ಕರೆಂಟ್ ಬಿಲ್‌ ಪಾವತಿಸಲು ಕಚೇರಿಗೆ ಅಲೆಯಬೇಕಿಲ್ಲ – ಕುಳಿತಲ್ಲೇ ವಾಟ್ಸಾಪ್ ಮೂಲಕ ಬಿಲ್ ಪಾವತಿಸಬಹುದು..!! ವಿವರ ಇಲ್ಲಿದೆ..

ಕರೆಂಟ್ ಬಿಲ್‌ ಪಾವತಿಸಲು ಕಚೇರಿಗೆ ಅಲೆಯಬೇಕಿಲ್ಲ – ಕುಳಿತಲ್ಲೇ ವಾಟ್ಸಾಪ್ ಮೂಲಕ ಬಿಲ್ ಪಾವತಿಸಬಹುದು..!! ವಿವರ ಇಲ್ಲಿದೆ..

ನ್ಯೂಸ್ ಆ್ಯರೋ : ಜಗತ್ತಿನಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ಅಂದರೆ ಅದು ಪಾಟ್ಸಾಪ್. 2009 ರಲ್ಲಿ ಪ್ರಾರಂಭಗೊಂಡ ಈ ಮೆಸೆಜಿಂಗ್ ಅಪ್ಲಿಕೇಶನಿನ ಜನಪ್ರಿಯತೆ ಒಂದಿಂಚೂ ಕಡಿಮೆಯಾಗಿಲ್ಲ ಎಂದರೆ ಅದಕ್ಕೆ ಕಾರಣ ವಾಟ್ಸಾಪ್ ಕಾಲಕ್ಕೆ ತಕ್ಕಂತ ಹೊಚ್ಚ ಹೊಸ ಫೀಚರ್ಸ್ ಗಳನ್ನು ಜಾರಿ ಮಾಡುತ್ತಿದೆ‌. ಇತ್ತೀಚೆಗೆ ಹೊಸ ಫೀಚರ್ಸ್ ಗಳಾದ ಸ್ಟಿಕ್ಕರ್, ವಾಟ್ಸಾಪ್ ಪೇಮೆಂಟ್ ಗಳನ್ನು ಪರಿಚಯಿಸಿದ್ದ ವಾಟ್ಸಾಪ್ ಇದೀಗ ಎಲೆಕ್ಟ್ರಿಸಿಟಿ ಬಿಲ್ ಪಾವತಿಸುವ ಫೀಚರ್ ಪರಿಚಯಿಸಿದೆ‌.

ಹೌದು, ಇದೀಗ ವಾಟ್ಸಾಪ್ ಎಲೆಕ್ಟ್ರಿಸಿಟಿ ಬಿಲ್ ಪಾವತಿಸುವ ಹೊಸ ಫೀಚರ್ಸ್ ಜಾರಿಗೊಳಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜನರು ವಿದ್ಯುತ್ ಬಿಲ್ ಪಾವತಿಸಲು ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ‌‌. ಈಗಾಗಲೇ ಮಧ್ಯಪ್ರದೇಶದಲ್ಲಿ ಜನರು ವಾಟ್ಸಾಪ್ ಮೂಲಕವೇ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಧ್ಯಪ್ರದೇಶದ ಅಧಿಕಾರಿಯೊಬ್ಬರು , ‘ಜನರಿಗೆ ವಾಟ್ಸಾಪ್ ಮೂಲಕ ವಿದ್ಯುತ್ ಬಿಲ್ ಪಾವತಿಸುವ ಫೀಚರ್ಸ್ ಪರಿಚಯವಾದ ನಂತರ ಸಾಕಷ್ಟು ಸಮಯ ಹಾಗೂ ಹಣದ ಉಳಿತಾಯವಾಗುತ್ತಿದೆ, ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಈ ಮಾರ್ಗ ಅನುಸರಿಸಲಾಗಿದೆ’ ಎಂದಿದ್ದಾರೆ.

ವಾಟ್ಸಾಪ್ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?

ವಾಟ್ಸಾಪ್ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಬಳಸುವ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ ನಲ್ಲಿ‌ ಕಂಪೆನಿಯ ಟ್ರೋಲ್ ಫ್ರೀ ನಂಬರ್ 075525512222 ಅನ್ನು ಸೇವ್ ಮಾಡಬೇಕು. ಈ ಸಂಖ್ಯೆಗೆ ಚಾಟ್ ಮಾಡಿದ ನಂತರ ಅಲ್ಲಿರುವ ಆಯ್ಕೆಗಳನ್ನು‌ ಪರಿಶೀಲಿಸಿ ಸರಳವಾಗಿ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ. ಬಿಲ್ ಪಾವತಿಯ ನಂತರ ದೃಢೀಕರಣದ ಮೆಸೇಜ್ ಕೂಡ ನಿಮ್ಮ ವಾಟ್ಸಾಪ್ ಗೆ ಬರಲಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *