ವಾಹನದ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ರೆ ಹುಷಾರ್..! – ಅಪಾಯಕ್ಕೆ ಕಾರಣವಾಗುತ್ತೆ ಈ  ಅಂಶಗಳು‌‌..!

ವಾಹನದ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ರೆ ಹುಷಾರ್..! – ಅಪಾಯಕ್ಕೆ ಕಾರಣವಾಗುತ್ತೆ ಈ ಅಂಶಗಳು‌‌..!

ನ್ಯೂಸ್ ಆ್ಯರೋ‌ : ಕೆಲವು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ನಮ್ಮ ಪ್ರಯಾಣವನ್ನು ಸುರಕ್ಷಿತವಾಗಿಸಬಹುದು ಎನ್ನುತ್ತಾರೆ ತಜ್ಞರು. ರಸ್ತೆ ನಿಯಮಗಳ ಜೊತೆಗೆ ವಾಹನಗಳ ಒಳಗೂ ಪಾಲಿಸಬೇಕಾದ ಕೆಲವು ನಿಯಮಗಳಿದ್ದು, ಅದರಂತೆ ನಡೆದುಕೊಂಡರೆ ಯಾವುದೇ ಅಪಾಯವಿಲ್ಲ. ಆ ಪೈಕಿ ಕಾರಿನ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಮಾಡಬಾರದು ಎನ್ನುವ ನಿಯಮವೂ ಒಂದು.

ಯಾಕೆ ಅಪಾಯಕಾರಿ?

ಕಾರಿನ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಮಾಡುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಯಾಕೆಂದರೆ ಅದೇ ಜಾಗದಲ್ಲಿ ಏರ್ ಬ್ಯಾಗ್ ಇರುತ್ತದೆ. ಹೀಗಾಗಿ ಅಪಘಾತ ಸಂಭವಿಸಿದಾಗ ಏರ್ ಬ್ಯಾಗ್ ತೆರೆದುಕೊಂಡರೂ ತೀವ್ರ ಗಾಯಗಳಾಗಲಿವೆ.

ಅಲ್ಲದೆ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟು ಕುಳಿತುಕೊಳ್ಳುವಾಗ ಸೀಟ್ ಬೆಲ್ಟ್ ಧರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಪಘಾತದ ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆದುಕೊಳ್ಳುವುದಿಲ್ಲ.

ಗಾಯವಾಗುವ ಸಾಧ್ಯತೆ

ಇನ್ನು ಕಾಲಿನ ಭಾರ ಮತ್ತು ದಿಢೀರ್ ಬ್ರೇಕ್ ಮತ್ತು ಎಕ್ಸ್ ಲೇಟರ್ ತುಳಿಯುವುದರಿಂದ ಒತ್ತಡ ಹೆಚ್ಚಿ ದಿಢೀರ್ ಏರ್ ಬ್ಯಾಗ್ ತೆರೆದುಕೊಳ್ಳುವ ಸಾಧ್ಯತೆ ಇದೆ. ಹೀಗಾದಾಗ ಅಪಘಾತವಾಗದೆ ಕಾಲಿಗೆ ಬಲವಾದ ಪಟ್ಟು ಬಿದ್ದು ಗಾಯವಾಗುವ ಸಾಧ್ಯತೆ ಇದೆ.

ಕಾಲಿನ ಭಾರದಿಂದಾಗಿ ಅಪಘಾತವಾದರೂ ಏರ್ ಬ್ಯಾಗ್ ತೆರೆಯದೇ ಇರುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಏರ್ ಬ್ಯಾಗ್ ಸರಿಯಾಗಿ ಕಾರ್ಯನಿರ್ವಹಿಸಲು ಕಾಲಿನ ಭಾರ ಅಡ್ಡಿಯಾಗಲಿದೆ. ಅಲ್ಲದೆ ಈ ರೀತಿ ಪ್ರಯಾಣ ಮಾಡುವುದು ಮೋಟಾರ್ ವಾಹನ ನಿಯಮಕ್ಕೆ ವಿರುದ್ಧ ಸಿಕ್ಕಿ ಬಿದ್ದರೆ ದಂಡವನ್ನೂ ಕಟ್ಟಬೇಕಾಗುತ್ತದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *