ಆಂಬ್ಯುಲೆನ್ಸ್​​ಗಳ ಸುಗಮ ಸಂಚಾರಕ್ಕೆ ಇ-ಪಾತ್​ ಆ್ಯಪ್; ಈ ಆ್ಯಪ್ ಹೇಗೆ ಕೆಲಸ ಮಾಡುತ್ತೆ?

e path app ambulances
Spread the love

ನ್ಯೂಸ್ ಆ್ಯರೋ: ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸಿಗ್ನಲ್​ಗಳಲ್ಲಿ ಕಿಮೀಗಟ್ಟಲೆ ವಾಹನಗಳು ನಿಲ್ಲುತ್ತವೆ. ಇಷ್ಟೋ ಸಾರಿ ಸಿಗ್ನಲ್​ಗಳಲ್ಲಿ ಆಂಬ್ಯುಲೆನ್ಸ್​​ಗಳು ಸಿಲುಕಿಹಾಕಿಕೊಂಡು, ಸಮಸ್ಯೆಯಾಗಿದ್ದೂ ಇದೆ.

ಹೀಗಾಗಿ, ಆಂಬ್ಯುಲೆನ್ಸ್​ಗಳ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆಂಬ್ಯುಲೆನ್ಸ್​​ಗಳ ಸುಗಮ‌ ಸಂಚಾರಕ್ಕೆ ಹೊಸ ಆ್ಯಪ್ ಬಿಡುಗಡೆ ಮಾಡಿದ್ದಾರೆ.

ಆಂಬ್ಯುಲೆನ್ಸ್​ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್​ ಪೊಲೀಸರು “ಇ-ಪಾತ್” ಎಂಬ ಆ್ಯಪ್ ಪರಿಚಿಯಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕರು ಇ-ಪಾತ್ ಆ್ಯಪ್ ಹೊಂದದ್ದರೆ ಯಾವುದೇ ಸಿಗ್ನಲ್​ನಲ್ಲಿ ನಿಲ್ಲದೆ ಚಲಿಸಬಹುದಾಗಿದೆ. ಆಂಬ್ಯುಲೆನ್ಸ್​ ಸಿಗ್ನಲ್​ ಬಳಿ ಬರುತ್ತಿರುವ ಮಾಹಿತಿ GPS ಮತ್ತು ಅಡಾಪ್ಟಿವ್ ಮೂಲಕ ಸಂಚಾರಿ ಪೊಲೀಸರಿಗೆ ತಿಳಿಯುತ್ತದೆ. ಆಗ, ಆಂಬ್ಯುಲೆನ್ಸ್​ಗಾಗಿ ಸಿಗ್ನಲ್​ ಕ್ಲಿಯರ್​​ ಮಾಡಲಾಗುತ್ತದೆ. ಆಂಬ್ಯುಲೆನ್ಸ್​ ಸಿಗ್ನಲ್​ನಲ್ಲಿ ನಿಲ್ಲದೆ ಹೋಗಬಹುದು.

ಇ-ಪಾತ್ ಆ್ಯಪ್ ಹೇಗೆ ಕೆಲಸ ಮಾಡುತ್ತೆ?

  1. ಚಾಲಕ ಸ್ಮಾರ್ಟ್​ಫೋನ್​​ನಲ್ಲಿರುವ ಫ್ಲೈ ಸ್ಟೋರ್ ನಲ್ಲಿ ಇ-ಪಾತ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು
  2. ಚಾಲಕ ಆ್ಯಂಬುಲೆನ್ಸ್ ಎಲ್ಲಿಂದ ಎಲ್ಲಿಗೆ ಹೋಗುತ್ತೆ ಅಂತ ಮಾಹಿತಿ ಅಪ್ಲೋಡ್ ಮಾಡಬೇಕು
  3. ಯಾವ ಪ್ರಿಯಾರಿಟಿ ಅಂತ ಮಾಹಿತಿ ನೀಡಬೇಕು, ತುಂಬಾ ಎಮರ್ಜೆನ್ಸಿ ಇದ್ರೆ ಮೊದಲ ಪ್ರಶಸ್ತ್ಯ
  4. ಗಂಭೀರ ಅಪಘಾತ, ಹಾರ್ಟ್ ಅಟ್ಯಾಕ್ ಸೇರಿ ಸೀರಿಯಸ್ ಇರೋರಿಗೆ ಮೊದಲ ಆದ್ಯತೆ
  5. ಅಪ್ಲೋಡ್ ಆದ ಮಾಹಿತಿ ಸಂಚಾರ ನಿರ್ವಹಣ ಕೇಂದ್ರ ಸಿಬ್ಬಂದಿ ಹೋಗುತ್ತೆ
  6. ಪರಿಶೀಲಿಸಿ ಜಿಪಿಎಸ್ ಆಧಾರದಲ್ಲಿ ಸೂಕ್ತ ರಸ್ತೆ ಸೂಚಿಸುವ ವ್ಯವಸ್ಥೆ ಮಾಡಲಾಗುತ್ತದೆ
  7. ಸಿಗ್ನಲ್ ಗೆ ಅಂಬ್ಯಲೆನ್ಸ್ ಬರ್ತಿದ್ದಂತೆ ಮಾಹಿತಿ ತಿಳಿಯುತ್ತದೆ, ತಕ್ಷಣ ಸುಗಮ ಸಂಚಾರಕ್ಕೆ ವ್ಯವಸ್ಥೆ
  8. ಜೊತೆಗೆ ಮುಂದಿನ ಸಿಗ್ನಲ್‌ಗೆ ಮೊದಲೇ ಮಾಹಿತಿ ನೀಡಿ ದಟ್ಟಣೆ ಕಡಿಮೆ ಮಾಡಿಸಲಾಗುತ್ತೆ
  9. ಸಿಗ್ನಲ್ ಇಲ್ಲದ ಕಡೆ ಆಂಬುಲೆನ್ಸ್ ವೇಗ 5Kmphಕ್ಕಿಂತ ಕಡಿಮೆಯಾದ್ರೆ ಅಲರ್ಟ್ ಮೆಸೇಜ್ ಬರುತ್ತೆ
  10. ಅದರ ಆಧಾರದಲ್ಲಿ ಸುಗಮ‌ ಸಂಚಾರಕ್ಕೆ ಟ್ರಾಫಿಕ್ ಪೊಲೀಸರ ವ್ಯವಸ್ಥೆ

Leave a Comment

Leave a Reply

Your email address will not be published. Required fields are marked *

error: Content is protected !!