ಹ್ಯುಂಡೈ ಎಕ್ಸ್‌ಟರ್‌ಗೆ ಟಾಟಾ ಪಂಚ್ – ಹೊಸ ಫೀಚರ್ ನೊಂದಿಗೆ ಮಾರಾಟ ಹೆಚ್ಚಳದ ನಿರೀಕ್ಷೆ

ಹ್ಯುಂಡೈ ಎಕ್ಸ್‌ಟರ್‌ಗೆ ಟಾಟಾ ಪಂಚ್ – ಹೊಸ ಫೀಚರ್ ನೊಂದಿಗೆ ಮಾರಾಟ ಹೆಚ್ಚಳದ ನಿರೀಕ್ಷೆ

ನ್ಯೂಸ್ ಆ್ಯರೋ‌ : ಸದ್ಯ ಭಾರತದ ಕಾರು ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ಕಂಪೆನಿಗೆ ಪಂಚ್ ನೀಡಲು ಟಾಟಾ ಮೋಟಾರ್ಸ್ ಸಜ್ಜಾಗಿದೆ. ಹ್ಯುಂಡೈ ಎಕ್ಸ್‌ಟರ್‌ ಮಾಡೆಲ್ ಗೆ ಸೆಡ್ಡು ಹೊಡೆಯಲು ಟಾಟಾ ತನ್ನ ಮೈಕ್ರೋ ಎಸ್.ಯು.ವಿ. ಪಂಚ್ ರೂಪಾಂತರಗಳಲ್ಲಿ ಹೊಸ ವೈಶಿಷ್ಟ್ಯ ಪರಿಚಯಿಸಿದೆ.

ಏನಿದು ಹೊಸ ವೈಶಿಷ್ಟ್ಯ?

ಇತ್ತೀಚೆಗೆ ಭಾರತದಲ್ಲಿ ಪಂಚ್ ಸಿ.ಎನ್.ಜಿ. ಆವೃತ್ತಿಯನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ವಾಯ್ಸ್ ಕಂಟ್ರೋಲ್ಡ್ ಹಾಗೂ ಎಲೆಕ್ಟ್ರಿಕ್ ಸನ್ ರೂಫ್ ಇತ್ಯಾದಿ ವಿಶಿಷ್ಟ ಫೀಚರ್ ಗಳನ್ನು ಪರಿಚಯಿಸಲಾಗಿತ್ತು. ಇದೀಗ ಪಂಚ್ ಎಸ್.ಯು.ವಿ.ಯ ಪೆಟ್ರೋಲ್ ರೂಪಾಂತರಗಳಲ್ಲಿ ಸನ್ ರೂಫ್ ಅಳವಡಿಸಲಾಗಿದೆ. ಇದನ್ನು ಒಳಗೊಂಡಿರುವ ಕಾರಿನ ಬೆಲೆ 8.25 ಲಕ್ಷ ರೂ.ಯಿಂದ ಆರಂಭ.

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೋಜ್, ಹ್ಯುಂಡೈ ಎಕ್ಸ್‌ಟರ್‌ ಬಳಿಕ ಎಲೆಕ್ಟ್ರಿಕ್ ಸನ್ ರೂಫ್ ಆಯ್ಕೆಯೊಂದಿಗೆ ಲಭ್ಯವಾಗುವ ಕಡಿಮೆ ಬೆಲೆಯ ಮೂರನೇ ಕಾರು ಟಾಟಾ ಪಂಚ್. ಇದು ಮಾತ್ರವಲ್ಲ ಟಾಟಾ ಪಂಚ್ ಇನ್ನೂ ಹಲವು ಗಮನ ಸೆಳೆಯುವ ಫೀಚರ್ ಗಳನ್ನು ಒಳಗೊಂಡಿದೆ.

7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಸೆಮಿ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್, ಆಟೋ ಕ್ಲೈಮೇಟ್ ಕಂಟ್ರೋಲ್, ಕನೆಕ್ಟೆಡ್ ಕಾರ್ ಟೆಕ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ ಗಳು ಟಾಟಾ ಪಂಚ್ ಮೈಕ್ರೋ ಎಸ್.ಯು.ವಿ.ಯನ್ನು ವಿಶೇಷವಾಗಿಸುತ್ತದೆ.

ಅತ್ಯಾಧುನಿಕ ಸುರಕ್ಷತೆ

ಸುರಕ್ಷತೆಗಾಗಿ ಟಾಟಾ ಪಂಚ್ ಎಸ್.ಯು.ವಿ.ಯಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿವೆ. ವಯಸ್ಕರ ರಕ್ಷಣೆಯಲ್ಲಿ 17ಕ್ಕೆ 16.45 ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 40.89 ಅಂಕ ಗಳಿಸಿದೆ. ಏರ್ ಬ್ಯಾಗ್ಸ್, ಎಬಿಸಿ(ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ರೇರ್ ವ್ಯೂ ಕ್ಯಾಮರಾ ಒಳಗೊಂಡಿದೆ.

2021ರಲ್ಲಿ ಬಿಡುಗಡೆಗೊಂಡ ಪಂಚ್ ಎಸ್.ಯು.ವಿ.ಯ ತಯಾರಿಯಲ್ಲಿ ಟಾಟಾ ಮೇ ತಿಂಗಳಿನಲ್ಲಿ ಮೈಲಿಗಲ್ಲಿ ನಿರ್ಮಿಸಿತ್ತು. ಎರಡು ವರ್ಷಗಳಲ್ಲಿ ಬರೋಬ್ಬರಿ 2 ಲಕ್ಷ ಯೂನಿಟ್ ಉತ್ಪಾದಿಸಿ ದಾಖಲೆ ಬರೆದಿದೆ. ಈಗಲೂ ದೇಶದಲ್ಲಿ ಮಾರಾಟವಾಗುವ ಟಾಪ್ 10 ಎಸ್.ಯು.ವಿ. ಪಟ್ಟಿಯಲ್ಲಿ ಪಂಚ್ ಸ್ಥಾನ ಪಡೆದಿದೆ. ಸದ್ಯ ಎಲೆಕ್ಟ್ರಿಕ್ ಸನ್ ರೂಫ್ ಪರಿಚಯಿಸಿರುವುದರಿಂದ ಮಾರಾಟ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *