ಗೃಹಲಕ್ಷ್ಮೀ ಹಣಕ್ಕೆ ಕಾಯುತ್ತಿರುವವರಿಗೆ ಗುಡ್​ನ್ಯೂಸ್;‌ ಹಣ ಜಮಾವಣೆಗೆ ಡೇಟ್‌ ಫಿಕ್ಸ್

gruha lakshmi money
Spread the love

ನ್ಯೂಸ್ ಆ್ಯರೋ: ಎಲ್ಲಡೆ ನವರಾತ್ರಿ ಸಂಭ್ರಮ ಮನೆ ಮಾಡಿ, ಮಹಿಳೆಯರು ಒಂಬತ್ತು ದಿನಗಳ ಕಾಲ ದೇವಿ ಆರಾಧನೆ ಮಾಡುವ ಈ ಹಬ್ಬಕ್ಕೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಗೃಹಲಕ್ಷ್ಮೀ ಯೋಜನೆಯ ಎರಡು ಕಂತಿನ ಹಣ ಬಿಡುಗಡೆ ಮಾಡುತ್ತಿದ್ದು, ನಾಲ್ಕು ಸಾವಿರ ರೂ. ಮಹಿಳಾ ಮಣಿಗಳಿಗೆ ಅನುಕೂಲ ಆಗಿದೆ.

ಗೃಹಲಕ್ಷ್ಮೀ ಯೋಜನೆ ಆರಂಭವಾದಾಗಿನಿಂದ ಹದಿಮೂರು ಕಂತುಗಳ ಹಣ ಅಂದರೆ ಬರೋಬ್ಬರಿ 26 ಸಾವಿರ ಪ್ರತಿಯೊಬ್ಬ ಮನೆ ಯಜಮಾನಿ ಅಕೌಂಟ್​ಗೆ ಜಮಾ ಆಗಿವೆ.ಆದರೆ ಕಳೆದ ಎರಡು ತಿಂಗಳಿಂದ ಜುಲೈ ಮತ್ತು ಆಗಷ್ಟ್ ಎರಡು ತಿಂಗಳ ಕಂತಿನ ಹಣ ಬಂದಿರಲಿಲ್ಲ. ಹಲವು ತಾಂತ್ರಿಕ ಕಾರಣಗಳಿಂದ ಎರಡು ತಿಂಗಳ ಕಂತಿನ ಹಣ ಜಮಾವಣೆ ಆಗಿರಲಿಲ್ಲ. ಆದರೆ ಇದೀಗ ಎರಡು ಕಂತಿನ ಹಣ ನವರಾತ್ರಿ ಹಬ್ಬದಲ್ಲೇ ಜಮಾವಣೆ ಮಾಡಲಾಗುತ್ತಿದೆ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಇನ್ನೂ ಜುಲೈ ಮತ್ತು ಆಗಷ್ಟ್ ತಿಂಗಳ ಕಂತಿನ ಹಣವನ್ನ ಹಾಕಿಯೇ ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದೇನೆ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಜುಲೈ ತಿಂಗಳ ಕಂತಿನ ಹಣವನ್ನ ಇದೇ ತಿಂಗಳು ಏಳರಂದು ಹಾಗೂ ಆಗಷ್ಟ್ ತಿಂಗಳ ಹಣವನ್ನ ಇದೇ ತಿಂಗಳು 9ರಂದು (ಅಕ್ಟೋಬರ್ 7 ಮತ್ತು 9ರಂದು) ಜಮಾವಣೆ ಮಾಡಲಾಗುತ್ತಿದೆ. ಎರಡು ದಿನದ ಅಂತರದಲ್ಲಿ ನಾಲ್ಕು ಸಾವಿರ ರೂಪಾಯಿ ಹಣವನ್ನ ಜಮಾವಣೆ ಮಾಡಲಾಗುತ್ತಿದ್ದು, ಒಳ್ಳೆ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುವಂತೆ ಹೆಬ್ಬಾಳ್ಕರ್ ಮನವಿ ಮಾಡಿಕೊಂಡಿದ್ದಾರೆ.


ಒಟ್ಟಿನಲ್ಲಿ ಎರಡು ತಿಂಗಳ ಕಂತಿನ ಹಣ ಹಾಕಿಲ್ಲ ಅಂತ ಚಿಂತೆಯಲ್ಲಿದ್ದ ಗೃಹಲಕ್ಷ್ಮೀಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದೀಗ ಗುಡ್ ನ್ಯೂಸ್ ನೀಡಿದ್ದು, ಸಂತಸ ಉಂಟುಮಾಡಿದೆ. ನಾಲ್ಕು ಸಾವಿರ ಹಣವನ್ನ ಜಮಾವಣೆ ಮಾಡುವುದು ಕೊನೆ ಹಂತದಲ್ಲಿದ್ದು ಇದರಿಂದ ಸರ್ಕಾರಕ್ಕೂ ಮಹಿಳೆಯರು ಧನ್ಯವಾದ ತಿಳಿಸುತ್ತಿದ್ದಾರೆ. ಪ್ರತಿ ತಿಂಗಳು ತಪ್ಪದೇ ಗೃಹಲಕ್ಷ್ಮೀ ಯೋಜನೆ ಬರ್ತಿರುವುದು ಸಾಕಷ್ಟು ಬಡ ಕುಟುಂಬಗಳಿಗೆ ಅನಕೂಲ ಕೂಡ ಆಗಿದ್ದು ಹೆಬ್ಬಾಳ್ಕರ್ ಅವರಿಗೂ ಅಭಿನಂದಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!