Big Expose Video : ಲಷ್ಕರ್ ಉಗ್ರರ ಜೊತೆ ಅರ್ಷದ್ ನದೀಮ್ ಮೀಟಿಂಗ್ – ಚಿನ್ನದ ಪದಕ ಗೆದ್ದ ಅತ್ಲೀಟ್ ವಿರುದ್ಧ ಭಾರತೀಯರ ಅಸಮಾಧಾನ
ನ್ಯೂಸ್ ಆ್ಯರೋ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನದ ಜಾವೆಲಿನ್ ಆಟಗಾರ ಅರ್ಷದ್ ನದೀಮ್ 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ 100 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆದು ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ನದೀಮ್ರನ್ನು ಕ್ರೀಡಾಲೋಕ ಕೊಂಡಾಡುತ್ತಿರುವ ನಡುವೆಯೇ ಅವರ ಒಂದು ವಿಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಚಿನ್ನದ ಪದಕ ಗೆದ್ದಿರುವ ಅರ್ಷದ್ ನದೀಮ್ ಲಷ್ಕರ್-ಇ-ತೋಯ್ಬಾದ ನಾಯಕ ಹ್ಯಾರಿಸ್ ಧಾರ್ರೊಂದಿಗೆ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ. ಆದರೆ, ಅದು ಯಾವಾಗ ಭೇಟಿಯಾಗಿದ್ದು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಸದ್ಯ ಇರುವ ಮಾಹಿತಿ ಪ್ರಕಾರ ನದೀಮ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಂತರ ಲಷ್ಕರ್-ಇ-ತೋಯ್ಬಾ ಸಂಘಟನೆ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಸ್ಥ ಧಾರ್ರೊಂದಿಗೆ ಅರ್ಷದ್ ಮಾತುಕತೆಯಲ್ಲಿ ತೊಡಗಿದ್ದು, ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಯಾವುದೇ ಸೌಲಭ್ಯ, ಪ್ರಾಯೋಜಕತ್ವವಿಲ್ಲದೆ ಒಲಿಂಪಿಕ್ಸ್ಗೆ ಕಾಲಿಟ್ಟಿದ್ದ ನದೀಮ್ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಇವರ ಪ್ರತಿಭೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅನೇಕ ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳು ಅವರನ್ನು ಸಾಧನೆಯನ್ನ ಪ್ರಶಂಸಿಸುತ್ತಿದ್ದಾರೆ.
ಮತ್ತೊಂದೆಡೆ ಪಾಕಿಸ್ತಾನ ಸರ್ಕಾರವೂ ಅವರನ್ನು ಸನ್ಮಾನಿಸಲು ಸಿದ್ಧತೆ ನಡೆಸಿದೆ. ಇದರ ಭಾಗವಾಗಿ, ಅವರಿಗೆ ಭಾರಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ಘೋಷಿಸಲಾಗುತ್ತಿದೆ. ಇದರ ನಡುವೆ ಈ ವಿಡಿಯೋ ವೈರಲ್ ಆಗಿದ್ದು ಭಾರತೀಯರಂತೂ ಅರ್ಷದ್ ವಿರುದ್ಧ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ.
Leave a Comment