Explainer : ಅತಂತ್ರಗೊಂಡಿದ್ದ ಕಮಲ ಪಡೆಯ ಹೊಸ ಸಾರಥಿ ವಿಜಯೇಂದ್ರ ಮುಂದಿರೋ ಸವಾಲುಗಳೇನು? – “ಮರಿ ರಾಜಹುಲಿ” ರಾಜ್ಯಾಧ್ಯಕ್ಷರಾಗಲು ಇದೇ ಕಾರಣ..!!

Explainer : ಅತಂತ್ರಗೊಂಡಿದ್ದ ಕಮಲ ಪಡೆಯ ಹೊಸ ಸಾರಥಿ ವಿಜಯೇಂದ್ರ ಮುಂದಿರೋ ಸವಾಲುಗಳೇನು? – “ಮರಿ ರಾಜಹುಲಿ” ರಾಜ್ಯಾಧ್ಯಕ್ಷರಾಗಲು ಇದೇ ಕಾರಣ..!!

ನ್ಯೂಸ್ ಆ್ಯರೋ : ರಾಜ್ಯ ಬಿಜೆಪಿಗೆ ದೀಪಾವಳಿ ಕೊಡುಗೆ ನೀಡಿರುವ ಹೈಕಮಾಂಡ್, ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆಗೆ ಬಿ.ವೈ. ವಿಜಯೇಂದ್ರ ಅವರನ್ನು ನೇಮಿಸಿದೆ. ಇದರೊಂದಿಗೆ ಲಿಂಗಾಯತ ವೋಟ್ ಬ್ಯಾಂಕ್ ಭದ್ರ ಮಾಡಿಕೊಳ್ಳಲು ಬಿ.ಎಸ್.ಯಡಿಯೂರಪ್ಪ ಅವರ ಪುತ್ರನಿಗೆ ಬಹುದೊಡ್ಡ ಜವಾಬ್ದಾರಿಯನ್ನು ನೀಡಿದಂತಾಗಿದೆ.

ವಿಜಯೇಂದ್ರ ನೇಮಕ ಸಂಬಂಧ ಶುಕ್ರವಾರ ಸಂಜೆ ಬಿಜೆಪಿ ಹೈಕಮಾಂಡ್‌ನಿಂದ ಆದೇಶ ಹೊರಬಿದ್ದಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್ ನಡ್ಡಾ ಈ ನೇಮಕ ಕೈಗೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯ ಮಾತು ಕೇಳಿ ಬಂದಿತ್ತು. ನಳಿನ್ ಕುಮಾರ್ ಕಟೀಲ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನದಿಂದ ಮುಕ್ತಗೊಳಿಸುವಂತೆ ಬಿಜೆಪಿಯೊಳಗೇ ಒತ್ತಡ ವ್ಯಕ್ತವಾಗಿತ್ತು. ಆದರೆ, ಅಳೆದೂ ತೂಗಿ ಲೆಕ್ಕಾಚಾರ ಹಾಕುತ್ತಿದ್ದ ವರಿಷ್ಠರು ಈ ನಿಟ್ಟಿನಲ್ಲಿ ನಿರ್ಣಯಕ್ಕೆ ಬರಲು ಸಮಯ ತೆಗೆದುಕೊಂಡಿದ್ದರು. ಮತ್ತೊಂದೆಡೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನೂ ಮುಂದೂಡಿದ್ದರು.

ಇದರಿಂದಾಗಿ ರಾಜ್ಯದಲ್ಲಿ ಪ್ರತಿಪಕ್ಷದ ನಾಯಕರಿಲ್ಲದ ಸ್ಥಿತಿಯಿದೆ. ವರಿಷ್ಠರ ಈ ಧೋರಣೆ ಪಕ್ಷದ ರಾಜ್ಯ ಘಟಕಕ್ಕೆ ತೀವ್ರ ಇರಿಸುಮುರಿಸು ತಂದಿತ್ತು. ಇದೀಗ ಆ ಒಳ ಒತ್ತಡಕ್ಕೆ ಹೈಕಮಾಂಡ್ ಮುಲಾಮು ಸವರಿದ್ದು, ವಿಜಯೇಂದ್ರ ಅವರಿಗೆ ಸಾರಥ್ಯ ಕೊಟ್ಟಿರುವ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿವೆ ಎನ್ನಲಾಗಿದೆ.

ಆಯ್ಕೆಯ ಹಿಂದಿನ‌ ಕಾರಣಗಳು?

1. ಪ್ರಬಲ ಲಿಂಗಾಯತ ಸಮುದಾಯದ ಹಿನ್ನೆಲೆ
2. ತಂದೆಯಂತೆ ಲಿಂಗಾಯತರಲ್ಲಿ ಭರವಸೆ ಮೂಡಿಸಿರುವ ಯುವ ನಾಯಕ
3. ಲಿಂಗಾಯತರು ಕಾಂಗ್ರೆಸ್‌ ಕಡೆ ವಾಲುವುದನ್ನು ತಡೆಯುವ ತಂತ್ರ
4. ಎಲ್ಲ ಸಮುದಾಯಗಳನ್ನೂ ಜತೆಗೆ ಕರೆದೊಯ್ಯುವ ಗುಣವಿದೆ
5. ರಾಜ್ಯಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರ ವಲಯದಲ್ಲಿ ಜನಪ್ರಿಯತೆ ಗಳಿಸಿರುವುದು
6. ರಾಜ್ಯದ ಪ್ರತಿ ತಾಲೂಕು, ಹೋಬಳಿ ಮಟ್ಟದ ವರೆಗೂ ಅಭಿಮಾನಿಗಳನ್ನು ಹೊಂದಿರುವುದು

  1. ವೈಯಕ್ತಿಕ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸುವ ಸಾಮರ್ಥ್ಯ
  2. ಚುನಾವಣಾ ತಂತ್ರಗಾರಿಕೆಯಲ್ಲಿ ಯಶಸ್ವಿ ಪ್ರಯೋಗದ ಹಿನ್ನೆಲೆ
  3. ಪಕ್ಷದ ಬೇರುಗಳಿಲ್ಲದ ಶಿರಾ, ಮಂಡ್ಯದ ಕೆ.ಆರ್. ಪೇಟೆಯಲ್ಲೂ ಗೆಲುವಿನ ರಣನೀತಿ.

ಹೊಸ ಆಯಾಮ ನೀಡಲು ಈ‌ ಕ್ರಮ!

ಈಗ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿಯ ಸಾರಥ್ಯ ವಹಿಸುವ ಮೂಲಕ ವರಿಷ್ಠರು ಹೊಸ ತಲೆಮಾರಿನ ನಾಯಕತ್ವ ಬೆಳೆಸಲು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಜಯೇಂದ್ರ ಅವರಿಗೆ ರಾಜಕೀಯ ಕುಟುಂಬ ಮತ್ತು ಸಮುದಾಯದ ಹಿನ್ನೆಲೆಯಿದೆ. ಜತೆಗೆ ಯುವಕರು. ಸಂಘಟನಾತ್ಮಕವಾಗಿಯೂ ಚುರುಕಾಗಿರುವ ಅವರು, ರಾಜ್ಯಾದ್ಯಂತ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ನೇಮಕ ಪಕ್ಷದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕವೆನಿಸಿದೆ.

ಬಿ.ಎಸ್.ವೈ ಉತ್ತರಾಧಿಕಾರಿ..!

ರಾಜ್ಯದಲ್ಲಿ ಬಿಜೆಪಿಯನ್ನು ಶೂನ್ಯದಿಂದ ಅಧಿಕಾರಕ್ಕೆ ಏರಿಸಿದ ಹೆಗ್ಗಳಿಕೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ವಿಧಾನಸಭೆಗೆ ಎದುರಿಸಿದ ಮೊದಲ ಚುನಾವಣೆಯಲ್ಲೇ ಜಯಭೇರಿ ಬಾರಿಸುವುದರ ವಹಿಸಿ ಜತೆಗೆ ಅಲ್ಪಾವಧಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಎಲ್ಲರ ನೇಮಕಗೊಂಡಿದ್ದರು. ರಾಜ್ಯದಲ್ಲಿ ಪಕ್ಷವನ್ನು ಮೂರು ಬಾರಿ ಮುನ್ನಡೆಸಿದ್ದರು.

