ಬರ್ತಡೇ ಆಚರಣೆ ದುರಂತ: ಅಪ್ಪ ತಂದು ಕೊಟ್ಟ ಕೇಕ್ ತಿಂದು ಪ್ರಾಣಬಿಟ್ಟ ಮಗು !

Birthday Cake
Spread the love

ನ್ಯೂಸ್ ಆ್ಯರೋ: ಮಗನ ಬರ್ತಡೇ ದಿನ ಅಪ್ಪ ಬೇಕರಿಯಿಂದ ತಂದುಕೊಟ್ಟ ಕೇಕ್ ಕತ್ತರಿಸಿ ಖುಷಿಯಿಂದ ತಿಂದ ಮಗು ಪ್ರಾಣವನ್ನೇ ಬಿಟ್ಟಿದೆ. ಇನ್ನು ಅಪ್ಪ, ಅಮ್ಮನೂ ಈ ಕೇಕ್ ತಿಂದಿದ್ದು, ಇಬ್ಬರೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೌದು. . ಬೆಂಗಳೂರಿನಲ್ಲಿ ಕೇಕ್ ತಿಂದು ಒಂದೇ ಕುಟುಂಬದ ಮೂರು ಜನ ಅಸ್ವಸ್ಥರಾಗಿದ್ದಾರೆ. ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ ಇದಾಗಿದೆ. ಮಗುವಿನ ತಂದೆ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದರು. ಅವರೇ ಮನೆಗೆ ಕೇಕ್‌ ತೆಗೆದು ಕೊಂಡು ಹೋಗಿದ್ದರು. ಮನೆಯಲ್ಲಿ ಪತ್ನಿ ಮತ್ತು ಮಗುವಿನ ಜೊತೆ ಸೇರಿ ಕೇಕ್ ತಿಂದಿದ್ದರು.

ಈ ಕೇಕ್ ತಿಂದ ನಂತರ ಮೂವರ ಆರೋಗ್ಯದಲ್ಲಿ ಅಸ್ಥವ್ಯಸ್ಥವಾಗಿದೆ. ಮೂವರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾರಂಭಿಸಿದೆ. ಆದರೆ, ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಮಗ ಧೀರಜ್ (5) ಚಿಕಿತ್ಸೆಗೆ ಸ್ಪಂದಿಸದೇ ಪ್ರಾಣವನ್ನೇ ಬಿಟ್ಟಿದೆ.

ಒಂದೇ ಕುಟುಂಬದ ಮೂವರು ತೀವ್ರ ಅಸ್ತವ್ಯಸ್ಥಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೇಕ್ ತಂದಿದ್ದು ಯಾವ ಬೇಕರಿಯಿಂದ, ಕೇಕ್ ನಲ್ಲಿರೋ ಅಂಶಗಳಿಂದ ಅಸ್ವಸ್ಥರಾಗಿದ್ದಾರಾ.? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ವೈದ್ಯರ ರಿಪೋರ್ಟ್ ಗಾಗಿ ಪೊಲೀಸರು ಕಾಯುತ್ತಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!