ಸಚಿವೆಯ ವಿವಾದಿತ ಹೇಳಿಕೆಗೆ ನಟಿ ಸಮಂತಾ ರಿಯಾಕ್ಷನ್‌

Samantha Ruth Prabhu
Spread the love

ನ್ಯೂಸ್ ಆ್ಯರೋ: ನಾಗಚೈತನ್ಯ – ಸಮಂತಾ ಡಿವೋರ್ಸ್​ ಆಗಿ ಮೂರು ವರ್ಷವೇ ಕಳೆದಿದ್ರೂ ಆ ಜೋಡಿಯ ಕೆಲ ಗಾಸಿಪ್​ಗಳು ಇನ್ನೂ ಕಮ್ಮಿಯಾಗಿಲ್ಲ. ನಾಗಚೈತನ್ಯ ನಿಶ್ಚಿತಾರ್ಥವೊಂದು ಸಖತ್ ಸುದ್ದಿಯಾಗಿತ್ತು. ಆದ್ರೆ ನಿನ್ನೆ ತೆಲಂಗಾಣ ಸಚಿವೆ ಇವರ ಡಿವೋರ್ಸ್​ಗೆ ಕಾರಣ ಬಿಚ್ಚಿಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತೆಲಂಗಾಣದ ಸಚಿವೆ ಕೊಂಡ ಸುರೇಖಾ, ಸಮಂತಾ ಡಿವೋರ್ಸ್​ಗೆ ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರ ಮಾಜಿ ಸಚಿವ ಕೆಟಿ ರಾಮರಾವ್ ಕಾರಣ ಅಂತ ಹೇಳಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಸದ್ಯ ಇದಕ್ಕೆ ಖುದ್ದು ಸಮಂತಾ ಕೆಂಡವಾಗಿದ್ದಾರೆ.

ತೆಲಂಗಾಣದ ಸಚಿವೆ ಕೊಂಡ ಸುರೇಖಾ ಹೇಳಿಕೆಗೆ ನಟಿ ಸಮಂತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನ್ನ ಡಿವೋರ್ಸ್ ಪರಸ್ಪರ ಒಪ್ಪಿಗೆಯಿಂದ ಆಗಿದೆ. ಡಿವೋರ್ಸ್​ನಲ್ಲಿ ಯಾವುದೇ ರಾಜಕೀಯ ಷಡ್ಯಂತ್ರ ಇಲ್ಲ. ದಯವಿಟ್ಟು ರಾಜಕೀಯ ಜಗಳದಿಂದ ನನ್ನ ಹೆಸರನ್ನು ಹೊರಗಿಡಿ ಅಂತ ಇನ್​​ಸ್ಟಾಗ್ರಾಮ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಡಿವೋರ್ಸ್​ನಲ್ಲಿ ಯಾವ ರಾಜಕೀಯ ಸಂಚು ಇಲ್ಲ. ನನ್ನ ವಿಚ್ಛೇದನ ಪರಸ್ಪರ ಒಪ್ಪಿಗೆಯಿಂದ ಆಗಿದೆ. ಡಿವೋರ್ಸ್​ನಲ್ಲಿ ಯಾವುದೇ ರಾಜಕೀಯ ಷಡ್ಯಂತ್ರ ಇಲ್ಲ. ದಯವಿಟ್ಟು ನಿಮ್ಮ ರಾಜಕೀಯ ಜಗಳದಿಂದ ನನ್ನ ಹೆಸರನ್ನ ಹೊರಗಿಡಿ. ನಾನು ಯಾವಾಗಲೂ ರಾಜಕೀಯೇತರ ವ್ಯಕ್ತಿ. ಅದೇ ರೀತಿ ಮುಂದುವರೆಯಲು ಬಯಸುತ್ತೇನೆ. ನನ್ನ ಡಿವೋರ್ಸ್ ವೈಯಕ್ತಿಕ ವಿಚಾರ. ಡಿವೋರ್ಸ್ ಬಗ್ಗೆ ನೀವು ಊಹಾಪೋಹ ಹರಡುವುದನ್ನು ನಿಲ್ಲಿಸಿ. ನೀವು ಸಚಿವರಾಗಿರುವುದರಿಂದ ನಿಮ್ಮ ಮಾತಿಗೆ ಹೆಚ್ಚಿನ ತೂಕ ಇದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂಬ ಭರವಸೆ ಇದೆ. ಬೇರೆಯವರ ಖಾಸಗಿ ಜೀವನದ ಬಗ್ಗೆ ಗೌರವದಿಂದ ಇರಿ ಎಂದು ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

Leave a Comment

Leave a Reply

Your email address will not be published. Required fields are marked *