2018ರಲ್ಲಿ ಸಹ ರಾಜ್ಯದ ಚುಕ್ಕಾಣಿ ವಹಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ರಾಜ್ಯದಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸುವಲ್ಲಿ ಯಡಿಯೂರಪ್ಪ ಅವರ ಪಾತ್ರ ಬಹಳ ದೊಡ್ಡದು.

ಹೀಗಾಗಿ, ಶಿಕಾರಿಪುರದಲ್ಲಿ ಅಲ್ಲದೆ ರಾಜ್ಯದಲ್ಲೂ ಯಡಿಯೂರಪ್ಪ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ನಡೆದಾಗ ಪ್ರತಿಯೊಬ್ಬರೂ ವಿಜಯೇಂದ್ರ ಕಡೆಗೆ ಬೆರಳು ತೋರಿಸಿದ್ದರು. ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ವಹಿಸಿಕೊಂಡಾಗಲೇ ಸಂಘಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದ ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿ ಮತ್ತಷ್ಟು ಭರವಸೆ ಮೂಡಿಸಿದ್ದರು.

ಲಿಂಗಾಯಿತ ಸಮುದಾಯಕ್ಕೆ ಶಕ್ತಿ!

ರಾಜ್ಯದಲ್ಲಿ ಲಿಂಗಾಯತ ಸಮಾಜದ ಬೆಂಬಲವನ್ನು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ದೊರಕಿಸಿ ಕೊಡುವುದರಲ್ಲಿ ಬಿಎಸ್‌ ವೈ ಪಾತ್ರ ಮುಖ್ಯವಾಗಿತ್ತು. ಮೊದಲು ರೈತ ನಾಯಕ ಎಂದೇ ಗುರುತಿಸಿಕೊಂಡಿದ್ದ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾದ ಬಳಿಕ ಅವರಿಗೆ ಲಿಂಗಾಯತ ಸಮಾಜ ಅವರನ್ನು ನೆಚ್ಚಿಕೊಂಡಿತು. ಲಿಂಗಾಯತರಲ್ಲಿನ ಹಲವು ಉಪ ಪಂಗಡದವರು ಬಿಎಸ್‌ವೈ ಕಾರಣ ದಿಂದ ಬಿಜೆಪಿಯೊಂದಿಗೆ ನಿಂತರು. ಹಾಗಾಗಿ ಜನಪ್ರಿಯ ನಾಯಕ ಬಿಎಸ್‌ವೈ ಮತ್ತು ಪ್ರಬಲ ಲಿಂಗಾಯತ ಸಮುದಾಯದ ಸಮೀಕರಣದೊಂದಿಗೆ ಪಕ್ಷ ಸದೃಢಗೊಂಡಿತು.

ಬಿಎಸ್‌ವೈ ನಂತರದಲ್ಲಿ ಈ ಸ್ಥಾನ ತುಂಬಬಲ್ಲವರು ಯಾರು ಎಂದು ಶೋಧಿಸಲು ಹೈಕಮಾಂಡ್ ಅನೇಕ ಪ್ರಯತ್ನ ಮಾಡಿತ್ತು. ಅದ್ಯಾವುದೂ ಕೈಗೂಡದೆ ಇರುವುದರಿಂದ ವಿಜಯೇಂದ್ರ ಅವರನ್ನು ಮುಂಚೂಣಿಗೆ ತರಲಾಗಿದೆ.

ಕಾಂಗ್ರೆಸ್ ಉತ್ಸಾಹಕ್ಕೆ ಬ್ರೇಕ್!

