ಕೊಲ್ಲಮೊಗ್ರದ ಯುವತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮಾನವ ಕಳ್ಳ ಸಾಗಣೆ ಜಾಲದ ಮೇಲೆ ಹಿಂದೂ ಮುಖಂಡರ ಅನುಮಾನ
ನ್ಯೂಸ್ ಆ್ಯರೋ : ಕೊಲ್ಲಮೊಗ್ರದ ಯುವತಿ ನಾಪತ್ತೆ ಪ್ರಕರಣದ ಆಳ ಕೆದಕುತ್ತಾ ಸಾಗಿದಂತೆ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದ್ದು, ಇಡೀ ಪ್ರಕರಣದ ಹಿಂದೆ ಮಾನವ ಕಳ್ಳ ಸಾಗಾಣಿಕೆ ಜಾಲದ ಕೈವಾಡ ಇದೆಯಾ ಎಂಬ ಬಗ್ಗೆ ಗುಸುಗುಸು ಆರಂಭವಾಗಿದೆ.
ಕೊಲ್ಲಮೊಗ್ರದ ಯುವತಿ ನಾಪತ್ತೆ ಪ್ರಕರಣದ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರ ಪ್ರಕಾರ, ಇದೊಂದು ಮಾನವ ಕಳ್ಳ ಸಾಗಾಣಿಕೆ ಜಾಲದ ಕೈವಾಡ. ಇದರ ಹಿಂದೆ ಇನ್ನಷ್ಟು ಕೈಗಳಿದ್ದು, ಯುವತಿ ಲವ್ ಜಿಹಾದ್ ಗೆ ಒಳಗಾಗಿ ನಾಪತ್ತೆಯಾಗಿದ್ದಲ್ಲ. ಬದಲಾಗಿ ವ್ಯವಸ್ಥಿತವಾಗಿ ಆಕೆಯನ್ನು ವಿದೇಶಕ್ಕೆ ಸಾಗಿಸುವ ಕೃತ್ಯ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಬಡ ಮನೆಯ ಹೆಣ್ಣು ಮಕ್ಕಳಿಗೆ ವಿದೇಶಿ ಉದ್ಯೋಗದ ಆಸೆ ತೋರಿಸಿ ವೀಸಾ ಪಾಸ್ ಪೋರ್ಟ್ ಮಾಡಿಸಿಕೊಡುವ ಭರವಸೆ ನೀಡಲಾಗುತ್ತದೆ. ಬಳಿಕ ಅವರನ್ನು ಗುರುತೇ ಸಿಗದಂತೆ ಅಪಹರಿಸಿ ಮಾನವ ಕಳ್ಳ ಸಾಗಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 12 ಸಾವಿರಕ್ಕೂ ಅಧಿಕ ಯುವತಿಯರು ನಾಪತ್ತೆಯಾಗಿರುವ ದಾಖಲೆಗಳಿವೆ. ಆದರೆ ಅವರು ಪತ್ತೆಯಾಗಿಲ್ಲ. ಇದರ ಬಗ್ಗೆ ತನಿಖೆ ಅಗತ್ಯ ಇದೆ ಎಂಬ ಗಂಭೀರ ಮಾಹಿತಿ ಬಿಚ್ಚಿಟ್ಟಿದ್ದಾರೆ.
ವಿದೇಶದಲ್ಲಿ ಉದ್ಯೋಗ ಸಿಗುವ ಬಯಕೆಯಲ್ಲಿ ವಿದ್ಯಾವಂತ ಯುವತಿಯರು ಈ ಮೋಸದ ಜಾಲಕ್ಕೆ ಸಿಲುಕುತ್ತಿದ್ದು, ಕೊಲ್ಲಮೊಗ್ರದ ಯುವತಿ ನಾಪತ್ತೆ ಪ್ರಕರಣವೂ ಇದೇ ರೀತಿಯಲ್ಲಿ ನಡೆದಿರಬಹುದು ಎಂಬ ಅನುಮಾನ ಮೂಡಿದೆ. ಪೋಲಿಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಇನ್ನಷ್ಟು ವಿಚಾರ ಬಯಲಾಗಬಹುದು ಎಂಬ ಬಗ್ಗೆ ಚರ್ಚೆಯಾಗುತ್ತಿದ್ದು, ಪೋಲಿಸರು ಈ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ.
Leave a Comment