ದರ್ಶನ್ ಗೆ ಇಂದಾದ್ರೂ ಸಿಗುತ್ತಾ ಜಾಮೀನು: ಬೇಲ್ ಸಿಗದಿದ್ದರೆ ಮುಂದೇನು?
ನ್ಯೂಸ್ ಆ್ಯರೋ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 4 ತಿಂಗಳೇ ಕಳೆದು ಹೋಗಿದೆ. ಈಗಾಗ್ಲೇ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಲವು ಬಾರಿ ಮುಂದೂಡಲಾಗಿದೆ. ಇಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ದರ್ಶನ್ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಮೂಡಿದೆ.
ಇಂದಾದ್ರು ದರ್ಶನ್ ಗೆ ಜಾಮೀನು ಸಿಗುತ್ತಾ?, ಬಳ್ಳಾರಿ ಕಾರಾಗೃಹದಿಂದ ಬಿಡುಗಡೆ ಆಗುತ್ತಾರಾ? ಎಂಬ ಚರ್ಚೆಗಳು ಶುರುವಾಗಿವೆ. ದರ್ಶನ್‌ಗೆ ಬೇಲ್ ಸಿಗಬಹುದು ಎನ್ನುವುದಾದರೆ ಯಾವೆಲ್ಲಾ ಕಾರಣಗಳಿಗಾಗಿ ಸಿಗಬಹುದು? ಬೇಲ್ ಸಿಗೋದು ಡೌಟ್ ಎನ್ನಲು ಕಾರಣಗಳೇನು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.
ದರ್ಶನ್ ಅವರ ಜಾರ್ಮಿನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57 ನೇ ಸಿಸಿಎಚ್ ನ್ಯಾಯಾಲಯ ಸುದೀರ್ಘ ವಾದ – ಪ್ರತಿವಾದ ಆಲಿಸಿರುವ ನ್ಯಾಯಾಧೀಶರು ಇಂದಿಗೆ ಅಂತಿಮ ಆದೇಶ ಕಾಯ್ದಿರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಸ್ಯಾಂಡಲ್ ವುಡ್ ಸಿನಿಮಾ ರಂಗದ ಚಿತ್ತ ಜೊತೆಗೆ ದರ್ಶನ್ ಅಭಿಮಾನಿಗಳ ಗಮನ ನ್ಯಾಯಾಲಯದ ಮೇಲಿದೆ.
ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ದರ್ಶನ್‌ಗೆ ಜಾಮೀನು ಕೊಡಿಸಲು ಶತಯಾಗತಾಯ ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಪ್ರಬಲ ವಾದ ಮಂಡನೆ ಕೂಡ ಮಾಡಿದ್ದಾರೆ. ದರ್ಶನ್ ಗೆ ಜಾಮೀನು ನೀಡದಂತೆ ಪ್ರಬಲವಾದ ಮಂಡನೆಗೆ ಅನೇಕ ಸಂಗತಿಗಳು, ಸಾಕ್ಷ್ಯಗಳು ಇವೆ. ದರ್ಶನ್ ವಿರುದ್ಧ ಸಾಕಷ್ಟು ಅಂಶಗಳು ಕಣ್ಣಿಗೆ ಕಾಣಿಸುತ್ತಿದ್ದು ಅದರಂತೆ ದರ್ಶನ್‌ಗೆ ಬೇಲ್ ನೀಡದಂತೆ ಸರ್ಕಾರಿ ವಕೀಲರು ವಾದ ಮಂಡಿಸಿದ್ದಾರೆ.
ಸದ್ಯ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕಾರಾಗೃಹ ಸೇರಿರುವ ದರ್ಶನ್, ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ನ್ಯಾಯಾಲಯವು ಜಾಮೀನು ನಿರಾಕರಿಸಿದರೆ ಅವರು ಹೈಕೋರ್ಟ್‌ನ ಮೊರೆ ಹೋಗುವ ಸಾಧ್ಯತೆ ಇದೆ. ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಈಗಾಗಲೇ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬೆನ್ನುನೋವಿನ ಕಾರಣಕ್ಕೆ ದರ್ಶನ್‌ಗೆ ಸಿಗುತ್ತಾ ಬೇಲ್?:
ದರ್ಶನ್ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗುತ್ತಿವೆ. ಬಳ್ಳಾರಿ ಜೈಲು ಅಧಿಕಾರಿಗಳು ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರೂ, ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಬದಲಿಗೆ ಬೆಂಗಳೂರಿನಲ್ಲಿರುವ ಸೌಲಭ್ಯಕ್ಕೆ ವರ್ಗಾಯಿಸಲು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
Leave a Comment