ಈ ಬಾರಿಯ ವಿಧಾನಸಭೆ ಚುನಾವಣೆ ವೇಳೆ ಲಿಂಗಾಯತರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ ಜೋರಾಗಿ ಹೇಳುವ ಮೂಲಕ ಒಂದು ವಾತಾವರಣ ಸೃಷ್ಟಿಮಾಡಲು ನೋಡಿತ್ತು. ತಕ್ಕ ಮಟ್ಟಿಗೆ ಇದರಿಂದ ಮುನ್ನಡೆಯೂ ಸಿಕ್ಕಿತ್ತು. ಆದರೆ, ಈಗ ವಿಜಯೇಂದ್ರ ನೇಮಕದ ಮೂಲಕ ಕಾಂಗ್ರೆಸ್‌ನ ಉತ್ಸಾಹಕ್ಕೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕುವ ಯತ್ನ ಮಾಡಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದಲೂ ಇದು ಮಹತ್ವದ ತಿರುವು ಎನ್ನಲಾಗುತ್ತಿದೆ‌

ವಿಜಯೇಂದ್ರ ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ವಿಜಯೇಂದ್ರ, ‘ಅಚಲ ವಿಶ್ವಾಸವಿಟ್ಟು ಪಕ್ಷ ಸಂಘಟನೆಯ ಬಹುದೊಡ್ಡ ಜವಾಬ್ದಾರಿ ವಹಿಸಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಗೃಹ ಸಚಿವರು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು. ಸಂಘದ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸರ್ವರ ನಿರೀಕ್ಷೆ, ಜನರ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲಿ ಬಿಜೆಪಿಗೆ ಹೊಸ ಚೈತನ್ಯ ತುಂಬಲು ಕಾರ್ಯಕರ್ತನಾಗಿ ದುಡಿಯುವ ಸಂಕಲ್ಪ ತೊಟ್ಟಿದ್ದೇನೆ’ ಎಂದು‌ ಹೇಳಿದ್ದಾರೆ.

ಮಾಜಿ ಅಧ್ಯಕ್ಷರ ಮಾತು?

ಈ ಬಗ್ಗೆ ಮಾತನಾಡಿರುವ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ‘ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದಕ್ಕಾಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಅಭಿನಂದನೆಗಳು, ವಿಜಯೇಂದ್ರ ಅವರು ಸಾಮಾನ್ಯ ಕಾರ್ಯಕರ್ತನಾಗಿ ಬಂದು ಕಳೆದ 2 ಅವಧಿ ಯಲ್ಲಿ ಯುವಮೋರ್ಚಾ ಕಾರ್ಯವನ್ನು ವಿಸ್ತಾರ ಮಾಡಿ, ರಾಜ್ಯದ ಉಪಾಧ್ಯಕ್ಷರಾಗಿ ನನ್ನ ಜತೆ ರಾಜ್ಯಾದ್ಯಂತ ಪ್ರವಾಸ ಮಾಡಿದವರು. ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಹೊಸ ಹುರುಪು, ಉತ್ಸಾಹ ಬಂದಿದೆ. ಮುಂದೆ ಅವರ ಜತೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ.

ಕಳೆದ 6 ತಿಂಗಳ ಅವಧಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರದ ವಿರುದ್ಧದ ಆ ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಕಾಂಗ್ರೆಸ್ ವೈಫಲ್ಯ, ಮೋದಿ ಅಲೆಯ ಪ್ರಯೋಜನವನ್ನು ಬಿಜೆಪಿ ಪಡೆಯಲಿದೆ,” ಎಂದಿದ್ದಾರೆ. ಲಿಂಗಾಯತ ಸಮುದಾಯದ ವಿಜಯೇಂದ್ರ ಆಯ್ಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ”ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಮ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಅವರಲ್ಲಿ ಸಂಘಟನಾ ಶಕ್ತಿ ಇದ್ದು, ಅವರ ಬಗ್ಗೆ ಯುವಕರಲ್ಲಿ ಒಳ್ಳೆಯ ಅಭಿಪ್ರಾಯವಿದೆ’ ಎಂದಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *