IND vs SL ODI : ಕಪ್ಪು ಪಟ್ಟಿ ಧರಿಸಿ ಆಡಿದ ಟೀಂ ಇಂಡಿಯಾ – ಕಾರಣ ಹೀಗಿದೆ ನೋಡಿ…
ನ್ಯೂಸ್ ಆ್ಯರೋ : ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯ ಕೊಲಂಬೊದಲ್ಲಿ ನಡೆಯುತ್ತಿದ್ದು, ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕೈಗೆ ಕಪ್ಪು ಪಟ್ಟಿ ಕಟ್ಟಿ ಕಣಕ್ಕಿಳಿದಿದ್ದು, ಇತ್ತೀಚೆಗೆ ಅಗಲಿದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕವಾಡ್ ಅವರ ನೆನಪಿಗಾಗಿ ಭಾರತೀಯ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಲು ನಿರ್ಧರಿಸಿದ್ದು, ಆ ಮೂಲಕ ಅಗಲಿದ ಮಾಜಿ ಕೋಚ್ ಗೆ ಗೌರವ ಸೂಚಿಸಿದೆ.
ಮಹಾಮಾರಿ ಕ್ಯಾನ್ಸರ್‌ಗೆ ತುತ್ತಾಗಿದ್ದ ಗಾಯಕ್‌ವಾಡ್ ಅವರು ಕಳೆದ ಜುಲೈ 31ರಂದು ನಿಧನರಾಗಿದ್ದು, ಈ ಬಗ್ಗೆ ಪ್ರಕಟಣೆ ಹೊರಡಿಸಿದ ಬಿಸಿಸಿಐ, ‘ಅಂಶುಮಾನ್ ಗಾಯಕ್‌ವಾಡ್ ಅವರ ನೆನಪಿಗಾಗಿ ಭಾರತ ತಂಡ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಇಳಿಯಲಿದೆ’ ಎಂದು ತಿಳಿಸಿದೆ.
ಗಾಯಕ್ವಾಡ್ ಬಗ್ಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ ಅವರು ಗಾಯಕ್‌ವಾಡ್ ಅವರೊಂದಿಗೆ ಹಲವು ಸಂದರ್ಭಗಳಲ್ಲಿ ಮಾತನಾಡುವ ಅವಕಾಶ ಸಿಕಿತ್ತು. ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಬಿಸಿಸಿಐ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವಾಗಿತ್ತು. ರಣಜಿ ಟ್ರೋಪಿ ವೇಳೆ ನನ್ನ ಆಟದ ಬಗ್ಗೆಯೂ ಚರ್ಚೆ ನಡೆಸಿದ್ದೆವು’ ಎಂದು ಹೇಳಿದ್ದಾರೆ.
ಸದ್ಯ ಮೊದಲ ಏಕದಿನ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆರಿಸಿದೆ. 25 ಓವರ್ ಗಳ ಆಟ ಮುಗಿದಿದ್ದು, ಆರಂಭಿಕ ಕುಸಿತದ ಬಳಿಕವೂ ಪತ್ತುಮ್ ನಿಸ್ಸಂಕ ಅವರ ಅಜೇಯ ಅರ್ಧಶತಕದ ಬೆಂಬಲದೊಂದಿಗೆ ನಾಲ್ಕು ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ ಕುಂಟುತ್ತಾ ಸಾಗಿದೆ.
Leave a Comment