ತಿರುಪತಿ ಅನ್ನಪ್ರಸಾದದಲ್ಲಿ ಹುಳು ಪತ್ತೆ; ವಿಡಿಯೋ ಸಖತ್ ವೈರಲ್
ನ್ಯೂಸ್ ಆ್ಯರೋ: ತಿರುಪತಿಗೆ ಭೇಟಿ ಕೊಡುವ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದವನ್ನು ಪ್ರಾಣಿಗಳ ಕೊಬ್ಬನ್ನು ಬಳಸಿ ಮಾಡಲಾಗುತ್ತಿದೆ ಎಂಬ ಆರೋಪವೂ ವಿಶ್ವವ್ಯಾಪಿ ಸದ್ದು ಮಾಡಿದ್ದು, ಭಾರತದಲ್ಲಿ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.
ಲಡ್ಡು ವಿವಾದ ಆರುವ ಮುನ್ನವೇ ಇದೀಗ ಪ್ರಸಾದದಲ್ಲಿ ಹುಳು ಸಿಕ್ಕಿದೆ ಎಂದು ಭಕ್ತರು ಆರೋಪ ಮಾಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದ.
ವೈರಲ್ ಆಗಿರುವ ವಿಡಿಯೋವನ್ನು ನೋಡುವುದಾದರೆ, ವಾರಂಗಲ್ನಿಂದ ಬಂದಿರುವ ಭಕ್ತರೊಬ್ಬರು ದೇವರ ದರ್ಶನ ಮುಗಿಸಿ ಆ ಬಳಿಕ ಅನ್ನ ಪ್ರಸಾದವನ್ನು ಸ್ವೀಕರಿಸಿದ್ಧಾರೆ. ಭಕ್ತರಿಗೆ ಪ್ರಸಾದ ಎಂದು ನೀಡಲಾಗಿದ್ದ ಮೊಸರನ್ನದಲ್ಲಿ ಹುಳು ಪತ್ತೆಯಾಗಿದ್ದು, ಈ ವಿಚಾರವನ್ನು ಅಡುಗೆ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಬ್ಬಂದಿ ಕೆಲವೊಮ್ಮೆ ಈಗಾಗುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ನಾಯ್ಡು, ದೇವಾಲಯಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರಿಗೆ ಆಹಾರ ಸುರಕ್ಷತೆ ಮತ್ತು ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಪಾಲಿಸುವಂತೆ ಆದೇಶಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮತ್ತು ಯಾತ್ರಿಕರಿಗೆ ನೀಡುವ ಆಹಾರದ ಪಾವಿತ್ರ್ಯತೆಯನ್ನು ರಕ್ಷಿಸುವಂತೆ ಸೂಚಿಸಿದ್ದಾರೆ.
Leave a Comment