ಮಯನ್ಮಾರ್ ಪೋರ್ಟ್ಸ್ ಮಾರಾಟ ಮಾಡಿದ ಅದಾನಿ ಪೋರ್ಟ್ಸ್; ಕಾರಣವೇನು, ಮೊತ್ತವೆಷ್ಟು ಗೊತ್ತ?

ಮಯನ್ಮಾರ್ ಪೋರ್ಟ್ಸ್ ಮಾರಾಟ ಮಾಡಿದ ಅದಾನಿ ಪೋರ್ಟ್ಸ್; ಕಾರಣವೇನು, ಮೊತ್ತವೆಷ್ಟು ಗೊತ್ತ?

ನ್ಯೂಸ್ ಆ್ಯರೋ‌: ಭಾರತದ ಅತೀ ದೊಡ್ಡ ಖಾಸಗಿ ಪೋರ್ಟ್ ಸಂಸ್ಥೆ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಇಕಾನಮಿಕ್ ಜೋನ್ ಲಿಮಿಟೆಡ್(ಎಪಿಎಸ್‌ಇಜೆಡ್) ತನ್ನ ಮಯನ್ಮಾರ್ ಪೋರ್ಟ್ಸ್ ಮಾರಾಟ ಮಾಡಿದೆ. ಅದಾನಿ ಪೋರ್ಟ್ಸ್ ಮಯನ್ಮಾರ್ ಪೋರ್ಟ್‌ನ ತನ್ನ ಸಂಪೂರ್ಣ ಷೇರನ್ನು ಸುಮಾರು 30 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದೆ. 2022ರ ಮೇಯಲ್ಲೇ ಅದಾನಿ ಪೋರ್ಟ್ಸ್ ಮಯನ್ಮಾರ್ ಲಿಮಿಟೆಡ್‌ ಅನ್ನು ಮಾರಾಟ ಮಾಡುವ ಘೋಷಣೆ ಮಾಡಿತ್ತು.

ಮಯನ್ಮಾರ್‌ನಲ್ಲಿನ ಮಿಲಿಟರಿ ದಂಗೆ, ಜಾಗತಿಕ ಖಂಡನೆ ಮತ್ತು ಯುಎಸ್ ನಿರ್ಬಂಧಗಳಿಗೆ ಕಾರಣವಾದ ಪ್ರತಿಭಟನೆಗಳ ನಡುವೆ ಕಳೆದ ವರ್ಷವೇ ಅದಾನಿ ಪೋರ್ಟ್ಸ್ ಮಯನ್ಮಾರ್ ಲಿಮಿಟೆಡ್ ಮಾರಾಟ ಮಾಡುವುದಾಗಿ ಘೋಷಿಸಿತ್ತು. ಆದರೆ ಹಲವಾರು ಕಾರಣಗಳಿಂದ ಈ ಮಾರಾಟ ಪ್ರಕ್ರಿಯೆ ವಿಳಂಬವಾಗಿ ಒಂದು ವರ್ಷದ ಬಳಿಕ ಈಗ ಪೂರ್ಣಗೊಂಡಿದೆ.

2021ರ ಮೇಯಲ್ಲಿ ಅದಾನಿ ಪೋರ್ಟ್ಸ್ ಕಂಪನಿಯು ಯೋಜನೆಯಲ್ಲಿ 127 ಮಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಇದರಲ್ಲಿ ಭೂಮಿಯನ್ನು ಗುತ್ತಿಗೆಗೆ ಪಡೆಯಲು 90 ಮಿಲಿಯನ್ ಡಾಲರ್ ಮುಂಗಡ ಪಾವತಿಯನ್ನು ಮಾಡಬೇಕಾಯಿತು. ಅದಾನಿ ಪೋರ್ಟ್ಸ್ ಗ್ರೀನ್‌ ಫೀಲ್ಡ್ ಯೋಜನೆ ಮೇಲೆ 195 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.

ಅದಾನಿ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಭಾರೀ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ಆರೋಪ ಮಾಡಿದ ಬಳಿಕ ಸಂಸ್ಥೆಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರಿ ನಷ್ಟ ಉಂಟಾಗಿತ್ತು. ಇದನ್ನು ಕಡಿಮೆ ಮಾಡಲು, ಹೂಡಿಕೆದಾರರ ಭರವಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅದಾನಿ ಸಂಸ್ಥೆಯು ಹಲವು ಕ್ರಮಗಳನ್ನು ಕೈಗೊಳ್ಳುತ್ತ ಬಂದಿದೆ. ಇದೀಗ ಮಯನ್ಮಾರ್ ಪೋರ್ಟ್ಸ್ ಅನ್ನು ಮಾರಾಟ ಮಾಡುತ್ತದೆ ಎಂಬ ಘೋಷಣೆ ಮಾಡಿದ ಬಳಿಕ ಅದಾನಿ ಪೋರ್ಟ್ಸ್ ಷೇರು ಶೇ. 1.2ರಷ್ಟು ಏರಿಕೆಯಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *