ಬ್ಲ್ಯಾಕ್ ಹೋಲ್ – ಇದು ಬೆಳಕನ್ನೂ ನುಂಗುವ ದೈತ್ಯ – ಏನಿದು ವಿಸ್ಮಯ? ಅಪರೂಪದ ಮಾಹಿತಿ ಇಲ್ಲಿದೆ…

ಬ್ಲ್ಯಾಕ್ ಹೋಲ್ – ಇದು ಬೆಳಕನ್ನೂ ನುಂಗುವ ದೈತ್ಯ – ಏನಿದು ವಿಸ್ಮಯ? ಅಪರೂಪದ ಮಾಹಿತಿ ಇಲ್ಲಿದೆ…

ನ್ಯೂಸ್ ಆ್ಯರೋ‌ : ಅಂತರಿಕ್ಷ ತನ್ನ ಒಡಲಲ್ಲಿ ಅನೇಕ ವಿಸ್ಮಯಗಳನ್ನು ಹುದುಗಿಸಿಕೊಂಡಿದೆ. ಇವನ್ನು ಶೋಧಿಸಿದಷ್ಟು ಕುತೂಹಲ ಮೂಡಿಸುತ್ತವೆ. ಈ ಪೈಕಿ ಬ್ಲ್ಯಾಕ್ ಹೋಲ್ ಅಥವಾ ಕಪ್ಪು ಕುಳಿ ಕೂಡ ಒಂದು. ಅತಿಯಾದ ಗುರುತ್ವಾಕರ್ಷಣ ಬಲ ಹೊಂದಿರುವ ಪ್ರದೇಶವನ್ನು ಕಪ್ಪು ಕುಳಿ ಎಂದು ಕರೆಯಲಾಗುತ್ತದೆ. ಹಾಗಾದರೆ ಕಪ್ಪುಕುಳಿ ಹೇಗೆ ರೂಪುಗೊಳ್ಳುತ್ತದೆ, ಇದರ ಅಗಾಧ ಶಕ್ತಿ ಎಂತಹದ್ದು ಮುಂತಾದವುಗಳ ವಿವರ ಇಲ್ಲಿದೆ.

ಬೆಳಕನ್ನು ನುಂಗುವ ಶಕ್ತಿ

ಈ ಕಪ್ಪುಕುಳಿ ಎಷ್ಟು ಶಕ್ತಿಶಾಲಿ ಎಂದರೆ ಇದು ಪ್ರಪಂಚದಲ್ಲಿ ಅತೀ ವೇಗವಾಗಿ ಚಲಿಸುವ ಬೆಳಕನ್ನೂ ಹಿಡಿದಿಡುವ ಸಾಮರ್ಥ್ಯ ಹೊಂದಿದೆ. ಪ್ರಕಾಶವನ್ನು ಹಿಡಿದಿಡುವ ಕಾರಣ ಇದು ಕತ್ತಲೆಯ ಕೂಪವಾಗಿರುತ್ತದೆ. ಆದ್ದರಿಂದಲೇ ಇದನ್ನು ಕಪ್ಪು ಕುಳಿ ಎಂದು ಕರೆಯಲಾಗುತ್ತದೆ. ಈ ಕಪ್ಪು ಕುಳಿಯ ಚಿತ್ರವನ್ನು ನೊಡಿದರ ಅದರಲ್ಲಿ ಒಂದು ವೃತ್ತಾಕಾರದ ಬೆಳಕಿನ ಗೆರೆಯನ್ನು ಕಾಣಬಹುದು. ಇದು ಗಡಿ ನಿಯಂತ್ರಣ ರೇಖೆ. ಇದನ್ನು ದಾಟಿ ಒಳ ಬರುವ ಯಾವ ವಸ್ತುವೂ ಹಿಂದಿರುಗುವುದಿಲ್ಲ. ಕಪ್ಪು ಕುಳಿಯ ಈ ಗಡಿ ಪ್ರದೇಶವನ್ನು Event Horizon ಎಂದು ಕರೆಯಲಾಗುತ್ತದೆ.

ಎರಡು ರೀತಿಯ ಬ್ಲ್ಯಾಕ್ ಹೋಲ್

ಸಾಮಾನ್ಯವಾಗಿ ಬ್ಲ್ಯಾಕ್ ಹೋಲ್ ಎರಡು ರೀತಿಯಲ್ಲಿ ಕಂಡು ಬರುತ್ತದೆ. ಮೊದಲ ವಿಧ Stellar blackhole. ನಕ್ಷತ್ರಗಳ ಆಯಸ್ಸು ಮುಗಿದಾಗ ಇಂತಹ ಕಪ್ಪು ಕುಳಿ ಉಂಟಾಗುತ್ತದೆ. (ನಕ್ಷತ್ರಗಳಲ್ಲಿನ ಇಂಧನ ಮುಗಿದಾಗ ಅವುಗಳ ಜೀವತಾವಧಿ ಮುಗಿಯುತ್ತದೆ). ಕ್ಷೀರ ಪಥದಲ್ಲಿ ಇಂತಹ ಲಕ್ಷಗಟ್ಟಲೆ ಕಪ್ಪು ಕುಳಿಗಳಿವೆ ಎನ್ನುತ್ತಾರೆ ತಜ್ಞರು.

ಇನ್ನೊಂದು ವಿಧದ ಕಪ್ಪುಕುಳಿಯನ್ನು Supermassive blackhole ಎಂದು ಗುರುತಿಸಲಾಗುತ್ತದೆ. ಹೆಸರೇ ಹೇಳುವಂತೆ ಇವ ಬೃಹತ್ ಗಾತ್ರದಲ್ಲಿರುತ್ತವೆ. ಸೂರ್ಯನಿಂದ ಲಕ್ಷ ಪಟ್ಟು ಹೆಚ್ಚಿನ ಭಾರ ಹೊಂದಿರುತ್ತವೆ. ಇವು ಹೇಗೆ ರೂಪುಗೊಳ್ಳುತ್ತವೆ ಎನ್ನುವುದನ್ನು ಇದುವರೆಗೆ ಕಂಡು ಹಿಡಿಯಲಾಗಿಲ್ಲ. ಕೆಲವೊಂದು ಸಾಧ್ಯತೆಗಳನ್ನಷ್ಟೇ ವಿಜ್ಞಾನಿಗಳು ಊಹಿಸಿದ್ದಾರೆ.

ಅಧ್ಯಯನ ಅಸಾಧ್ಯ

ಇನ್ನೊಂದು ಮುಖ್ಯ ವಿಚಾರ ಎಂದರೆ ಕಪ್ಪು ಕುಳಿಗಳನ್ನು ನೋಡಲು ಅಥವಾ ಟೆಲಿಸ್ಕೋಪ್ ಬಳಸಿ ಅಧ್ಯಯನ ನಡೆಸಲು ಸಾಧ್ಯವಿಲ್ಲ. ಹಾಗಾದರೆ ಇದನ್ನು ನಾವು ಹೇಗೆ ಗುರುತಿಸಬಹುದು ಎನ್ನುವುದಕ್ಕೆ ಉತ್ತರ ಇಲ್ಲಿದೆ. ಕಪ್ಪುಕುಳಿ ತನ್ನೆಡೆಗೆ ಧೂಳು ಮತ್ತು ಅನಿಲಗಳನ್ನು ಸೆಳೆಯುವ ಸಂದರ್ಭದಲ್ಲಿ ಅಲ್ಲಿ ರಾಸಾಯನಿಕ ಪ್ರಕ್ರಿಯೆ ನಡೆದು ಪ್ಲಾಸ್ಮಾ ಎನ್ನುವ ಸ್ಥಿಗೆ ತಲುಪುತ್ತದೆ. ಹೀಗೆ ಅಲ್ಲಿ ಪ್ರಕಾಶಮಾನವಾದ ವಾತಾವರಣ ಸೃಷ್ಟಿಯಾಗುತ್ತದೆ. ಇದನ್ನು Accretion disks ಎನ್ನಲಾಗುತ್ತದೆ. ಇದು ಕಪ್ಪು ಕುಳಿಯ ಗಡಿ ಪ್ರದೇಶ. ಇದು ನಮ್ಮ ಕಣ್ಣಿಗೆ ಗೋಚರವಾಗುತ್ತದೆ. ಈ Accretion disks ಪ್ರದೇಶಗಳಲ್ಲಿನ ವಿಕಿರಣಗಳನ್ನು ಅಧ್ಯಯನಕ್ಕೊಳಪಡಿಸಿ ಕಪ್ಪು ಕುಳಿಯನ್ನು ಗಮನಿಸಲಾಗುತ್ತದೆ.

ಇದೇ ರೀತಿ ನಮ್ಮ ಗ್ಯಾಲಕ್ಸಿಯಾದ ಕ್ಷೀರ ಪಥದಲ್ಲಿನ ಎಲ್ಲಾ ನಕ್ಷತ್ರಗಳು ಮತ್ತು ಗ್ರಹಗಳು ಕ್ಷೀರ ಪಥದ ಕೇಂದ್ರಕ್ಕೆ ಸುತ್ತ ಪರಿಭ್ರಮಣೆಗೊಳ್ಳುತ್ತವೆ. ಈ ಕ್ಷೀರ ಪಥದ ಕೇಂದ್ರ ಸ್ಥಾನದಲ್ಲಿ Sagittarius ಎನ್ನುವ ಕಪ್ಪು ಕುಳಿ ಇದೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *