ಇಂದು ವಿಶ್ವ ಸಸ್ಯಾಹಾರ ದಿನ: ಏನಿದರ ಮಹತ್ವ ಗೊತ್ತಾ ?
ಸಸ್ಯಾಹಾರಿಗಳಿಗಾಗಿಯೇ ಒಂದು ವಿಶೇಷವಾದ ದಿನವಿದೆ. ಅದೇ ವಿಶ್ವ ಸಸ್ಯಾಹಾರ ದಿನ. ಪ್ರತಿ ವರ್ಷ ಅಕ್ಟೋಬರ್ 1ನ್ನು ಜಾಗತಿಕವಾಗಿ ವರ್ಲ್ಡ್ ವೆಜಿಟೇರಿಯನ್ ಡೇ ಅಥವಾ ವಿಶ್ವ ಸಸ್ಯಾಹಾರಿಗಳ ದಿನವೆಂದು ಆಚರಿಸಲಾಗುತ್ತದೆ.
ಸಸ್ಯಾಹಾರದ ಮಹತ್ವ, ಅದರ ಅಗತ್ಯತೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಮೂಲತಃ ಈ ದಿನವನ್ನು ಮೊದಲ ಬಾರಿಗೆ ಆರಂಭಿಸಿದ್ದು ಉತ್ತರ ಅಮೆರಿಕಾದ ವೆಜಿಟೇರಿಯನ್ ಸೊಸೈಟಿ (1977). ಅಂತರರಾಷ್ಟ್ರೀಯ ಸಸ್ಯಾಹಾರಿ ಒಕ್ಕೂಟ ಇದಕ್ಕೆ ಬೆಂಬಲ ನೀಡಿತು. ಸಸ್ಯಾಹಾರಿ ಜೀವನಶೈಲಿಯ ನೈತಿಕ, ಪರಿಸರ, ಆರೋಗ್ಯ ಮತ್ತು ಮಾನವೀಯ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವುದೇ ಈ ದಿನದ ಮಹತ್ವ.
ಸಸ್ಯಾಹಾರಿ ದಿನವನ್ನು ಬರೋಬ್ಬರಿ ಒಂದು ತಿಂಗಳು ಆಚರಿಸಲಾಗುತ್ತದೆ. ಅಕ್ಟೋಬರ್ 1 ರಿಂದ ಪ್ರಾರಂಭವಾಗುವ ಇದು ನವೆಂಬರ್ 1ಕ್ಕೆ ಕೊನೆಗೊಳ್ಳುತ್ತದೆ. ಈ ಒಂದು ತಿಂಗಳನ್ನು ‘Reverence for life’(ಜೀವ ಗೌರವ) and ‘Month of Vegetarian Food’ (ಸಸ್ಯಾಹಾರ ತಿಂಗಳು) ಎಂದು ಕರೆಯಲಾಗುತ್ತದೆ.
ಜನರು ತಮ್ಮ ಸಮುದಾಯ, ಪ್ರಾದೇಶಿಕತೆ, ಅಭಿರುಚಿ, ಆರೋಗ್ಯ ಕಾಳಜಿ, ಪೌಷ್ಟಿಕಾಂಶ ಇತ್ಯಾದಿಗಳನ್ನು ಪರಿಗಣಿಸಿ ಸಸ್ಯಾಹಾರ ಅಥವಾ ಮಾಂಸಾಹಾರಗಳನ್ನು ರೂಢಿಸಿಕೊಂಡಿದ್ದಾರೆ. ಇದು ಅವರ ಸ್ವಂತ ಆಯ್ಕೆ. ಈ ಎರಡೂ ಆಹಾರ ಪದ್ಧತಿಗಳನ್ನೂ ಒಪ್ಪಿಕೊಂಡಿರುವ ಜನರಿದ್ದಾರೆ.
ವಿಶ್ವ ಸಸ್ಯಹಾರಿ ದಿನದ ಆಚರಣೆಯ ಮಹತ್ವ:
ಶುದ್ಧ ಸಸ್ಯಾಹಾರಿ ಆಹಾರವು ಹೆಚ್ಚು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ದೇಹಕ್ಕೆ ಪ್ರಯೋಜನಕಾರಿಯಾದ ಹಲವು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಈ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಂ, ಮೆಗ್ನೇಸಿಯಂ, ಫೋಲೇಟ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇದ್ದು, ಈ ಈ ಎಲ್ಲಾ ಖನಿಜಗಳು ಮತ್ತು ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇವುಗಳ ನಿಯಮಿತ ಸೇವನೆಯಿಂದ ಗಂಭೀರ ಕಾಯಿಲೆಗಳು ಬಾರದಂತೆ ತಡೆಯಬಹುದು. ಅಲ್ಲದೆ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯನ್ನು ವೇಗನ್ ಆಹಾರ ಪದ್ಧತಿಯನ್ನು ಪಾಲಿಸುವ ಮೂಲಕ ಗುಣಪಡಿಸಬಹುದು ಎಂದು ಹೇಳಲಾಗುತ್ತದೆ.
ಹೀಗೆ ವೇಗನ್ ಆಹಾರವನ್ನು ಸೇವಿಸುವ ಮೂಲಕ ಪ್ರಾಣಿಗಳ ಮೇಲಿನ ಹಿಂಸೆಯನ್ನು ತಡೆಯಲು, ಪರಿಸರವನ್ನು ಸಂರಕ್ಷಿಸಲು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸಲಾಗುತ್ತದೆ.
ಪ್ರಸಿದ್ಧ ಭಾರತೀಯ ಸಸ್ಯಾಹಾರಿ ಭಕ್ಷ್ಯಗಳು: ಚೋಲೆ ಭಾಟೂರೆ, ಪನೀರ್ ಟಿಕ್ಕಾ, ದಾಲ್ ಮಖಾನಿ, ಬೈಂಗನ್ ಭರ್ತಾ, ಚಿಲ್ಲಿ ಪನೀರ್, ಪುಲಾವ್, ಸಮೋಸಾ, ದೋಸೆ, ಪಾಲಕ್ ಪನೀರ್, ಮಲೈ ಕೋಫ್ತಾ, ಪನೀರ್ ಮಖಾನಿ, ಪಾವ್ ಭಾಜಿ, ದಮ್ ಆಲೂ, ಖಾಂಡ್ವಿ, ಪನೀರ್ ಭುರ್ಜಿ, ಇಡ್ಲಿ ಸಾಂಬಾರ್, ಉಂಧಿಯು, ಸಾಬುದಾನ ವಡಾ, ವಡಾ ಪಾವ್ ಮತ್ತು ಪಾನಿ ಪುರಿ.
ಶುದ್ಧ ಸಸ್ಯಾಹಾರಿ ಆಹಾರವು ಹೆಚ್ಚು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ದೇಹಕ್ಕೆ ಪ್ರಯೋಜನಕಾರಿಯಾದ ಹಲವು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಈ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಂ, ಮೆಗ್ನೇಸಿಯಂ, ಫೋಲೇಟ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇದ್ದು, ಈ ಈ ಎಲ್ಲಾ ಖನಿಜಗಳು ಮತ್ತು ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
Leave a Comment