ಸೋನು ಶ್ರೀನಿವಾಸ್ ಗೌಡಗೆ ಭಾರೀ ಸಂಕಷ್ಟ – ಕಾನೂನು ಕುಣಿಕೆಯಲ್ಲಿ ಬಂಧಿಯಾಗುವ ಭೀತಿ : ಬಿಲ್ಡಪ್ ರಾಣಿ ಮಾಡಿದ ಎಡವಟ್ಟೇನು?

ಸೋನು ಶ್ರೀನಿವಾಸ್ ಗೌಡಗೆ ಭಾರೀ ಸಂಕಷ್ಟ – ಕಾನೂನು ಕುಣಿಕೆಯಲ್ಲಿ ಬಂಧಿಯಾಗುವ ಭೀತಿ : ಬಿಲ್ಡಪ್ ರಾಣಿ ಮಾಡಿದ ಎಡವಟ್ಟೇನು?

ನ್ಯೂಸ್ ಆ್ಯರೋ : ಬಿಗ್ ಬಾಸ್ ಸ್ಪರ್ಧಿ, ಬೆತ್ತಲೆ ವಿಡಿಯೋ ಮೂಲಕ ಕುಖ್ಯಾತಿ ಗಳಿಸಿದ್ದಲ್ಲದೇ ಸದಾ ಒಂದಿಲ್ಲೊಂದು ವಿಷಯಕ್ಕೆ ಟ್ರೋಲ್ ಆಗುವ ಸೋನು ಶ್ರೀನಿವಾಸ್ ಗೌಡ (Sonu Shrinivas Gowda) ಇದೀಗ ದೊಡ್ಡದೊಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಗು ದತ್ತು ಪಡೆದ ಸಂಬಂಧ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸೋನು ಗೌಡ ವಿರುದ್ಧ ದೂರು ದಾಖಲಾಗಿದೆ.

ಇತ್ತೀಚೆಗಷ್ಟೆ ಸೋನು ಗೌಡ ಉತ್ತರ ಕರ್ನಾಟಕದ ಸೇವಂತಿ (8) ಎಂಬ ಹೆಣ್ಣು ಮಗುವನ್ನ ದತ್ತು ಪಡೆದಿದ್ದಾರೆ. ಈ ಬಗ್ಗೆ ಸ್ವತಃ ಸೋನು ಗೌಡ ಅವರೇ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳ ಸಮೇತ ಮಾಹಿತಿ ಹಂಚಿಕೊಂಡು ಬಿಲ್ಡಪ್ ನೀಡಿದ್ದರು‌.‌

ಈ ಬಗ್ಗೆ ಯೂಟ್ಯೂಬ್ ನ‌ ಖ್ಯಾತ ಚಾನೆಲ್ “ಮೈಸೂರು ಮ್ಯಾಂಗೋ”ದಲ್ಲಿ ಮುಖಕ್ಕೆ ಹೊಡೆದಂತೆ ಟ್ರೋಲ್ ಮಾಡಲಾಗಿತ್ತು. ಅಲ್ಲದೇ ದತ್ತು ಪಡೆಯಲು ಇರುವ ನಿಯಮದ ಬಗ್ಗೆ ವಿವರಿಸಿ, ಅನುಮಾನ ವ್ಯಕ್ತಪಡಿಸಲಾಗಿತ್ತು.

ಸಹಜವಾಗಿ ನಿಯಮಾನುಸಾರ ಯಾವುದೇ ಮಗುವನ್ನು ದತ್ತು ಪಡೆದರೆ, ಆ ಮಗುವಿನ ಮಾಹಿತಿ ಸಾರ್ವಜನಿಕವಾಗಿ ಹಂಚಿಕೊಳ್ಳುವಂತಿಲ್ಲ.ಆದರೆ ಸೋನು ಗೌಡ ವಿಡಿಯೋದಲ್ಲಿ ಮಗುವಿನ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೆ, ಮಗುವಿನ ಜತೆ ಹಲವಾರು ವ್ಲಾಗ್ಸ್ ಗಳನ್ನು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಚೈಲ್ಡ್ ವೆಲ್ಫೇರ್ ಕಮಿಟಿಯಿಂದ (Child Welfare Committee), ಮಗುವನ್ನ ದತ್ತು ತೆಗೆದುಕೊಳ್ಳುವಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಸೋನು ಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ (Badarahalli Police Station) ಗುರುವಾರ ರಾತ್ರಿ ದೂರು ದಾಖಲಾಗಿದೆ.

ಇದೀಗ ಸೋನು ಗೌಡಗೆ ಹಾಗೂ ಮಗುವಿನ ತಂದೆ ತಾಯಿಗೂ ಕೂಡ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ಕಳುಹಿಸಿದ್ದಾರೆ. ಮಗುವನ್ನ ದತ್ತು ತೆಗೆದುಕೊಂಡಿದ್ದು ನಿಜನಾ? ದತ್ತು ಕೊಡುವಾಗ ಹಣ ಪಡೆದಿದ್ರಾ? ಎಂಬ ಬಗ್ಗೆ ವಿಚಾರಣೆ ಮಾಡಲಿದ್ದು ಬಿಲ್ಡಪ್ ರಾಣಿಗೆ ಈ ಬಾರಿ ಕಾನೂನು ಕಂಟಕ ಎದುರಾಗಿದೆ.

Latest Update :

ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ವಿಚಾರವಾಗಿ ಸೋನು ಗೌಡ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಜೆಜೆ ಕಾಯ್ದೆ ಅಡಿಯಲ್ಲಿ ಸೋನು ಗೌಡ ಅವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *