Dress Code at Sringeri Temple : ಶೃಂಗೇರಿ ಶಾರದಾ ಪೀಠದಲ್ಲಿ ವಸ್ತ್ರ ಸಂಹಿತೆ ಜಾರಿ – ದೇಗುಲಕ್ಕೆ ಬರುವವರು ಈ ವಿಚಾರ ಗಮನಿಸಿ..
ನ್ಯೂಸ್ ಆ್ಯರೋ : ಶೃಂಗೇರಿ ಶಾರದಾ ಪೀಠದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಆಗಸ್ಟ್ 15 ರಿಂದ ಈ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದ್ದು, ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ 20 ದಿನಗಳ ಹಿಂದೆ ಆದೇಶ ಹೊರಡಿಸಿತ್ತು.
ದಿನನಿತ್ಯೂ ಶೃಂಗೇರಿ ದೇಗುಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಲ್ಲಿ ಮಕ್ಕಳೊಂದಿಗೆಉ ಶಾರದಾ ಪೂಜೆ ನಡೆಸಿ ಅಕ್ಷರಾಭ್ಯಾಸ ಮಾಡಿಸಿದರೆ ಮಕ್ಕಳ ವಿದ್ಯಾಭ್ಯಾಸ ಅಡೆ ತಡೆಯಿಲ್ಲದೆ ಮುಂದುವರಿಯುತ್ತದೆ ಎನ್ನುವ ನಂಬಿಕೆಯಿದೆ. ಇದೀಗ ಶೃಂಗೇರಿ ಶಾರದಾ ಪೀಠಕ್ಕೆ ಬರುವ ಎಲ್ಲಾ ಭಕ್ತರಿಗಾಗಿ ವಸ್ತ್ರ ಸಂಹಿತೆಯನ್ನು ಜಾರಿಗೆ ಮಾಡಲಾಗಿದೆ.
ವಸ್ತ್ರ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪಂಚೆ, ಶಲ್ಯ,ದೋತಿ, ಸೀರೆಯಲ್ಲಿ ಪೀಠಕ್ಕೆ ಭಕ್ತರು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ದೇವಾಲಯದ ಆವರಣ ಭಾರತೀಯ ಸಂಸ್ಕೃತಿಯ ತಾಣವಾಗಿ ಕಾಣಿಸಿದ್ದು ಉತ್ತಮ ಬೆಳವಣಿಗೆಯಾಗಿದೆ.
20 ದಿನದ ಹಿಂದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ದೇವಾಲಯ ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು. ದೇವರು,ಗುರುಗಳ ದರ್ಶನಕ್ಕೆ ಬರುವವರು ಸಾಂಪ್ರಾದಾಯಿಕ ಉಡುಗೊರೆಯಲ್ಲಿರುವಂತೆ ಸೂಚನೆ ನೀಡಲಾಗಿದೆ. ದೇವಾಲಯ ಜಾರಿಗೊಳಿಸಿದ ವಸ್ತ್ರ ಸಂಹಿತೆ ಪದ್ಧತಿಯನ್ನು ಭಕ್ತವೃಂದ ಕೂಡಾ ಸ್ವಾಗತಿಸಿದ್ದು, ಇತ್ತೀಚೆಗಷ್ಟೆ ಶರಣ್ ಪಂಪ್ ವೆಲ್ ರಾಜ್ಯಾದ್ಯಂತ ಈ ನಿಯಮ ಜಾರಿಗೆ ಬರಬೇಕೆಂದು ಆಗ್ರಹಿಸಿದ್ದರು.
Leave a Comment