ್ ಆ್ಯರೋ: ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಇಂದು ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅತ್ಯಾಚಾರ ಕೇಸ್‌ನಲ್ಲಿ ಜೈಲು ಸೇರಿದ್ದ ಮುನಿರತ್ನ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.
ಮೊದಲಿಗೆ ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಕೇಸ್‌ನಲ್ಲಿ ಮುನಿರತ್ನ ಅವರ ಬಂಧನವಾಗಿತ್ತು. ಬಳಿಕ ಈ ಕೇಸ್‌ನಲ್ಲಿ ಜಾಮೀನು ಕೂಡ ಸಿಕ್ಕಿ ಹೊರಬರುವಷ್ಟರಲ್ಲಿ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದರು.
ಬಳಿಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು. ಸಂತ್ರಸ್ತ ಮಹಿಳೆಯು ಮುನಿರತ್ನ ತನ್ನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಹಲವರಿಗೆ ಹನಿಟ್ರ್ಯಾಪ್ ಕೂಡ ಮಾಡುತ್ತಿದ್ದರು. ಇದರಲ್ಲಿ ಮಾಜಿ ಸಿಎಂಗಳೂ ಇದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.
ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿತ್ತು. ಮೊದಲಿಗೆ ಕಸ್ಟಡಿಯಲ್ಲಿದ್ದ ಮುನಿರತ್ನ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಮುನಿರತ್ನ ಅವರನ್ನು ಕರೆದೊಯ್ಯಲಾಗಿತ್ತು. ತಿಂಗಳಿಗೂ ಹೆಚ್ಚು ಮುನಿರತ್ನ ಜೈಲುವಾಸದಲ್ಲಿದ್ದರು. ಇಂದು ಜಾಮೀನು ಸಿಕ್ಕಿರುವ ಹಿನ್ನೆಲೆ ಮುನಿರತ್ನ ರಿಲೀಫ್ ಆಗಿದ್ದಾರೆ.
Leave a Comment