ದಿನ ಭವಿಷ್ಯ 01-10-2024 ಮಂಗಳವಾರ | ಇಂದಿನ ರಾಶಿಫಲ ಹೀಗಿದೆ..

Astrology
Spread the love

ಮೇಷ ರಾಶಿ:
ಈ ರಾಶಿಯವರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಕೌಟುಂಬಿಕ ಸಮಸ್ಯೆಗಳು ಮರುಕಳಿಸಬಹುದಾದ್ದರಿಂದ ಮನಸ್ಸಿಗೆ ಕಿರಿಕಿರಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಸಿಗದೇ ಇರಬಹುದು. ಇದರಿಂದ ನಿರಾಶೆ ಅನುಭವಿಸುವಿರಿ.

ವೃಷಭ ರಾಶಿ:
ಈ ರಾಶಿಯವರು ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಗಳಲ್ಲಿ ಅಸಡ್ಡೆ ತೋರಬೇಡಿ. ಇದು ಕುಟುಂಬ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು.

ಮಿಥುನ ರಾಶಿ:
ಹೊಸ ಉದ್ಯಮವನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಇಂದು ಶುಭ ದಿನ. ನಿಮ್ಮ ಸಹೋದ್ಯೋಗಿಗಳೊಂದಿಗೆ ಸಂತಸದ ಸಂಜೆ ಪಾರ್ಟಿ ಆಯೋಜಿಸಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಬಹು ದಿನಗಳ ನಿಮ್ಮ ಕನಸು ನನಸಾಗಬಹುದು.

ಕರ್ಕಾಟಕ ರಾಶಿ:
ಈ ರಾಶಿಯವರು ಇಂದು ವಿವಾದಗಳಿಂದ ದೂರ ಉಳಿದ್ರೆ ಒಳ್ಳೇದು. ಇಲ್ಲವೇ ದೊಡ್ಡ ಅಪಾಯದಲ್ಲಿ ಸಿಲುಕುವಿರಿ. ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳನ್ನು ಅನುಭವಿಸಬಹುದು. ಆದರೂ, ನಿಮ್ಮ ಬುದ್ದಿವಂತಿಕೆಯಿಂದ ಹಿಡಿದ ಕೆಲಸ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ.

ಸಿಂಹ ರಾಶಿ:
ಈ ರಾಶಿಯ ಜನರು ಇಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಗೌರವ ಗಳಿಸುತ್ತಾರೆ. ಪೂರ್ವಜರ ಆಸ್ತಿಗೆ ಸಂಬಂಧಿದಂತೆ ಶುಭ ಸುದ್ದಿ ನಿರೀಕ್ಷಿಸಬಹುದು.

ಕನ್ಯಾ ರಾಶಿ:
ಈ ರಾಶಿಯವರಿಗೆ ಇಂದು ಕೆಲಸದ ಒತ್ತಡ ಹೆಚ್ಚಾಗುವುದರಿಂದ ಪ್ರಕ್ಷುಬ್ಧತೆಯನ್ನು ಅನುಭವಿಸುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯುವುದು ಸೂಕ್ತ. ಯಾವುದೇ ರೀತಿಯ ಪ್ರಮುಖ ಹಣಕಾಸಿನ ವಹಿವಾಟನ್ನು ತಪ್ಪಿಸಿ.

ತುಲಾ ರಾಶಿ:
ಈ ರಾಶಿಯ ಜನರಿಗೆ ಇಂದು ಸಮಾಜದಲ್ಲಿ ಗೌರವ ಹೆಚ್ಚಾಗಬಹುದು. ಹಬ್ಬಕ್ಕಾಗಿ ಶಾಪಿಂಗ್ ಗಾಗಿ ಯೋಜಿಸಲು ಶುಭ ಸಮಯ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ಆದರೆ, ಮಕ್ಕಳ ನಡವಳಿಕೆಯಿಂದ ಅಸಮಾಧಾನ ನಿಮ್ಮನ್ನು ಬಾಧಿಸಬಹುದು.

ವೃಶ್ಚಿಕ ರಾಶಿ:
ಈ ರಾಶಿಯವರು ಇಂದು ಸಂಗಾತಿಯೊಂದಿಗೆ ಕೋಪದಿಂದ ವರ್ತಿಸುವುದನ್ನು ತಪ್ಪಿಸಿ. ಇದು ಅವರ ಭಾವನೆಗಳಿಗೆ ನೋವುಂಟು ಮಾಡಬಹುದು. ವ್ಯಾಪಾರದಲ್ಲಿ ಪ್ರತಿಸ್ಪರ್ಧಿಗಳು ಕಠಿಣ ಸ್ಪರ್ಧೆ ಒಡ್ಡಬಹುದು. ಇದಕ್ಕೆ ಸಿದ್ದವಾಗಿರಿ. ನಿಮ್ಮ ಆರೋಗ್ಯದ ಬಗ್ಗೆ ನಿಗಾವಹಿಸಿ.

ಧನು ರಾಶಿ:
ಈ ರಾಶಿಯ ಜನರಿಗೆ ಇಂದು ಮಿಶ್ರ ಪ್ರತಿಫಲ ದಿನವಾಗಿರುತ್ತದೆ. ವ್ಯಾಪಾರದಲ್ಲಿ ವಿಶೇಷ ವ್ಯಕ್ತಿಗಳ ಪರಿಚಯದಿಂದ ಲಾಭವಾಗಲಿದೆ. ನಿಮ್ಮ ಸಂಗತಿಯೊಂದಿಗೆ ಕೋಪದಿಂದ ವರ್ತಿಸುವುದನ್ನು ತಪ್ಪಿಸಿ. ಕೆಲಸದಲ್ಲಿ ಸೋಮಾರಿತನವನ್ನು ತಪ್ಪಿಸಿ.

ಮಕರ ರಾಶಿ:
ಈ ರಾಶಿಯ ಜನರು ಇಂದು ಆಹ್ಲಾದಕರ ದಿನವನ್ನು ಆನಂದಿಸುವಿರಿ. ಕುಟುಂಬದಲ್ಲಿ ಪ್ರೀತಿ-ಸಹಕಾರ ತುಂಬಿರಲಿದೆ. ಕುಟುಂಬದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಅತ್ಯುತ್ತಮ ದಿನವಾಗಿದೆ. ವಿದ್ಯಾರ್ಥಿಗಳಿಗೆ ಫಲಪ್ರದವಾದ ದಿನ.

ಕುಂಭ ರಾಶಿ:
ಈ ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದ ಪ್ರತಿ ಹೆಜ್ಜೆಯನ್ನೂ ಇಡಬೇಕು. ಪ್ರತಿ ಹೆಜ್ಜೆಗೂ ಸವಾಲುಗಳಿರುತ್ತವೆ. ಇದಕ್ಕಾಗಿ ಮಾನಸಿಕವಾಗಿ ಸಿದ್ದವಾಗಿರಿ. ಕೆಲಸದಲ್ಲಿ ಅಪಾಯವನ್ನು ತೆಗೆದುಕೊಳ್ಳುವುದು ನಷ್ಟಕ್ಕೆ ಕಾರಣವಾಗಬಹುದು.

ಮೀನ ರಾಶಿ:
ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಕುಟುಂಬಸ್ಥರು ಅಚ್ಚರಿಯ ಪಾರ್ಟಿಯನ್ನು ಆಯೋಜಿಸಬಹುದು. ಹೊಸ ವಾಹನ ಖರೀದಿಸುವ ಬಹುದಿನಗಳ ನಿಮ್ಮ ಕನಸು ನನಸಾಗುವ ಸಾಧ್ಯತೆ ಇರುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!