Paris Olympics 2024 : ವಿವಾದಕ್ಕೆ ಕಾರಣವಾದ ಪುರುಷನ ಜೊತೆ ಮಹಿಳೆಯ ಬಾಕ್ಸಿಂಗ್ ಸ್ಪರ್ಧೆ – 46 ಸೆಕೆಂಡ್ ನಲ್ಲೇ ಪಂದ್ಯ ಅಂತ್ಯ : ವಿವಾದಕ್ಕೆ ಕಾರಣವಾಗಿದ್ದೇನು?
ನ್ಯೂಸ್ ಆ್ಯರೋ : ಪ್ಯಾರಿಸ್ ಒಲಿಂಪಿಕ್ಸ್ 2024ರ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ವಿವಾದದಿಂದ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯೊಂದಕ್ಕೆ ಕಾರಣವಾಗಿದೆ. ನಿನ್ನೆ ನಡೆದ ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಇಟಾಲಿ ಮೂಲದ ಬಾಕ್ಸರ್ ಏಂಜಲೀನಾ ಕ್ಯಾರಿನಿ ತಮ್ಮ ಎದುರಾಳಿ ಅಲ್ಜೀರಿಯಾದ ಇಮಾನೆ ಖೆಲಿಫ್ ವಿರುದ್ಧದ ಪಂದ್ಯವನ್ನು ತ್ಯಜಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಮಹಿಳಾ ಬಾಕ್ಸರ್ ವಿರುದ್ಧ ಸೆಣಸಲು ಪುರುಷ ಬಾಕ್ಸರ್ ಗೆ ಅವಕಾಶ ಮಾಡಿಕೊಟ್ಟು ವಂಚನೆ ಎಸಗಿದ ಆರೋಪವೊಂದು ಆಯೋಜಕರ ವಿರುದ್ಧ ಕೇಳಿ ಬಂದಿದೆ.
ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯೊಂದಕ್ಕೆ ಪುರುಷ ಸ್ಪರ್ಧಿಯೊಬ್ಬರು ಕಣಕ್ಕಿಳಿದಿದ್ದು ಮಾತ್ರವಲ್ಲದೇ ಕೇವಲ 46 ಸೆಕೆಂಡ್ ಗಳಲ್ಲಿಜನನ ಎದುರಾಳಿಯನ್ನು ಸೋಲಿಸಿದ್ದು ಜಾಗತಿಕವಾಗಿ ಕ್ರೀಡಾಭಿಮಾನಿಗಳಲ್ಲಿ ಕಿಡಿ ಹಚ್ಚಿದೆ. ಸ್ವತಃ ಇಟಲಿಯ ಸ್ಪರ್ಧಿ ರಿಂಗ್ ನಲ್ಲಿ ಕಣ್ಣೀರು ಹಾಕುವ ಜತೆಗೆ ಬಳಿಕ ಮಾಧ್ಯಮದ ಮುಂದೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
ಇಟಲಿಯ Angela Carini ಅವರ ಎದುರಾಳಿಯಾಗಿದ್ದ ಅಲ್ಜೇರಿಯಾದ Imane Khelif ಅಸಲಿಗೆ ಮಹಿಳೆಯೇ ಅಲ್ಲವಂತೆ. ಆಕೆ ಜೈವಿಕ ಪುರುಷ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೇಲಿಫ್ ಈ ಹಿಂದೆ ಅಂದರೆ ಕಳೆದ ವರ್ಷ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾಗಿದ್ದರು.
ಕಳೆದ ವರ್ಷ ವಿಶ್ವ ಚಾಂಪಿಯನ್ಶಿಪ್ನಲ್ಲಿ ಲಿಂಗ ಪರೀಕ್ಷೆಯಲ್ಲಿ ವಿಫಲರಾಗಿ ವಿವಾದಕ್ಕೀಡಾಗಿದ್ದರು.
ಆದಾಗ್ಯೂ ಅವರಿಗೆ ಒಲಿಂಪಿಕ್ಸ್ ನಲ್ಲಿ ಅವಕಾಶ ಕೊಟ್ಟಿರುವುದು ವಿವಾದ ಹುಟ್ಟುಹಾಕಿದೆ.
25 ವರ್ಷದ ಖೆಲಿಫಾ ಅವರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾಗಿದೆ ಎಂದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಇದು ಪುರುಷರ ದೇಹದಲ್ಲಿರುವ ಅಂಶವಾಗಿದ್ದು, ಅವರಿಗೆ ಸ್ಪರ್ಧೆಗೆ ಅವಕಾಶ ನಿರಾಕರಿಸಲಾಗಿತ್ತು.
Leave a Comment